ಆನವೇರಿ ಕೃಷಿ ಪತ್ತಿನ ಸಹಕಾರ ಸಂಘ 2025-26 ನೇ ಸಾಲಿಗೆ 55.50 ಲಕ್ಷ ರು.ವಾರ್ಷಿಕ ನಿವಳ್ಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎ.ಜಿ.ರಮೇಶ್ ಗೌಡ ಮಾಹಿತಿ ನೀಡಿದರು. ಸಮೀಪದ ಆನವೇರಿಯಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಆನವೇರಿ ಕೃಷಿ ಪತ್ತಿನ ಸಹಕಾರ ಸಂಘ 2025-26 ನೇ ಸಾಲಿಗೆ 55.50 ಲಕ್ಷ ರು.ವಾರ್ಷಿಕ ನಿವಳ್ಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎ.ಜಿ.ರಮೇಶ್ ಗೌಡ ಮಾಹಿತಿ ನೀಡಿದರು.ಸಮೀಪದ ಆನವೇರಿಯಲ್ಲಿ ಶುಕ್ರವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಸದಸ್ಯರ ಸಹಕಾರದಲ್ಲಿ ಸಂಘವು ಸತತ ಲಾಭದಲ್ಲಿ ಮುನ್ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ಬಾರಿ ಸದಸ್ಯರಿಗೆ ಶೇ.10ರಂತೆ ಡಿವಡೆಂಡ್ ನೀಡಲು ಒಪ್ಪಿಗೆ ಸೂಚಿಸಿದೆ. ಸಾಲ ಪಡೆಯುವುದು ನಮ್ಮ ಹಕ್ಕು, ಅದರಂತೆ ಸಕಾಲದಲ್ಲಿ ಸಾಲ ಮರುಪಾವತಿಯು ನಮ್ಮ ಜವಬಾರಿಯಾಗಿರಬೇಕು. ಸಕಾಲದಲ್ಲಿ ಸಾಲ ಮರುಪಾವತಿಯಾದರೆ ಸಂಘದ ಆರ್ಥಿಕತೆ ಉತ್ತಮವಾಗುತ್ತದೆ ಎಂದರು.
ಸದಸ್ಯರು ಸಹಕಾರಿ ಕ್ಷೇತ್ರದ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಡರಾಗಬೇಕು. ಪಡೆದ ಸಾಲ ಸಕಲಾದಲ್ಲಿ ಪಾವತಿ ಮಾಡಿ ಸಂಘದ ಉನ್ನತಿಗೆ ಶ್ರಮಿಸಬೇಕು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ನುಸುಳದಂತೆ ಎಚ್ಚರ ವಹಿಸಬೇಕು. ಸಂಘದಲ್ಲಿ ನಡೆಯುವ ಸಭೆಗಳಿಗೆ ತಪ್ಪದೆ ನಿಯಮಿತವಾಗಿ ಹಾಜರಾಗಬೇಕು. ಶೂನ್ಯ ಬಡ್ಡಿದರ ಸಾಲ ಸೌಲಭ್ಯಗಳು ಅನ್ನದಾತರ ಪಾಲಿಗೆ ವರದಾನವಾಗಿವೆ. ರೈತರು ಸಂಘಗಳಲ್ಲಿ ವ್ಯವಹಾರ ಮಾಡುವತ್ತ ಹೆಚ್ಚು ಗಮನ ಹರಿಸಬೇಕಿದೆ. ಬಂಗಾರ ಅಡಮಾನ ಸಾಲಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಘದಲ್ಲಿ ಅಡಕೆ ಅಡಮಾನ ಸಾಲ ನೀಡಲಾಗುತ್ತಿದೆ. ಪ್ರತಿ ಗುರುವಾರ ಕ್ಯಾಂಪ್ಕೋ ಸಹಯೋಗದಲ್ಲಿ ಅಡಕೆ ಮಾರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.ಸಭೆಯ ಪ್ರಯುಕ್ತ ಕಣ್ಣಿನ ಉಚಿತ ತಪಾಸಣೆ, ಚಿಕಿತ್ಸೆ ಶಿಬಿರ ಆಯೋಜನೆ ಹಾಗೂ ಅತಿಹೆಚ್ಚು ಅಡಕೆ ಮಾರಾಟ ಮಾಡಿದ ಸದಸ್ಯರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಟಿ.ಚಂದ್ರಪ್ಪ, ಎಚ್.ಜಿ ಮಲ್ಲಯ್ಯ, ನಾಗರಾಜ್, ಈಶ್ವರಪ್ಪ, ಚಂದ್ರಶೇಖರ್ ಪಾಟೀಲ್, ರಮೇಶ್, ಇ.ಎಂ.ರಾಜು, ಹನುಮಂತಪ್ಪ, ಸುಶೀಲಮ್ಮ, ವಿನೋದ, ಎಚ್.ವಿ ಗಜೇಂದ್ರ, ಹಾಲಸ್ವಾಮಿ, ನಾಗರಾಜ್, ಅಮಾನುಲ್ಲಾ, ಮಲ್ಲಿಕಾರ್ಜುನ್, ಗೀತಾ, ಚಂದ್ರಶೇಖರ್, ರುದ್ರೇಶಪ್ಪ ಇತರರಿದ್ದರು.-----ಪೋಟೊ-------
06 ಎಚ್‍ಎಚ್‍ಆರ್ ಪಿ 01ಆನವೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ರಮೇಶ್‍ಗೌಡ ಉದ್ಘಾಟಿಸಿದರು. ಟಿ.ಎಂ ಚಂದ್ರಪ್ಪ, ಮಲ್ಲಯ್ಯ ಇತರರಿದ್ದರು.
-----ಪೋಟೊ-------06 ಎಚ್‍ಎಚ್‍ಆರ್ ಪಿ 01
ಆನವೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ರಮೇಶ್‍ಗೌಡ ಉದ್ಘಾಟಿಸಿದರು. ಟಿ.ಎಂ ಚಂದ್ರಪ್ಪ, ಮಲ್ಲಯ್ಯ ಇತರರಿದ್ದರು.