ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹುಟ್ಟುಹಬ್ಬ ಆಚರಿಸಿದ ಆನಂದ್‌ ಕುಂದರ್‌

| Published : Apr 25 2025, 11:51 PM IST

ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹುಟ್ಟುಹಬ್ಬ ಆಚರಿಸಿದ ಆನಂದ್‌ ಕುಂದರ್‌
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಜನತಾ ಸಮೂಹ ಸಂಸ್ಥೆಗಳ ಚೇರ್ಮನ್ ಆನಂದ್ ಸಿ. ಕುಂದರ್ ಈ ನೂತನ ಮನೆಯಲ್ಲಿ ದೀಪ ಬೆಳಗಿಸಿ, ಮನೆ ಬೀಗದ ಕೈಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಅಲ್ಲದೇ ಮನೆಯಲ್ಲಿ ಗೃಹಪ್ರವೇಶ ಪೂಜಾ ಕಾರ್ಯಗಳು ನೆರವೇರಿಸಿ, ತಮ್ಮ ಟ್ರಸ್ಟ್‌ ವತಿಯಿಂದಲೇ ಅತಿಥಿಗಳಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇತ್ತೀಚಿಗೆ ಅನಾರೋಗ್ಯದಿಂದ ನಿಧನರಾದ ಇಲ್ಲಿನ ಕೋಟ ಗ್ರಾಪಂ ವ್ಯಾಪ್ತಿಯ ಪಡುಕರೆಯ ನಿವಾಸಿ ಸುರೇಶ್ ಮರಕಾಲ ಕುಟುಂಬಕ್ಕೆ ಸಮಾಜಸೇವಕ ಆನಂದ್ ಸಿ. ಕುಂದರ್ ತಮ್ಮ ೭೭ನೇ ಹುಟ್ಟು ಹಬ್ಬದ ಅಂಗವಾಗಿ ಮನೆ ನಿರ್ಮಿಸಿಕೊಟ್ಟು ಈ ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ.

ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಜನತಾ ಸಮೂಹ ಸಂಸ್ಥೆಗಳ ಚೇರ್ಮನ್ ಆನಂದ್ ಸಿ. ಕುಂದರ್ ಈ ನೂತನ ಮನೆಯಲ್ಲಿ ದೀಪ ಬೆಳಗಿಸಿ, ಮನೆ ಬೀಗದ ಕೈಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಅಲ್ಲದೇ ಮನೆಯಲ್ಲಿ ಗೃಹಪ್ರವೇಶ ಪೂಜಾ ಕಾರ್ಯಗಳು ನೆರವೇರಿಸಿ, ತಮ್ಮ ಟ್ರಸ್ಟ್‌ ವತಿಯಿಂದಲೇ ಅತಿಥಿಗಳಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದರು.

ಈ ವೇಳೆ ಮಾತನಾಡಿದ ಅವರು, ಮನೆಯ ಯಜಮಾನನ ಅಕಾಲಿಕ ನಿಧನದಿಂದ ಬಡವಾದ ಪತ್ನಿ ಮತ್ತು ಇಬ್ಬರು ಮಕ್ಕಳಿರುವ ಕುಟುಂಬಕ್ಕೆ ನೆರವಾಗುವುದಕ್ಕೆ ಈ ಮನೆ ನಿರ್ಮಿಸಿದ್ದು, ಇದರಿಂದ ತಮಗೆ ಬಹಳ ಸಂತೋಷವಾಗಿದೆ ಎಂದರು.ಈ ಸಂದರ್ಭದಲ್ಲಿ ಗೀತಾನಂದ ಟ್ರಸ್ಟ್ ನಿರ್ದೇಶಕರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಕೋಟ ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್ ಸಾಲಿಯಾನ್, ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್,

ದಿ.ಸುರೇಶ್ ಮರಕಾಲ ಅವರ ಪತ್ನಿ ಸವಿತಾ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.