ಸಾರಾಂಶ
ರಾಮನಗರ: ಇತಿಹಾಸದ ಪುಟಗಳಲ್ಲಿ ದಾಖಲಾದ ನಾಣ್ಯಗಳು ಮತ್ತು ವಿವಿಧ ದೇಶಗಳ ನೋಟುಗಳನ್ನು ಒಂದೇ ಸೂರಿನಡಿ ಪ್ರದರ್ಶನ ವಾಸವಿ ವಿದ್ಯಾನಿಕೇತನ ಟ್ರಸ್ಟ್ ಏರ್ಪಡಿಸಿದೆ.
ರಾಮನಗರ: ಇತಿಹಾಸದ ಪುಟಗಳಲ್ಲಿ ದಾಖಲಾದ ನಾಣ್ಯಗಳು ಮತ್ತು ವಿವಿಧ ದೇಶಗಳ ನೋಟುಗಳನ್ನು ಒಂದೇ ಸೂರಿನಡಿ ಪ್ರದರ್ಶನ ವಾಸವಿ ವಿದ್ಯಾನಿಕೇತನ ಟ್ರಸ್ಟ್ ಏರ್ಪಡಿಸಿದೆ.
ನಗರದ ಎಂ.ಜಿ.ರಸ್ತೆಯ ಶ್ರೀ ಕನ್ನಿಕಾಮಹಲ್‌ನಲ್ಲಿ ಜುಲೈ 22ರಂದು ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಈ ಪ್ರದರ್ಶನ ನಡೆಯಲಿದೆ. ಹೊಯ್ಸಳರು, ಚಾಲುಕ್ಯರು, ಪಲ್ಲವರು, ಪಾಂಡ್ಯರು, ಚೋಳರು, ಶಾತವಾಹನರು, ಗುಪ್ತರು, ಕುಶನರು ಹೀಗೆ ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸಾಮ್ರಾಜ್ಯಗಳು, ರಾಜವಂಶಗಳ ಆಡಳಿತದ ವೇಳೆ ಚಾಲ್ತಿಯಲ್ಲಿದ್ದ ನಾಣ್ಯಗಳು, ದೇಶ ವಿದೇಶದ ನಾಣ್ಯಗಳು ಮತ್ತು ನೋಟುಗಳನ್ನು ಒಂದೇ ಕಡೆ ವೀಕ್ಷಿಸಿ ಕುತೂಹಲ ತಣಿಸಿಕೊಳ್ಳುವ ಸದಾವಕಾಶವನ್ನು ವಾಸವಿ ಟ್ರಸ್ಟ್ ಕಲ್ಪಿಸಿದೆ.ಆರ್‌ಬಿಐನ ನಿವೃತ್ತ ಅಧಿಕಾರಿ ಟಿ.ಎನ್.ಅಶೋಕ್, ಕನ್ನಡನಾಡು ನಾಣ್ಯ ಸಂಗ್ರಹ ಸಂಘದ ಉಪಾಧ್ಯಕ್ಷ ಪಿ.ಸುಬ್ರಹ್ಮಣ್ಯಂಶೆಟ್ಟಿ, ಕೋಟಕ್ ಮಹೀಂದ್ರ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಎಂ.ಎನ್.ಮುರಳೀಕೃಷ್ಣ ಅವರು ಸಂಗ್ರಹಿಸಿರುವ ಈ ಅಪರೂಪದ ನಾಣ್ಯಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು. ಈಗಾಗಲೆ ರಾಜ್ಯದ ಅನೇಕ ಸ್ಥಳಗಳಲ್ಲಿ ಪ್ರದರ್ಶನಗೊಂಡು ನಾಗರೀಕರ ಪ್ರಶಂಸೆಗೆ ಪಾತ್ರವಾಗಿದೆ.
ರಾಮನಗರದ ನಾಗರೀಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರದರ್ಶನಕ್ಕೆ ಭೇಟಿ ಕೊಟ್ಟು ಅಪರೂಪದ ನಾಣ್ಯ ಸಂಪತ್ತನ್ನು ವೀಕ್ಷಿಸುವಂತೆ ವಾಸವಿ ಟ್ರಸ್ಟ್‌ನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರದರ್ಶನಕ್ಕೆ ಪ್ರವೇಶ ಶುಲ್ಕ ಇರುವುದಿಲ್ಲ.