ಸಾರಾಂಶ
ರಾಮಪ್ರಸಾದ್ ಗಾಂಧಿ ಹಂಪಿ
ಹಂಪಿ ಉತ್ಸವದಲ್ಲಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಕಲಾವಿದರಿಂದ ಮನರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಡಗಲಿ ಇಟಗಿಯ ಕಲ್ಲೇಶ್ವರ ಟ್ರಸ್ಟ್ ವತಿಯಿಂದ ಭಜನೆ ಪದಗಳು, ಹೊಸಪೇಟೆಯ ಭರತನಾಟ್ಯ ಸಾಂಸ್ಕೃತಿಕ ಕಲಾ ಟ್ರಸ್ಟ್ ನಟರಾಜ ರವರಿಂದ ಭರತನಾಟ್ಯ, ಹೊಸಪೇಟೆಯ ದೇವೀರಮ್ಮ ಚೌಕಿ ಮಠ ಮತ್ತು ತಂಡದವರ ಸುಗಮ ಸಂಗೀತ,
ಬೆಂಗಳೂರಿನ ನಾಟ್ಯೇಶ್ವರ ನೃತ್ಯ ಶಾಲೆಯ ಕೆ.ಪಿ. ಸತೀಶ್ ಬಾಬು ಮತ್ತು ತಂಡದವರ ನೃತ್ಯ, ಹೊಸಪೇಟೆಯ ಗೀತಾ ಕಾಶೆಟ್ಟಿ ಮತ್ತು ತಂಡದವರ ಶಾಸ್ತ್ರೀಯ ಸಂಗೀತ, ಬೆಂಗಳೂರು ಮುನೇಶ್ವರ ಬ್ಲಾಕ್‌ನ ನಾಗೇಶ್ ಪಿ,ಮತ್ತು ತಂಡದವರ ಭರತ ನಾಟ್ಯ, ಕೊಟ್ಟೂರಿನ ಶಂಕ್ರಾಚಾರಿ ಮತ್ತು ತಂಡದವರ ಸುಗಮ ಸಂಗೀತ,
ಶ್ರೀ ಗುರು ಪುಟ್ಟರಾಜ ಸಂಗೀತ ವಿದ್ಯಾಲಯ ಹುಬ್ಬಳ್ಳಿಯ ಅಶ್ವಿನಿ ಉಳ್ಳಿಕಾಶಿಯವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಗಂಗಾವತಿಯ ಪಿ. ಶ್ರೀದೇವಿ ಮತ್ತು ತಂಡದವರಿಂದ ಭರತನಾಟ್ಯ, ಹೊಸಪೇಟೆ ಸಾಧ್ಯ ಟ್ರಸ್ಟ್ ಫಾರ್ ಸೋಷಿಯಲ್ ಡೆವಲ್ಪಮೆಂಟನ್ ಆರತಿ ಕೆ.ಟಿ ಅವರಿಂದ ನೃತ್ಯರೂಪಕ, ಕೊಪ್ಪಳದ ಮಂಜುನಾಥ ವಾಲಿಕಾರ ಮತ್ತು ತಂಡದ ಶಾಸ್ತ್ರೀಯ ಸಂಗೀತ,
ಕುರುಗೋಡಿನ ಜೀವನ್ ಡ್ಯಾನ್ಸ್ ಕಲಾ ಪೋಷಕ ತಂಡದ ನೃತ್ಯ, ಕೊಪ್ಪಳದ ಪರಶುರಾಮ ಕೆ. ಬಂಡಾರ್ ಮತ್ತು ತಂಡದ ಸುಗಮ ಸಂಗೀತ, ಬೆಂಗಳೂರು ಯಲಹಂಕದ ವಿದೂಷಿ ದೀಕ್ಷಾ ಎನ್.ಪಿ. ಮತ್ತು ತಂಡದವರ ಭರತನಾಟ್ಯ, ಕೊಪ್ಪಳದ ಶಿವರಾಯಪ್ಪ ಹೀರೆಸಿಂದೋಗಿ ಮತ್ತು ತಂಡದವರ ಶಹನಾಯಿ ವಾದನ, ಹೊಸಪೇಟೆಯ ಶಾಲಿನಿ ಮತ್ತು ತಂಡದವರ ಭರತನಾಟ್ಯ,
ಹೊಸಪೇಟಯ ಭೀಮಪ್ಪ ದೇವರಮನಿ ಮತ್ತು ತಂಡದವರ ಲಾವಣಿ ಪದ ತೊರಣಗಲ್ಲಿನ ನಾಗವೇಣಿ ಕುಲಕರ್ಣಿ ಮತ್ತು ತಂಡದವರ ಭರತನಾಟ್ಯ, ಮೈಸೂರು ಕುವೆಂಪು ನಗರದ ರವಿರಾಜ ಮತ್ತು ತಂಡದ ಸುಗಮ ಸಂಗೀತ, ಮರಿಯಮ್ಮನ ಹಳ್ಳಿಯ ಅಮೂಲ್ಯ ಕೆ.ಮತ್ತು ತಂಡದವರ ಭರತನಾಟ್ಯ,
ಕುಷ್ಟಗಿ ಹನುಮಸಾಗರದ ವಿನೋದ ಭಗೀರತ ಪಾಟೀಲ್ ಮತ್ತು ತಂಡದವರ ಸಂಗೀತ ಕಾರ್ಯಕ್ರಮ, ಬಳ್ಳಾರಿ ಕೊರ್ಲಗುಂದಿ ಗ್ರಾಮದ ಕುಮಾರಿ ಹಿಮಾ ಬಿಂದು ಮತ್ತು ತಂಡದವರ ಗಾಂಧಾರ ಕಲೆ ಪ್ರದರ್ಶನ, ಹೂವಿನಹಡಗಲಿಯ ಕೆ.ವನಜಾಕ್ಷಿ ಮತ್ತು ತಂಡದವರ ವಚನ ಗಾಯನ,
ಹೊಸಪೇಟೆ ಕಡ್ಡಿರಾಂಪುರದ ಯೋಗಕಲಾ ಮತ್ತು ಸಾಂಸ್ಕೃತಿಕ ಸಂಘದ ಪ್ರಶಾಂತ ರೆಡ್ಡಿಯವರಿಂದ ಯೋಗ ಪ್ರದರ್ಶನ, ಗಂಗಾವತಿ ವಡ್ಡರಹಟ್ಟಿಯ ಶಿವಪ್ಪ ಹುಳ್ಳಿ ಮತ್ತು ತಂಡದವರ ಸುಗಮ ಸಂಗೀತ, ಹೊಸಪೇಟೆಯ ರವಿ ಹಡಪದ ಮತ್ತು ತಂಡವದರ ಜಾನಪದ ಗೀತೆಗಳು ಹಾಗೂ ಗಂಗಾವತಿಯ ಕುಮಾರಿ ರಂಜನಿ ಆರತಿ ಮತ್ತು ತಂಡದವರ ಸುಗಮ ಸಂಗೀತ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆದವು.