Anchanotsava celebrations: Massive sale of handloom sarees kicks off

ಬಂಟ್ವಾಳ: ಮದುವೆ ಸೀರೆ ಸೇರಿದಂತೆ ವೈವಿಧ್ಯಮಯ ವಸ್ತ್ರಗಳ ಮೂಲಕ ಮನೆಮಾತಾಗಿರುವ ಬಂಟ್ವಾಳ ಬೈಪಾಸ್‌ನ ಪ್ರತಿಷ್ಠಿತ ಅಂಚನ್‌ ಸಿಲ್ಕ್ಸ್ ವಸ್ತ್ರ ಮಳಿಗೆಯಲ್ಲಿ ನಡೆಯುತ್ತಿರುವ ಅಂಚನೋತ್ಸವದ ಅಂಗವಾಗಿ ಆಯೋಜಿಸಲಾದ ಕೈಮಗ್ಗ ಸೀರೆಗಳ ಬೃಹತ್ ಮಾರಾಟ ಮೇಳಕ್ಕೆ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾ. ಬೃಜೆಶ್ ಚೌಟ, ಪ್ರಧಾನಿ ನರೇಂದ್ರ ಮೋದಿ ಅವರ ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆಯಂತೆ ಖಾದಿ ಮತ್ತು ಕೈಮಗ್ಗ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕಾಶ್ ಅಂಚನ್, ಶೇಖರ್ ಅಂಚನ್ ಹಾಗೂ ಪುರುಷೋತ್ತಮ ಅಂಚನ್ ಅವರ ನೇತೃತ್ವದಲ್ಲಿ ಅಂಚನ್‌ ಸಿಲ್ಕ್ಸ್ ಕೈಮಗ್ಗ ಸೀರೆಗಳ ಮಾರಾಟಕ್ಕೆ ವಿಶೇಷ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ಅಂಚನ್‌ ಸಿಲ್ಕ್ಸ್‌ನಲ್ಲಿ ನೂತನವಾಗಿ ಆರಂಭಿಸಲಾದ ಹೋಲ್‌ಸೇಲ್ ಕೌಂಟರ್ ಅನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿ, ಕೈಮಗ್ಗ ಉತ್ಪನ್ನಗಳಿಗೆ ಉತ್ತೇಜನ ನೀಡುತ್ತಿರುವ ಅಂಚನ್‌ ಸಹೋದರರ ಸೇವೆ ಮಾದರಿ ಎಂದು ಅಭಿಪ್ರಾಯಪಟ್ಟರು.ಅಂಚನ್‌ ಸಿಲ್ಕ್ಸ್ ಪ್ರವರ್ತಕರಾದ ಪ್ರಕಾಶ್ ಅಂಚನ್, ಶೇಖರ್ ಅಂಚನ್ ಹಾಗೂ ಪುರುಷೋತ್ತಮ ಅಂಚನ್ ಪಿಲ್ಕಾಜೆಗುತ್ತು ಸ್ವಾಗತಿಸಿದರು.ಮುಖಂಡರಾದ ಚೆನ್ನಪ್ಪ ಕೋಟ್ಯಾನ್, ಹರಿಕೃಷ್ಣ ಬಂಟ್ವಾಳ್, ದೇವಪ್ಪ ಪೂಜಾರಿ, ಸುದರ್ಶನ್ ಬಜ, ಮಾಧವ ಮಾವೆ, ಪದ್ಮನಾಭ ಪೂಜಾರಿ ಕೇಲ್ಯೆದಗುತ್ತು, ಆನಂದ ಪೂಜಾರಿ ಕೇಂದೋಡಿ, ರಾಮಚಂದ್ರ ಪೂಜಾರಿ ಕರೆಂಕಿ, ಬಾಲಕೃಷ್ಣ ಗೌಡ ಕರೆಂಕಿ, ಲಕ್ಷ್ಮೀನಾರಾಯಣ ಗೌಡ ಪಂಜಿಕಲ್ಲು, ಹರಿಪ್ರಸಾದ್, ಪ್ರವೀಣ್ ಅಂಚನ್, ಸಂತೋಷ್ ಕುಮಾರ್ ರಾಯಿಬೆಟ್ಟು, ರವೀಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಪುಷ್ಪರಾಜ್ ಚೌಟ ಮುಂತಾದವರು ಉಪಸ್ಥಿತರಿದ್ದರು.ಕರಾವಳಿಯ ಮನೆಮಾತಾಗಿರುವ ಅಂಚನ್‌ ಗಾರ್ಮೆಂಟ್ಸ್‌ನ 28ನೇ ವಾರ್ಷಿಕೋತ್ಸವದ ಅಂಗವಾಗಿ ಅಂಚನೋತ್ಸವವನ್ನು ಆಯೋಜಿಸಲಾಗಿದೆ. ವಿಶೇಷ ರಿಯಾಯಿತಿ ಮಾರಾಟ: ಅಂಚನೋತ್ಸವವು ಜೂ. 17ರಂದು ಆರಂಭಗೊಂಡಿದ್ದು ಆ. 17ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಎಲ್ಲ ರೀತಿಯ ವಸ್ತ್ರಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಉತ್ತರ ಕರ್ನಾಟಕದಿಂದ ತರಿಸಲಾದ ವಿವಿಧ ವಿನ್ಯಾಸದ ಕೈಮಗ್ಗ ಸೀರೆಗಳು 500 ರು.ನಿಂದ ಆರಂಭವಾಗಿ 2,000 ರು.ಗಿಂತ ಹೆಚ್ಚಿನ ಬೆಲೆಗೆ ದೊರೆಯಲಿವೆ.

ಹ್ಯಾಂಡ್‌ಲೂಮ್ ಮತ್ತು ಇತರೆ ವಸ್ತುಗಳಿಗಾಗಿ ಪ್ರತ್ಯೇಕ ಹೋಲ್‌ಸೇಲ್ ಕೌಂಟರ್ ಆರಂಭಿಸಲಾಗಿದ್ದು, ಶುಭ ಸಮಾರಂಭಗಳು, ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಗತ್ಯವಿರುವ ಶಾಲುಗಳು, ಧೋತಿಗಳು, ಮೈಸೂರು ಪೇಟಗಳು, ಆಕರ್ಷಕ ಹಾರಗಳು, ಸಮ್ಮಾನ ಶಾಲುಗಳು, ಬಂಟಿಂಗ್ಸ್ ಹಾಗೂ ಫ್ಲೆಕ್ಸ್ ಸಾಮಗ್ರಿಗಳು ಹೋಲ್‌ಸೇಲ್ ದರದಲ್ಲಿ ಲಭ್ಯವಿರುತ್ತವೆ ಎಂದು ಪ್ರವರ್ತಕ ಪ್ರಕಾಶ್ ಅಂಚನ್ ತಿಳಿಸಿದ್ದಾರೆ.