ಸಾರಾಂಶ
ಕೊಪ್ಪ ಆಕಸ್ಮಾತ್ ಕಾಲುಜಾರಿ 60 ಅಡಿ ಬಾವಿಗೆ ಬಿದ್ದಿದ್ದ ವೃದ್ಧೆ ಬದುಕುಳಿದಿರುವ ಘಟನೆ ತಾಲೂಕಿನ ಅಂದಗಾರಿನ ಮರಿತೊಟ್ಲು ಗ್ರಾಮದಲ್ಲಿ ನಡದಿದೆ.
ಕೊಪ್ಪ : ಆಕಸ್ಮಾತ್ ಕಾಲುಜಾರಿ 60 ಅಡಿ ಬಾವಿಗೆ ಬಿದ್ದಿದ್ದ ವೃದ್ಧೆ ಬದುಕುಳಿದಿರುವ ಘಟನೆ ತಾಲೂಕಿನ ಅಂದಗಾರಿನ ಮರಿತೊಟ್ಲು ಗ್ರಾಮದಲ್ಲಿ ನಡದಿದೆ.
ತಾಲೂಕಿನ ಅಂದಗಾರಿನ ಮರಿತೊಟ್ಲು ಗ್ರಾಮದಲ್ಲಿ ಸೋಮವಾರ ಸುಮಾರು 80 ವರ್ಷ ವಯಸ್ಸಿನ ಕಮಲಮ್ಮ ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಾಗ ಆ ವೃದ್ಧೆ ಬಾವಿಯೊಳಗಿನ ಪೈಪ್ ಹಿಡಿದು ನೀರಿನಲ್ಲಿ ಮುಳುಗದಂತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾವು ಬದುಕಿನ ನಡುವೆ ಹೋರಾಡಿದ್ದರು.
ಸ್ಥಳಿಯರಿಂದ ವಿಚಾರ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರಕ್ಪ್ರವೃತ್ತರಾಗಿ ಬಾವಿಗಿಳಿದು ವೃದ್ಧೆಯ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
ಅಗ್ನಿಶಾಮಕ ದಳದ ಠಾಣಾಧಿಕಾರಿ ಎಮ್.ಓ. ಜೋಸ್ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ರಾಜು ಮೊಗವೀರ, ಗುರುನಾಥ ಲಮಾಣಿ, ಮಲ್ಲೇಶ ಹೊಟ್ಟಿ, ಮನೊಹರ ರಾಠೋಡ್ ಚಾಲಕ ವಿಶ್ವನಾಥ ಲೋಗಾವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಚಿಕಿತ್ಸೆಗಾಗಿ ವೃದ್ಧೆಯನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿತ್ತು.