ಧ್ವಜದ ಪೈಪ್‌ಗೆ ವಿದ್ಯುತ್ ತಂತಿ ತಗುಲಿ ಓರ್ವ ಸ್ಥಳದಲ್ಲೇ ಸಾವು

| Published : Dec 27 2024, 12:46 AM IST

ಧ್ವಜದ ಪೈಪ್‌ಗೆ ವಿದ್ಯುತ್ ತಂತಿ ತಗುಲಿ ಓರ್ವ ಸ್ಥಳದಲ್ಲೇ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಧ್ವಜಸ್ತಂಭ ನಿರ್ಮಾಣದ ವೇಳೆ ಧ್ವಜದ ಪೈಪ್ ಗೆ ವಿದ್ಯುತ್ ತಂತಿಗೆ ತಗುಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ತೀವ್ರವಾದ ಗಾಯಗಳಾದ ಘಟನೆ ತಾಲೂಕಿನ ಘಾಳಪೂಜಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ (ವಿಎಸ್‌ಎಸ್) ಎದುರು ಡಿ. 25ರಂದು ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬ್ಯಾಡಗಿ: ಧ್ವಜಸ್ತಂಭ ನಿರ್ಮಾಣದ ವೇಳೆ ಧ್ವಜದ ಪೈಪ್ ಗೆ ವಿದ್ಯುತ್ ತಂತಿಗೆ ತಗುಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ತೀವ್ರವಾದ ಗಾಯಗಳಾದ ಘಟನೆ ತಾಲೂಕಿನ ಘಾಳಪೂಜಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ (ವಿಎಸ್‌ಎಸ್) ಎದುರು ಡಿ. 25ರಂದು ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತನನ್ನು ಅದೇ ಗ್ರಾಮದ ಶಂಕ್ರಪ್ಪ ಜಾಡರ (43) ಎಂದು ಗುರ್ತಿಸಲಾಗಿದೆ.

ಈತ ವಿಎಸ್‌ಎಸ್ ಬ್ಯಾಂಕ್‌ನ ಹೊಸ ಕಟ್ಟಡ ನಿರ್ಮಿಸಿದ್ದಾನೆ. ಬರುವ ಡಿ. 28ರಂದು ಉದ್ಘಾಟನೆ ಕಾರ್ಯಕ್ರಮವಿದ್ದು, ಕಟ್ಟಡದ ಮಂಭಾಗದಲ್ಲಿ ಧ್ವಜ ಸ್ತಂಭ ನಿರ್ಮಾಣದ ವೇಳೆ ಈ ಅವಘಡ ಸಂಭವಿಸಿದೆ. ಬ್ಯಾಂಕ್ ಎದುರು ಧ್ವಜದ ಕಟ್ಟೆ ನಿರ್ಮಾಣವಾಗಿದ್ದು ಪೈಪ್ ಅಳಡಿಸುವ ಕೆಲಸವಷ್ಟೇ ಬಾಕಿ ಉಳಿದಿತ್ತು. ಅದನ್ನು ಪೂರ್ಣಗೊಳಿಸುವ ಭರದಲ್ಲಿ ಮೇಲಿದ್ದ ಸರ್ವಿಸ್ ಲೈನ್ ಕಬ್ಬಿಣದ ಪೈಪ್‌ಗೆ ತಗುಲಿದ್ದು ಕಂಬವನ್ನು ಹಿಡಿದಿದ್ದ ಮೂವರಲ್ಲಿ ಇಬ್ಬರು ಸ್ಥಳದಲ್ಲೇ ಮೂರ್ಛೆ ಹೋಗಿ ನೆಲಕ್ಕುರುಳಿದ್ದಾರೆ. ಆದರೆ ದುರ್ದೈವವಶಾತ್ ಶಂಕ್ರಪ್ಪ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಘಟನೆ ಕುರಿತು ಮೃತ ಶಂಕ್ರಪ್ಪನ ಪತ್ನಿ ಕವಿತಾ ಜಾಡರ ಕಾಗಿನೆಲೆ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.