ಶ್ರೀಗಳ ಅಪರೂಪದ ಪೋಟೊಗಳ ಪ್ರದರ್ಶನ

| Published : Jan 02 2024, 02:15 AM IST

ಸಾರಾಂಶ

ಕಲಾವಿದ ಪಿ.ಎಸ್. ಕಡೇಮನಿಯವರು ತಮ್ಮದೇ ರೀತಿಯಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಶ್ರೀಗಳ 14 ವಯಸ್ಸಿನಿಂದ ಹಿಡಿದ ಜೀವಿತಾವಧಿಯ ಅಪರೂಪದ ಫೋಟೋಗಳನ್ನು ಅವರು ಪ್ರದರ್ಶನ ಮಾಡಿದರು.

ವಿಜಯಪುರ: ಕಲಾವಿದ ಪಿ.ಎಸ್. ಕಡೇಮನಿಯವರು ತಮ್ಮದೇ ರೀತಿಯಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಶ್ರೀಗಳ 14 ವಯಸ್ಸಿನಿಂದ ಹಿಡಿದ ಜೀವಿತಾವಧಿಯ ಅಪರೂಪದ ಫೋಟೋಗಳನ್ನು ಅವರು ಪ್ರದರ್ಶನ ಮಾಡಿದರು. ಅವರು ಸಂಗ್ರಹಿಸಿರುವ ಸಾವಿರಾರು ಪೋಟೋಗಳಲ್ಲಿ ಆಯ್ದ 45 ಫೋಟೋಗಳನ್ನು ಅವರು ಪ್ರದರ್ಶನ ಮಾಡಿದರು. ಗುರುವಂದನೆ ಕಾರ್ಯಕ್ರಮಕ್ಕೆ ಬಂದ ಭಕರ ಗಮನ ಸಿದ್ದೇಶ್ವರ ಶ್ರೀಗಳ ಅಪರೂಪದ‌ ಭಾವಚಿತ್ರಗಳು ಸೆಳೆದವು. ಸಿದ್ದೇಶ್ವರ ಶ್ರೀ ಹಾಗೂ ಅವರ ಗುರುಗಳು ಮಲ್ಲಿಕಾರ್ಜುನ ಶಿವಯೋಗಿಗಳ 5 ಸಾವಿರ ಪೋಟೊ ಸಂಗ್ರಹಣೆಯನ್ನು ಕಲಾವಿದ ಕಡೆಮನಿ ಮಾಡಿದ್ದಾರೆ.