ಸಾರಾಂಶ
ಕನ್ನಡಪ್ರಭ ವಾರ್ತೆ ಆನವಟ್ಟಿ ನನಗೆ ಯಾರನ್ನು ದ್ವೇಷ ಮಾಡುವ ಅಭ್ಯಾಸವಿಲ್ಲ. ಚನ್ನಾಗಿದ್ದ ರಂಗಮಂದಿರವನ್ನು ಹೊಸದಾಗಿ ಕಟ್ಟುತ್ತೇವೆ ಎಂದು ಸುಳ್ಳು ಹೇಳಿ ಕೆಡುವಿದ್ದನ್ನು ದ್ವೇಷ ಮಾಡುತ್ತೇನೆ. ಆದಷ್ಟು ಬೇಗ ದೊಡ್ಡ ಪ್ರಮಾಣದಲ್ಲಿ ನಿವೃತ್ತ ಪ್ರಾಂಶುಪಾಲ ಎಚ್.ಜಯಪ್ಪ ಅವರ ಹೆಸರಲ್ಲೇ ಬಯಲು ರಂಗಮಂದಿರ ಕಟ್ಟುತ್ತೇವೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಭರವಸೆ ನೀಡಿದರು.
ಮಂಗಳವಾರ ಆನವಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (ಕಾಲೇಜು ವಿಭಾಗ) ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಸರ್ಕಾರ ಎಲ್ಲ ಸವಲತ್ತುಗಳನ್ನು ಒದಗಿಸುತ್ತದೆ. ಅದನ್ನು ಮುಂದೆ ನಿಂತು ಸಮರ್ಥವಾಗಿ ಮಕ್ಕಳಿಗೆ ತಲುಪಿಸಿ, ಗುಣಮಟ್ಟದ ಶಿಕ್ಷಣ ನೀಡಲು ಒಬ್ಬ ಮಹಾನ್ ಗುರು ಬೇಕು. ಆ ಮಹಾನ್ ಗುರುವೇ ಜಯಪ್ಪನವರು. ಅವರ ಸುದೀರ್ಘ ಸೇವೆಯಿಂದ ದೊಡ್ಡ ಸಂಸ್ಥೆಯಾಗಿ ಈ ಕಾಲೇಜು ಬೆಳೆದಿದೆ ಎಂದು ಜಯಪ್ಪ ಅವರ ಸೇವೆಯನ್ನು ಶ್ಲಾಘಿಸಿದರು.
ಕಾಲೇಜು ಮತ್ತು ಪ್ರೌಢಶಾಲೆ ತರಗತಿಗಳು ಕೊಠಡಿ ಸಮಸ್ಯೆಯಿಂದ ಮುಂಜಾನೆ ಮತ್ತು ಮಧ್ಯಾಹ್ನ ಸಿಫ್ಟ್ ಪದ್ಧತಿಯಲ್ಲಿ ನಡೆಯುತ್ತಿವೆ. ಒಂದೇ ವೇಳೆಗೆ ತರಗತಿ ನಡೆಸಲು ಅನುಕೂಲ ಆಗುವಂತೆ ಅವಶ್ಯವಿರುವ 22 ಕೊಠಡಿಗಳು, ಶೌಚಾಲಯಗಳು, ಗ್ರಂಥಾಲಯ, ಶಿಕ್ಷಕರು ಹಾಗೂ ಉಪನ್ಯಾಸಕರ ಕೊರತೆ ಹಂತ ಹಂತವಾಗಿ ಒದಗಿಸಲಾಗುವುದು ಎಂದರು.ಶಾಲೆಗಳಿಗೆ ವಿದ್ಯುತ್ ಉಚಿತ:
ತಂದೆ ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ರೈತರ ಹಿತದೃಷ್ಟಿಯಿಂದ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದರು. ಅವರ ಹಾದಿಯಲ್ಲೇ ಸಾಗುವ ನಾನು ರೈತರ ಮಕ್ಕಳಿಗೆ ಹಾಗೂ ಬಡ ಕೂಲಿ, ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲೆಗಳಿಗೆ ಉಚಿತ ವಿದ್ಯುತ್ ಯೋಜನೆ ಜಾರಿಗೆ ತಂದಿದ್ದೇನೆ. ಕರೆಂಟ್ ಬಿಲ್ ಕಟ್ಟುವ ಭಯದಲ್ಲಿ ಮೂಲೆ ಸೇರಿಕೊಂಡಿದ್ದ ಕಂಪ್ಯೂಟರ್‌ಗಳು ಈಗ ಮಕ್ಕಳ ಉಪಯೋಗಕ್ಕೆ ಸಿಗುತ್ತಿವೆ ಎಂದರು.ಕಾಯಂ ಉಪನ್ಯಾಸಕರ ನಿಯೋಜಿಸಿ:
ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಪದವಿ ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರು 45 ದಿನವರೆಗೆ ಮುಷ್ಕರದಲ್ಲಿ ತೊಡಗಿದ್ದು. ಯಾವುದೇ ಪಾಠಗಳು ನಡೆದಿಲ್ಲ. ವಾಣಿಜ್ಯ ಶಾಸ್ತ್ರದ ಉಪನ್ಯಾಸಕರ ಇಲ್ಲದೇ ಎರಡು ತಿಂಗಳಿಂದ ಪಾಠ ನಡೆದಿಲ್ಲ. ಈಗ ಪರೀಕ್ಷೆ ಬಂದಿದ್ದು, ನಾವು ಹೇಗೆ ಬರೆಯುವುದು? ಪ್ರತಿ ವರ್ಷ ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಾಗಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಸಮಸ್ಯೆ ಪರಿಹರಿಸುವ ಸಲುವಾಗಿ ಕಾಯಂ ಉಪನ್ಯಾಸಕರನ್ನು ನೇಮಕ ಮಾಡಬೇಕು ಮತ್ತು ಈಗ ನಡೆಯುತ್ತಿರುವ ಪರೀಕ್ಷೆಗಳನ್ನು ಮುಂದೆ ಹಾಕಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು.- - -
ಕೋಟ್ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ಸೇರಿ 43 ಸಾವಿರ ಶಿಕ್ಷಕರ ಕೊರತೆ ಇದೆ. ಇದನ್ನು ಹಂತ ಹಂತವಾಗಿ ನೇಮಕಾತಿ ಮಾಡುವ ಮೂಲಕ. ಶಿಕ್ಷಕರ ಹಾಗೂ ಉಪನ್ಯಾಸಕರ ಕೊರತೆ ನೀಗಿಸಲಾಗುವುದು- ಮಧು ಬಂಗಾರಪ್ಪ, ಶಿಕ್ಷಣ ಸಚಿವ
- - - -ಕೆಪಿ09ಎಎನ್‌ಟಿ1ಇಪಿ:ಆನವಟ್ಟಿಯ ಕನಾರ್ಟಕ ಪಬ್ಲಿಕ್ ಶಾಲೆ (ಕಾಲೇಜು ವಿಭಾಗ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಸಚಿವ ಎಸ್.ಮಧು ಬಂಗಾರಪ್ಪ ಅವರೊಂದಿಗೆ ಪೋಟೋಗೆ ಪೋಸು ನೀಡಿದರು.