ಸಾರಾಂಶ
ಚನ್ನಪಟ್ಟಣ: ವೃದ್ಧೆಯ ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿದೆ.
ಚನ್ನಪಟ್ಟಣ: ವೃದ್ಧೆಯ ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿದೆ. ತಾಲೂಕಿನ ತೊರೆಹೊಸೂರು ಗ್ರಾಮದ ಭಾಗ್ಯಮ್ಮ(72) ಚಿನ್ನದ ಸರ ಕಳೆದುಕೊಂಡ ವೃದ್ಧೆ. ಏಳಗಳ್ಳಿ ಗ್ರಾಮದಲ್ಲಿರುವ ತಮ್ಮ ಮಗಳ ಮನೆಗೆ ಹೋಗಲು ವೃದ್ಧೆ ತೊರೆಹೊಸೂರು ಗ್ರಾಮದಿಂದ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದಾರೆ. ಬಸ್‌ನ ನೂಕುನುಗ್ಗಲಿನಲ್ಲಿ ಯಾರೋ ಇವರನ್ನು ನೂಕಿದಂತಾಗಿದ್ದು, ಬಸ್ ಹತ್ತಿದ ನಂತರ ಇವರು ತಮ್ಮ ಕುತ್ತಿಗೆ ನೋಡಿಕೊಂಡಾಗ 30 ಗ್ರಾಂ ಚಿನ್ನದ ಸರ ಕಳವಾಗಿರುವುದು ಗಮನಕ್ಕೆ ಬಂದಿದೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.