ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಪೊಲೀಸರ ಪ್ರಶಂಸೆ

| Published : Feb 17 2025, 12:33 AM IST

ಸಾರಾಂಶ

ನಗರದಲ್ಲಿ ಫೆ.15ರಂದು ಆಟೋ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗನ್ನು ಆಜಾದ್ ನಗರ ಪೊಲೀಸ್ ಠಾಣೆ ಪೊಲೀಸರು ವಾರಸುದಾರರನ್ನು ಪತ್ತೆಹಚ್ಚಿ, ಬ್ಯಾಗ್‌ ಹಿಂದಿರುಗಿಸಿದರು.

ದಾವಣಗೆರೆ: ನಗರದಲ್ಲಿ ಫೆ.15ರಂದು ಆಟೋ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗನ್ನು ಆಜಾದ್ ನಗರ ಪೊಲೀಸ್ ಠಾಣೆ ಪೊಲೀಸರು ವಾರಸುದಾರರನ್ನು ಪತ್ತೆಹಚ್ಚಿ, ಬ್ಯಾಗ್‌ ಹಿಂದಿರುಗಿಸಿದರು.

ಆವರಗೆರೆ ನಿವಾಸಿ ಆಟೋ ಚಾಲಕ ಮಂಜುನಾಥ್ ಆಟೋದಲ್ಲಿ ಕಕ್ಕರಗೊಳ್ಳದ ಸುನೀಲ್ ಎಂಬವರು ಪ್ರಯಾಣಿಸಿದ್ದರು. ಆಟೋದಿಂದ ಇಳಿಯುವಾಗ ತಮ್ಮ ಬ್ಯಾಗ್‌ ಮರೆತುಹೋಗಿದ್ದರು. ಸುನೀಲ್‌ ಅವರ ವಿಳಾಸ ಪತ್ತೆಹಚ್ಚಿದ ಪೊಲೀಸರು ಅವರನ್ನು ಠಾಣೆಗೆ ಕರೆಸಿ, ಆಟೋ ಚಾಲಕರ ಸಮ್ಮುಖ ಬ್ಯಾಗ್‌ ಹಸ್ತಾಂತರಿಸಿದರು. ಪ್ರಾಮಾಣಿಕತೆ ಮೆರೆದ ಆಟೋ ಚಾಲಕರ ಸೇವೆಯನ್ನು ಪ್ರಶಂಸಿಸಲಾಯಿತು.

ಪಿಎಸ್‌ಐಗಳಾದ ಇಮ್ತಿಯಾಜ್, ಮಹಮ್ಮದ್ ಅಲ್ತಾಫ್ ಹಾಗೂ ಸಿಬ್ಬಂದಿ ಆಟೋ ಚಾಲಕ ಮಂಜುನಾಥ್ ಪ್ರಾಮಾಣಿಕತೆ ಶ್ಲಾಘಿಸಿ, ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಿದರು.

- - - (** ಈ ಪೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-15ಕೆಡಿವಿಜಿ32:

ದಾವಣಗೆರೆಯಲ್ಲಿ ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗು ಇತರೆ ವಸ್ತುಗಳನ್ನು ಅಜಾದ್ ನಗರ ಪೊಲೀಸರು ಆಟೋ ಚಾಲಕನ ಉಪಸ್ಥಿತಿಯಲ್ಲಿ ವಾರಸುದಾರರಿಗೆ ಹಸ್ತಾಂತರಿಸಿದರು.