ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂದು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಕಿಡಿ ಕಾರಿದ್ದಾರೆ.ಇಂಡಿ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರದ ಹಣವೇನು ಸಿದ್ದರಾಮಯ್ಯನವರ ಮನೆ ಆಸ್ತಿನಾ ಎಂಬ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿ, ಇವರು ಐದು ವರ್ಷ ಕಾಣೆಯಾಗಿದ್ದರು, ಎಲ್ಲಿಯೂ ಇರಲಿಲ್ಲ, ಮತದಾರರಿಗೆ ಮುಖ ಕೂಡ ತೋರಿಸಿರಲಿಲ್ಲ. ಈಗ ಚುನಾವಣೆ ಬಂದ ಕಾರಣ ಹಿಂದೂ-ಮುಸ್ಲಿಂ ಹೇಳಿಕೆ ಕೊಡುವ ಮೂಲಕ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿದ್ದಾರೆ ಎಂದು ಹರಿಹಾಯ್ದರು.ಸಿಎಂ ಸಿದ್ದರಾಮಯ್ಯ ವಿರುದ್ದದ ಸಂಸದರ ಹೇಳಿಕೆಯನ್ನು ಖಂಡಿಸಿದ ಸಚಿವರು, ಅನಂತ ಕುಮಾರ್ ಹೆಗಡೆಯವರು ಈ ಹಿಂದೆ ಕೇಂದ್ರ ಸಚಿವರಾಗಿದ್ದಾಗಲೇ ಸಂವಿಧಾನ ತಿರುಚಬೇಕೆಂದು ಹೇಳಿದ್ದರು. ಇಂಥವರ ಬಗ್ಗೆ ಬಹಳ ಮಾತನಾಡೋ ಅವಶ್ಯಕತೆಯಿಲ್ಲ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ, ಇದು ಚುನಾವಣೆ ಗಿಮಿಕ್ ಎಂದು ತಿರುಗೇಟು ನೀಡಿದರು.