ಡಿಜಿಟಲ್ ಆರ್ಥಿಕತೆಯ ತಿಳಿವಳಿಕೆ ಅಗತ್ಯ

| Published : Mar 24 2024, 01:30 AM IST

ಸಾರಾಂಶ

ಹಣ ಸಂಪಾದನೆಗೆ ಹಲವು ರೀತಿಯ ಉದ್ಯೋಗಗಳು ಇವೆ. ಆದರೆ ಗಳಿಸಿದ ಹಣವನ್ನು ಸೂಕ್ತ ನಿರ್ವಹಣೆ ಕುರಿತಂತೆ ಆರ್ಥಿಕ ಸಾಕ್ಷರತೆಯ ತಿಳಿವಳಿಕೆಯನ್ನು ನೀಡುವುದು ಇಂದು ಬಹುಮುಖ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆ.ಎಂ.ಮಧುಕರ್ ಹೇಳಿದರು.

ಆರ್ಥಿಕ ಸಾಕ್ಷರತೆ । ದೊಡ್ಡಬಳ್ಳಾಪುರದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರ ಉದ್ಘಾಟನೆಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಹಣ ಸಂಪಾದನೆಗೆ ಹಲವು ರೀತಿಯ ಉದ್ಯೋಗಗಳು ಇವೆ. ಆದರೆ ಗಳಿಸಿದ ಹಣವನ್ನು ಸೂಕ್ತ ನಿರ್ವಹಣೆ ಕುರಿತಂತೆ ಆರ್ಥಿಕ ಸಾಕ್ಷರತೆಯ ತಿಳಿವಳಿಕೆಯನ್ನು ನೀಡುವುದು ಇಂದು ಬಹುಮುಖ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆ.ಎಂ.ಮಧುಕರ್ ಹೇಳಿದರು.

ನಗರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಧಾನ್ ಫೌಂಡೇಶನ್ ಸಂಸ್ಥೆ ಸಹಯೋಗದೊಂದಿಗೆ ಪ್ರಾರಂಭವಾಗಿರುವ ಆರ್ಥಿಕ ಸಾಕ್ಷರತಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಹಣ ಉಳಿತಾಯ ಮಾಡುವಷ್ಟೇ ಮುಖ್ಯವಾಗಿ ಉಳಿತಾಯದ ಹಣವನ್ನು ಯಾವ ರೀತಿಯಲ್ಲಿ ಹೂಡಿಕೆ ಮಾಡಿದರೆ ಅದು ಭವಿಷ್ಯದಲ್ಲಿ ನಮ್ಮ ಬದುಕಿಗೆ ನೆರವಾಗಲಿದೆ ಎನ್ನುವುದು ಸೇರಿದಂತೆ ನಮ್ಮ ಉಳಿತಾಯದ ಹಣಕ್ಕೆ ಭದ್ರತೆ ದೊರೆಯಬೇಕಿದೆ. ಈಗ ಬ್ಯಾಂಕಿಂಗ್ ಕ್ಷೇತ್ರ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದೆ. ಇಂತಹ ಸಂದರ್ಭದಲ್ಲಿ ಉಳಿತಾಯದ ಹಣ ದ್ವಿಗುಣ ಮಾಡಿಕೊಡುವ ನೆಪದಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆರ್ಥಿಕ ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಹಾಗೂ ಸೂಕ್ತ ಹೂಡಿಕೆ ಕುರಿತಂತೆ ಮಾಹಿತಿ ನೀಡಲು ಆರ್ಥಿಕ ಸಾಕ್ಷರತಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದರು.

ಈ ವೇಳೆ ಅತಿಥಿಗಳಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೊಡ್ಡಬಳ್ಳಾಪುರ ಶಾಖೆಯ ವ್ಯವಸ್ಥಾಪಕ ಸಂಜೀವ್‌ ಕುಮಾರ್, ದೊಡ್ಡಬಳ್ಳಾಪುರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಬಸವರಾಜ್, ಬೆಂಗಳೂರಿನ ಧಾನ್ ಫೌಂಡೇಶನ್ ಆರ್ಥಿಕ ಸಾಕ್ಷರತಾ ಕೇಂದ್ರ ಪ್ರಾದೇಶಿಕ ಸಂಯೋಜಕ ಸಿ.ವೀರೇಂದ್ರ ಇದ್ದರು.