ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಯುವ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಕಾಂಗ್ರೆಸ್ ಪಕ್ಷದ ಎಲ್ಲ ಹಿರಿಯರ ಮಾರ್ಗದರ್ಶನ ಮತ್ತು ಮುಖಂಡರ ಬೆಂಬಲ ಆಶೀರ್ವಾದದೊಂದಿಗೆ ನಾನು ಮುಂದೊಂದು ದಿನ ಮುಂಚೂಣಿ ಸ್ಥಾನ ಪಡೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ, ಮತಕ್ಷೇತ್ರಕ್ಕೆ, ದೇಶಕ್ಕೆ ಒಳ್ಳೆಯ ಹೆಸರು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ ಆರ್.ತಿಮ್ಮಾಪೂರ ಹೇಳಿದರು.ಮುಧೋಳ-ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್ ಸಮಿತಿ ಹಾಗೂ ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರ ಸಂಜೆ ಸ್ಥಳೀಯ ಕತ್ತಿ ಕಲ್ಯಾಣ ಮಂಟಪದ ಹೋರಾಂಗಣದಲ್ಲಿ ಆಯೋಜಿಸಲಾಗಿದ್ದ 30ನೇ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಕಾಂಗ್ರೆಸ್ ಕಾರ್ಯಕರ್ತರ ಸಹಾಯ, ಸಹಕಾರ, ಪ್ರೊತ್ಸಾಹ ಮತ್ತು ಬೆಂಬಲದ ಜತೆಗೆ ನನಗೆ ಸಾಂದರ್ಭಿಕವಾಗಿ ಹಣಕಾಸಿನ ಸಹಾಯ ಮಾಡಿರುವ ಸರ್ವರಿಗೂ ನಾನು ಈ ವೇದಿಕೆಯ ಮೂಲಕ ಅಭಿನಂದಿಸುತ್ತೇನೆ ಎಂದರು.ನಾನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿ 2016ಕ್ಕೆ ಮುಧೋಳಕ್ಕೆ ಬಂದೆ, ನಾನು ಇಲ್ಲಿಗೆ ಬಂದ ನಂತರ ಸಮಾನ ಮನಸ್ಕರ ಗೆಳೆಯರ ಜೊತೆ ಸೇರಿಕೊಂಡು ವಿವಿಧ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ ನಂತರ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡೆ. ಪ್ರಸ್ತುತ ಕರ್ನಾಟಕ ರಾಜ್ಯ ಯುಥ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ತಂದೆಯವರ ಆಶೀರ್ವಾದ, ಮಾರ್ಗದರ್ಶನ, ಸಲಹೆ, ಸೂಚನೆಗಳಂತೆ ಪ್ರತಿ ಹೆಜ್ಜೆಯನ್ನು ಇಡುತ್ತ ಬಂದಿದ್ದೇನೆ ಎಂದು ತಿಳಿಸಿದರು.ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ನಾನು ಶಾಸಕನಾಗಲು, ಸಚಿವನಾಗಲು ಮುಧೋಳ ಮತಕ್ಷೇತ್ರದ ಜನರು ನನಗೆ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದದಿಂದ ನಾನು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯವಾಯಿತು. ಅವರ ಋಣವನ್ನು ನಾನಾಗಲಿ, ನನ್ನ ಕುಟುಂಬದವರಾಗಲಿ ಎಂದಿಗೂ ಮರೆಯುವುದಿಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸದಾಸಿದ್ಧನಿದ್ದೇನೆ ಎಂದರು.ಮುಧೋಳ ಗವಿಮಠ-ವಿರಕ್ತಮಠದ ಶ್ರೀಗಳು, ಬಬಲಾದಿ ಚಕ್ರವರ್ತಿ ಸಿದ್ಧರಾಮ ದೇವರು ಸಾನ್ನಿಧ್ಯ ವಹಿಸಿದ್ದರು. ಸಚಿವ ಆರ್.ಬಿ.ತಿಮ್ಮಾಪೂರ ಅವರ ಪತ್ನಿ ಶಶಿಕಲಾ, ಸಹೋದರಿ ಕವಿತಾ, ಸಹೋದರರಾದ ಶಂಕರ, ಹೆಬ್ಬಾಳಪ್ಪ, ಹಣಮಂತ, ಕಾಂಗ್ರೆಸ್ ಮುಖಂಡರಾದ ಎಲ್.ಎಸ್.ತಳೇವಾಡ, ಉದಯಕುಮಾರ ಸಾರವಾಡ, ವೆಂಕಣ್ಣ ಗಿಡಪ್ಪನವರ, ಮಹಾಂತೇಶ ಮಾಚಕನೂರ, ರಾಜೂಗೌಡ ನ್ಯಾಮಗೌಡ, ರಾಜು ಬಾಗವಾನ, ಗಿರೀಶ ಲಕ್ಷಾಣಿ, ಸುಧಾಕರ ಸಾರವಾಡ, ಸಂಜಯ ನಾಯಕ, ವೆಂಕಣ್ಣ ಗಿಡಪ್ಪನವರ, ರಾಜೂಗೌಡ ಪಾಟೀಲ, ಗೀರೀಶಗೌಡ ಪಾಟೀಲ, ಗೋವಿಂದಪ್ಪ ಗುಜ್ಜನವರ, ಅಶೋಕ ಕಿವಡಿ, ಕಲ್ಮೇಶ ಸಾರವಾಡ, ನಾರಾಯಣ ಹವಾಲ್ದಾರ, ವಿಠ್ಠಲ ಹವಡಿ, ದಾನೇಶ ತಡಸಲೂರ, ಬಸವರಾಜ ಜಮಖಂಡಿ, ಸಂಜಯ ತಳೇವಾಡ, ಬಸವರಾಜ ಬಳಿಗಾರ, ಪರಮಾನಂದ ಕುಟರಟ್ಟಿ, ಮುದಕಣ್ಣ ಅಂಬಿಗೇರ, ಎಸ್.ಪಿ.ದಾನಪ್ಪಗೋಳ, ಚಿನ್ನು ಅಂಬಿ, ರಾಘು ಮೋಕಾಸಿ, ಹೆಚ್.ಎ.ಕಡಪಟ್ಟಿ, ಸಂಗಣ್ಣ ಸೋರಗಾಂವಿ, ಸದೂಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ
30ನೇ ಹುಟ್ಟಹಬ್ಬದ ಅಂಗವಾಗಿ ರಕ್ತದಾನ ಮತ್ತು ಆರೋಗ್ಯ ತಪಾಸಣೆ ಶಿಬಿರ ಹಾಗೂ ವಿವಿಧ ಮಸೀದಿ ಮಂದಿರಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾವಿರಾರು ಸಂಖ್ಯೆಯ ಅಭಿಮಾನಿಗಳು ವಿನಯ ಆರ್.ತಿಮ್ಮಾಪೂರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.2023ರ ಚುನಾವಣೆಯಲ್ಲಿ ನನ್ನ ತಂದೆಯ ಗೆಲುವಿಗೆ ಯುವ ಕಾಂಗ್ರೆಸ್ ಪಡೆಯು ಸಂಪೂರ್ಣ ಬೆಂಬಲ ನೀಡಿದ್ದರಿಂದಲೇ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು. ಅದಕ್ಕಾಗಿ ನನ್ನ ತಂದೆಯವರ ಪರವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
-ವಿನಯ ಆರ್.ತಿಮ್ಮಾಪೂರ, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ.