ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಆಳುವ ಸರ್ಕಾರಗಳ ಜವಿರೋಧಿ ನೀತಿಯಿಂದಾಗಿ ದುಡಿಯುವ ವರ್ಗದ ಆದಾಯ ದಿನೇ ದಿನೇ ಕುಸಿದು ಬದುಕಲು ಬವಣೆ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಿಪಿಐ (ಎಂ) ಮಂಡ್ಯ ಜಿಲ್ಲಾ ಸಮಿತಿ ಮುಖಂಡ ಜಿ. ರಾಮಕೃಷ್ಣ ಆತಂಕ ವ್ಯಕ್ತಪಡಿಸಿದರು.ಸಿಪಿಐ (ಎಂ) 3ನೇ ತಾಲೂಕು ಸಮ್ಮೇಳನದ ಅಂಗವಾಗಿ ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ದುಡಿಯುವ ವರ್ಗದ ಜನತೆ ಒಂದಾದರೆ ಮಾತ್ರ ಭವಿಷ್ಯದಲ್ಲಿ ಉಳಿಗಾಲವಿದೆ, ತಪ್ಪಿದಲ್ಲಿ ದುಡಿಯುವ ವರ್ಗಕ್ಕೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ದುಡಿಯುವ ವರ್ಗಕ್ಕೆ ದಕ್ಕಬೇಕಾದ ಕಾನೂನುಗಳು ದಮನ ಆಗುತ್ತಿವೆ. ಈ ಬಗ್ಗೆ ಜನಪ್ರತಿನಿಧಿಗಳು ಕೂಡ ಚಕಾರ ಎತ್ತುತ್ತಿಲ್ಲ ಬಂಡವಾಳಶಾಹಿಗಳ ಪರವಾಗಿ ಕಾನೂನುಗಳು ಜಾರಿಯಾಗುತ್ತಿವೆ ಎಂದು ಅವರು ಟೀಕಿಸಿದರು.ಸಿಪಿಐ (ಎಂ) ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಮೈಸೂರು ಜಿಲ್ಲಾ ಸಮಿತಿ ಹಿರಿಯ ಮುಖಂಡ ಕೆ. ಬಸವರಾಜು,ಮುಖಂಡ ವಿ. ಬಸವರಾಜು ಕಲ್ಕುಣಿಕೆ ಮಾತನಾಡಿದರು.ಅಧ್ಯಕ್ಷತೆಯನ್ನು ಸ್ಥಳೀಯ ಸಮಿತಿ ಕಾರ್ಯದರ್ಶಿ ವೆಂಕಟೇಶ್ ವಹಿಸಿದ್ದರು. ಪಟ್ಟಣದ ಕಾರ್ಮಿಕ ಸಂಘದ ಅಧ್ಯಕ್ಷ ಚಂದೇಗೌಡ, ಸಿಪಿಎಂ ಮುಖಂಡರಾದ ಚಂದ್ರಶೇಖರ್, ಪುಟ್ಟರಾಜು, ಎಚ್.ಎಸ್. ಶಿವರಾಮ್, ಶ್ರೀದರ್, ರಾಜಮ್ಮ, ಹೇಮ, ಮಹದೇವ, ಚಿಕ್ಕಣ್ಣೇಗೌಡ, ದಿನೇಶ್, ಲೋಕೇಶ್, ಜಗದೀಶ ಇದ್ದರು.ಸಮಾವೇಶದ ಅಂಗವಾಗಿ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಸಂವಿಧಾನ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಸಮಿತಿ ರಚನೆಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಸ್ಥಳೀಯ ಸಮಿತಿ ರಚಿಸಲಾಯಿತು. ಕಾರ್ಯದರ್ಶಿಯಗಿ ವೆಂಕಟೇಶ್ ಪುನಾರಾಯ್ಕೆಯಾಗಿದ್ದು, ಸದಸ್ಯರಾಗಿ ವಿ. ಬಸವರಾಜು ಕಲ್ಕುಣಿಕೆ, ಪುಟ್ಟರಾಜು, ಚಂದ್ರಶೇಖರ್, ಕೆಂಪರಾಮಯ್ಯ, ಲೋಕೇಶ್, ಎಚ್.ಎಸ್. ಶಿವರಾಮು ಆಯ್ಕೆಯಾಗಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))