ಸಾರಾಂಶ
ದೇವದುರ್ಗ ಸಮೀಪದ ಅರಕೇರಾ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಸಂವಿಧನದ ಕಡೆ ವಿದ್ಯಾರ್ಥಿಗಳ ನಡೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ಸಮೀಪದ ಅರಕೇರಾ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಗಬ್ಬೂರು ಸಮತಾ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ‘ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ’ ಕಾರ್ಯಕ್ರಮ ಗುರುವಾರ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಅನಂತರಾಜ್ ನಾಯಕ ಸಂವಿಧಾನದ ಮೇಲೆ ಗೌರವ ಇರದವರು, ಸಂವಿಧಾನದ ಅರಿವು ಇರದವರು ಬದಲಾವಣೆಯ ಕುರಿತು ಮಾತನಾಡುತ್ತಿದ್ದು, ಅದು ಅಸಾಧ್ಯವಾದದ್ದು, ಭಾರತದಲ್ಲಿ ಇಂತಹ ಪ್ರಯತ್ನಗಳು ಸಫಲವಾಗುದಿಲ್ಲ ಎಂದರು ಎಂದು ಹೇಳಿದರು.
ಹೆಗ್ಗಡದಿನ್ನಿ ಪ್ರೌಢಶಾಲೆ ಶಿಕ್ಷಕ ಚನ್ನಬಸವ ಉಪನ್ಯಾಸ ನೀಡಿದರು. ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ವಿ.ನಾಯಕ, ಸಂಸ್ಥೆ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ, ಮುಖ್ಯಗುರು ಮಂಜುಳಾ ಮಾತನಾಡಿದರು. ಅರಕೇರಾ ಗ್ರಾಪಂ ಪಿಡಿಒ ವೆಂಕೋಬ ನಾಯಕ ಸಂವಿಧಾನ ಪೀಠಿಕೆ ಬೋಧಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಯಕ ಅವರು ಸಂವಿಧಾನ ಪೀಠ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ಎಸ್‌ಡಿಎಂಸಿ ಅಧ್ಯಕ್ಷ ಸೂಗೂರೇಶ ಗುಡಿ, ಸಂಸ್ಥೆ ಅಧ್ಯಕ್ಷ ಬಸವರಾಜ ಸಿಂಗ್ರಿ, ಮುಖಂಡರಾದ ಚನ್ನವೀರಯ್ಯ ಸ್ವಾಮಿ ಹಿರೇಮಠ, ಶಿಕ್ಷಕರಾದ ಲಕ್ಷ್ಮೀರೆಡಿ, ಕೃಷ್ಣವೇಣಿ, ಮೈನಾವತಿ ಹಾಗೂ ಇತರರು ಇದ್ದರು.
ಇದೇ ವೇಳೆ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಗ್ರಂಥಾಲಯಕ್ಕೆ ಸಂವಿಧಾನ ಕುರಿತ ಪುಸ್ತಕಗಳನ್ನು ನೀಡಲಾಯಿತು.