ಸಾರಾಂಶ
ರಸ್ತೆಯಲ್ಲಿ ಸಿಕ್ಕ ಹಣವನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ವಿದ್ಯಾರ್ಥಿಯೊಬ್ಬ ಪ್ರಾಮಾಣಿಕತೆ ಮೆರದಿದ್ದಾನೆ.
ಸಂಕೇಶ್ವರ: ರಸ್ತೆಯಲ್ಲಿ ಸಿಕ್ಕ ಹಣವನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ವಿದ್ಯಾರ್ಥಿಯೊಬ್ಬ ಪ್ರಾಮಾಣಿಕತೆ ಮೆರದಿದ್ದಾನೆ. ಮಹಾರಾಷ್ಟ್ರದ ಆಜರಾ ತಾಲೂಕಿನ ದೇವಕಾನಗಾವ್ ಗ್ರಾಮದ ಯುವಕ ಅಜಿಂಕ್ಯಾ ದೇಸಾಯಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ.
ಸಂಕೇಶ್ವರ ಪಟ್ಟಣದ ಮಹಾತ್ಮ ಗಾಂಧಿ ಕಾನೂನು ಕಾಲೇಜುನಲ್ಲಿ ಓದುತ್ತಿರುವ ಈತ ಪಟ್ಟಣದ ರಾಣಿ ಚನ್ನಮ್ಮ ಸರ್ಕಲ್‌ನಲ್ಲಿ ತೆರಳುತ್ತಿದ್ದಾಗ ₹16,900 ಹಣ ಸಿಕ್ಕಿದೆ.
ನಂತರ ಹಣದ ಮಾಲೀಕರು ಯಾರೆಂದು ವಿಚಾರಿಸಿದ್ದು. ಬಳಿಕ ಅವರು ಸಿಕ್ಕ ನಂತರ ಅವರಿಗೆ ಹಣವನ್ನು ವಾಪಸ್ ನೀಡಿದ್ದಾನೆ. ಕೇಸ್ತಿ ಗ್ರಾಮದ ಮಹಿಳೆ ಹಣ ಕಳೆದುಕೊಂಡ ಮಹಿಳೆ. ನಡೆದುಕೊಂಡು ಹೋಗುವಾಗ ಹಣವನ್ನು ಕಳೆದುಕೊಂಡು ಆ ಮಹಿಳೆ ಕಂಗಾಲಾಗಿದಳು. ಅವಳಿಗೆ ತಮ್ಮ ಹಣವನ್ನು ಮರಳಿಸಿದಕ್ಕೆಅಜಿಂಕ್ಯಾ ದೇಸಾಯಿ ಹಾಗೂ ಆತನ ಸ್ನೇಹಿತ ಸಾಮ್ರಾಟ್ ಟಿಕೆ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮರಳಿ ಸಿಕ್ಕ ಹಣವನ್ನು ಪಡೆದ ಮಹಿಳೆ ಧನ್ಯವಾದ ಹೇಳಿದ್ದಾಳೆ.02ಎಸ್ ಎನ್ ಕೆ01