ಅಂಬೇಡ್ಕರ್ ಚಿಂತನೆಗೆ ಪ್ರಾಮಾಣಿಕ ಸ್ಪಂದನೆ ಅಗತ್ಯ

| Published : Apr 30 2024, 02:09 AM IST

ಸಾರಾಂಶ

ಶತಮಾನಗಳ ಶೋಷಣೆಯಿಂದ ಅಸ್ಪೃಶ್ಯ ಜನರಿಗೆ ನ್ಯಾಯ ದೊರಕಿಸಲು ಶ್ರಮಿಸಿದ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ತತ್ವಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ.

ಹುಬ್ಬಳ್ಳಿ:

ಶತಮಾನಗಳ ಶೋಷಣೆಯಿಂದ ಅಸ್ಪೃಶ್ಯ ಜನರಿಗೆ ನ್ಯಾಯ ದೊರಕಿಸಲು ಶ್ರಮಿಸಿದ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ತತ್ವಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಅಖಿಲ ಭಾರತ ಕೆನರಾ ಬ್ಯಾಂಕ್ ಪರಿಶಿಷ್ಟ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಗುರುಸ್ವಾಮಿ ಹೇಳಿದರು.ಅವರು ಸೋಮವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ನೌಕರರ ಸಮಾವೇಶ ಉದ್ಘಾಟಿಸಿ ಮಾತನಾಡಿ, 1979ರಲ್ಲಿ ಕಾರ್ಮಿಕ ಧುರೀಣ ಎಫ್.ಎಚ್. ಜಕ್ಕಪ್ಪನವರ ಸ್ಥಾಪಿಸಿದ ಸಂಘಟನೆ ಇದಾಗಿದ್ದು, ಕಳೆದ 45 ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರಿಶಿಷ್ಟರ ಹಿತಾಶಕ್ತಿ ಕಾಪಾಡಲು ಶ್ರಮಿಸುತ್ತಿದೆ ಎಂದರು.

2009ರಿಂದ 2016ರ ವರೆಗೆ ಪದೋನ್ನತಿ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿ ಜಕ್ಕಪ್ಪನವರ ಸಂಸದ ಶ್ರೀನಿವಾಸ ಪ್ರಸಾದ ಹಾಗೂ ಇನ್ನುಳಿದ 40 ಜನ ಪರಿಶಿಷ್ಟ ಜಾತಿಯ ಸಂಸದರ ಸಹಕಾರ ಮತ್ತು ಇನ್ನೋರ್ವ ಕಾರ್ಮಿಕ ಧುರೀಣ ಕಾ. ಕೆ.ಎಸ್. ಬದಲಿಯಾರ ನೆರವಿನಿಂದ ಮೀಸಲಾತಿ ಬಡ್ತಿಗೆ ಮಾಡಿದ ಹೋರಾಟ ಕುರಿತು ಸಮಾವೇಶದಲ್ಲಿ ಮಾಹಿತಿ ನೀಡಿದರು.

ಬ್ಯಾಂಕಿನ ಹಿರಿಯ ಅಧಿಕಾರಿ ಕಾರ್ತಿಕ ಮಾತನಾಡಿ, ನೌಕರರು ಸಂಘಟನೆಯ ಜತೆಗೆ ಬ್ಯಾಂಕಿನ ಆರ್ಥಿಕ ಪ್ರಗತಿಗೆ ಶ್ರಮಿಸಲು ಕರೆ ನೀಡಿದರು.

ಈ ವೇಳೆ ಅಧಿಕಾರಿಗಳಾದ ಬಾಲಕೃಷ್ಣ, ಶಿವಪುತ್ರಪ್ಪ ಪಡಸಲಮನಿ, ಎಂ.ಎನ್. ಕ್ಯಾಸನೂರ, ಎನ್.ಎಚ್. ನರೇಗಲ್, ಸಿ.ಎಂ. ಚನಬಸಪ್ಪ, ಕಾರ್ಮಿಕ ಮುಖಂಡ ರಮೇಶ ಜೈಕಾರ, ಸಂದೀಪ ಮೇತ್ರಿ, ರಾಜೀವ ಕೊಡಗಿ, ಅಂಕುಶ ಕಿಲ್ಲೆ, ಗೋವಿಂದ ಸೇರಿದಂತೆ ಹಲವರಿದ್ದರು.