ಸಾರಾಂಶ
ಸವಿತಾ ಸಮಾಜದ ಬೇಲೂರು ನಗರಾಧ್ಯಕ್ಷರಾಗಿ ಬಿ ಆರ್ ಆನಂದ್ ಅವಿರೋಧವಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಯಾರೂ ಇಲ್ಲದ ಕಾರಣ ಬಿ.ಆರ್ ಆನಂದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪುಟ್ಟಸ್ವಾಮಿ ಘೋಷಿಸಿದರು.
ನಗರಾಧ್ಯಕ್ಷ ಸ್ಥಾನದ ಬಗ್ಗೆ ಗೊಂದಲದ ನಡುವೆ ಅವಿರೋಧ ಆಯ್ಕೆ । ಚುನಾವಣಾಧಿಕಾರಿ ಘೋಷಣೆ
ಕನ್ನಡಪ್ರಭ ವಾರ್ತೆ ಬೇಲೂರುಸವಿತಾ ಸಮಾಜದ ಬೇಲೂರು ನಗರಾಧ್ಯಕ್ಷರಾಗಿ ಬಿ ಆರ್ ಆನಂದ್ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ನಗರಾಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಬಗ್ಗೆ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಅದರಂತೆ ಕಾನೂನಿನ ಪ್ರಕಾರ ಚುನಾವಣೆ ನಡೆಸಿ ನಗರಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಒಮ್ಮತದ ಅಭಿಪ್ರಾಯ ಬಂದ ಹಿನ್ನೆಲೆ ಮಂಗಳವಾರ ಬೆಳಿಗ್ಗೆಯಿಂದಲೇ ಚುನಾವಣೆ ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದ ರಂಗಮಂದಿರದ ಬಳಿ ನಡೆಸಲಾಗಿತ್ತು. ಪ್ರತಿಸ್ಪರ್ಧಿ ಯಾರೂ ಇಲ್ಲದ ಕಾರಣ ಬಿ.ಆರ್ ಆನಂದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪುಟ್ಟಸ್ವಾಮಿ ಘೋಷಿಸಿದರು.ಇದೇ ವೇಳೆ ಮಾತನಾಡಿದ ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಜಯರಾಂ, ಸವಿತಾ ಸಮಾಜ ಸಂಘ ನಗರ ಎಂದು ೨೦೦೫-೦೬ರಲ್ಲಿ ಸ್ಥಾಪನೆಯಾಗಿತ್ತು. ಆಗಿನಿಂದ ಚುನಾವಣೆ ಅಥವಾ ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತ ಬಂದಿದ್ದೆವು.ಆದರೆ ಇತ್ತೀಚೆಗೆ ಕೆಲವರು ಇದರ ವಿಚಾರದಲ್ಲಿ ಗೊಂದಲ ಉಂಟು ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಮನದಲ್ಲಿಟ್ಟುಕೊಂಡು ನಗರಕ್ಕೆ ಅಧ್ಯಕ್ಷ ಚುನಾವಣೆ ನಡೆಸಿದ್ದು ಬಿಆರ್ ಆನಂದ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಕೋಟೆ ಪ್ರಕಾಶ್, ‘ಸವಿತಾ ಸಮಾಜದ ನಗರ ಸಂಘವನ್ನು ಪೂರ್ವಿಕರು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದರು. ನಂತರ ಜಯರಾಂ ಅವರು ಅಧ್ಯಕ್ಷರಾಗಿ ನಾನು ಉಪಾಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆವು. ಆದರೆ ಮಧ್ಯದಲ್ಲಿ ಕೆಲವರು ಗೊಂದಲ ಸೃಷ್ಟಿಮಾಡಿ ಸಂಘವನ್ನೆ ಬೇರ್ಪಡಿಸಲು ಯೋಚಿಸಿದ್ದರು. ಆದರೆ ಇದಕ್ಕೆಲ್ಲಾ ಇಂದು ಅಂತ್ಯವಾಗಿದೆ. ಅನುಕೂಲಕರವಾಗಿ ಚುನಾವಣೆ ನಡೆಸಿ ಕಾನೂನು ಪ್ರಕಾರ ನಡೆದು ಶಾಂತಿಯುತವಾಗಿ ನಡೆದಿದ್ದು ಇದರಲ್ಲಿ ಬಿ.ಆರ್. ಆನಂದ್ ಅವರನ್ನು ನಮ್ಮ ಸಮಾಜದ ವತಿಯಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಅವರು ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಲಿದ್ದಾರೆ’ ಎಂದು ತಿಳಿಸಿದರು.ಸವಿತಾ ಸಮಾಜದ ನೂತನ ನಗರಾಧ್ಯಕ್ಷ ಬಿ.ಆರ್. ಆನಂದ್ ಅವರನ್ನು ಸವಿತಾ ಸಮಾಜದ ಬಾಂಧವರು ಅಭಿನಂದಿಸಿದರು.
ತಾಲೂಕು ಸವಿತಾ ಸಮಾಜದ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.ಸವಿತಾ ಸಮಾಜದ ಬೇಲೂರು ನಗರಾಧ್ಯಕ್ಷರಾಗಿ ಬಿ.ಆರ್. ಆನಂದ್ ಅವಿರೋಧವಾಗಿ ಆಯ್ಕೆಯಾದರು. ಸವಿತಾ ಸಮಾಜದ ಬಾಂಧವರು ಅಭಿನಂದಿಸಿದರು.