ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿಯವರ ಸಂಘಟನೆಯ ಅಡಿಯಲ್ಲಿ ನಡೆದ ಆನಂದೋತ್ಸವ ಶಿಬಿರದಲ್ಲಿ ೮೫ಕ್ಕೂ ಹೆಚ್ಚು ಜನ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.
ಆಗಸ್ಟ್ ೩ ರಿಂದ ೮ ರವರೆಗೆ ೧೦ ನೇ ಆನಂದೋತ್ಸವ ಶಿಬಿರ
ಕನ್ನಡಪ್ರಭ ವಾರ್ತೆ ಯಲ್ಲಾಪುರಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿಯವರ ಸಂಘಟನೆಯ ಅಡಿಯಲ್ಲಿ ನಡೆದ ಆನಂದೋತ್ಸವ ಶಿಬಿರದಲ್ಲಿ ೮೫ಕ್ಕೂ ಹೆಚ್ಚು ಜನ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.
ಫೆ. ೨೨ರಂದು ಪ್ರಾರಂಭವಾದ ಶಿಬಿರ ನಿರಂತರವಾಗಿ ಆರು ದಿನಗಳ ಕಾಲ ಯಲ್ಲಾಪುರದ ಟಿಎಂಎಸ್ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು. ಆರ್ಟ್ ಆಫ್ ಲಿವಿಂಗ್‌ನ ಹಿರಿಯ ಶಿಕ್ಷಕಿ ದೀಪಿಕಾ ಆರು ದಿನಗಳ ತನಕ ಜ್ಞಾನ, ಧ್ಯಾನ, ಭಜನೆ ಹಾಗೂ ಸುದರ್ಶನ ಕ್ರಿಯೆ ಕುರಿತು ತರಬೇತಿ ನೀಡಿದರು. ಎಲ್ಲಾ ಶಿಬಿರಾರ್ಥಿಗಳು ಪ್ರತಿದಿನ ಸಮಯಕ್ಕೆ ಸರಿಯಾಗಿ ಹಾಜರಾಗಿ ಶಿಬಿರದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡರು.ಈ ಶಿಬಿರದಲ್ಲಿ ೫೦ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ೮೦ರ ಹರೆಯದವರಿಂದ ಹಿಡಿದು ಯುವಕರೂ ಸುದರ್ಶನ ಕ್ರಿಯೆಯ ದೀಕ್ಷೆ ಪಡೆದರು. ಈ ಶಿಬಿರದ ಅವಧಿಯಲ್ಲಿ ಯಲ್ಲಾಪುರದ ಆರ್ಟ್ ಆಫ್ ಲಿವಿಂಗ್‌ನ ಹಿರಿಯ ಸದಸ್ಯ ಶಂಕರ್ ಭಟ್ ಕವರಿಗದ್ದೆ ದಂಪತಿ, ಯೋಗ ಶಿಕ್ಷಕ ಸುಬ್ರಾಯ ಭಟ್ಟ ದಂಪತಿ, ನಾರಾಯಣ ಸಭಾಹಿತ ದಂಪತಿ, ಚಂದ್ರಶೇಖರ್ ಹುತ್ಕಂಡ ದಂಪತಿ, ಶಿಕ್ಷಕ ಸದಾನಂದ ದಬಗಾರ ದಂಪತಿ ಹಾಗೂ ಇತರ ಸ್ವಯಂಸೇವಕರು ಸಹಕರಿಸಿದರು.
ಯಲ್ಲಾಪುರದಲ್ಲಿ ನಡೆದ ೯ನೇ ಆನಂದೋತ್ಸವ ಶಿಬಿರವಾಗಿದ್ದು, ಇಲ್ಲಿಯವರೆಗೆ ಸುಮಾರು ೨೫೦ಕ್ಕೂ ಹೆಚ್ಚು ಜನ ಸುದರ್ಶನ ಕ್ರಿಯೆಯನ್ನು ಕಲಿತು ಪ್ರತಿನಿತ್ಯ ಅಭ್ಯಾಸ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಆಗಸ್ಟ್ ೩ ರಿಂದ ೮ ರವರೆಗೆ ೧೦ ನೇ ಆನಂದೋತ್ಸವ ಶಿಬಿರ ನಡೆಯಲಿದೆ. ಅಲ್ಲದೇ, ಹದಿಹರೆಯದ ಮಕ್ಕಳಿಗಾಗಿ ಉತ್ಕರ್ಷ ಹಾಗೂ ಮೇಧಾ ಶಿಬಿರಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.