ಪುರಾತನ ಭಾರತ ಜ್ಞಾನ ಸಂಪತ್ತಿನ ಭಂಡಾರ: ಡಾ. ವೆಂಕಟರಾಮ್ ಪೈ

| Published : Apr 03 2024, 01:32 AM IST

ಸಾರಾಂಶ

ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ಸರಣಿ ವಿಚಾರ ಸಂಕಿರಣದಲ್ಲಿ ಭೌತಶಾಸ್ತ್ರ ವಿಭಾಗ ಆಯೋಜಿಸಿದ ರಾಷ್ಟ್ರ ಮಟ್ಟದ ವಿಚಾರಸಂಕಿರಣವನ್ನು ಗಣ್ಯರುಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತದ ಭವ್ಯ ಇತಿಹಾಸದಲ್ಲಿ ಭೌತ ಶಾಸ್ತ್ರದ ಕುರಿತಾದ ಅನೇಕಾನೇಕ ವಿಚಾರಗಳು ಅಡಕವಾಗಿವೆ. ಭಾರತೀಯ ಸಂಸ್ಕೃತಿಯ ಅಧ್ಯಯನ ಮಾಡಿದಾಗ ಖಗೋಳ ಶಾಸ್ತ್ರ, ಗ್ರಹಗಳು, ಆಕಾಶ ಕಾಯಗಳ ಚಲನೆ, ಜೀವಿತಾವಧಿ ಕುರಿತಂತೆ ಮಾಹಿತಿಗಳು ವಿಪುಲವಾಗಿ ಸಿಗುತ್ತವೆ. ಪುರಾತನ ಭಾರತವು ಜ್ಞಾನ ಸಂಪತ್ತಿನ ಭವ್ಯ ಭಂಡಾರವಾಗಿದೆ ಎಂದು ಮಣಿಪಾಲದ ಎಂ. ಐ. ಟಿ. ಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ವೆಂಕಟರಾಮ ಪೈ ಅಭಿಪ್ರಾಯ ಪಟ್ಟರು.

ಅವರು ಇಲ್ಲಿನ ಎಂ. ಜಿ. ಎಂ. ಕಾಲೇಜಿನ ಅಮೃತ ಮಹೋತ್ಸವದ ಪ್ರಯುಕ್ತ ನಡೆಯುತ್ತಿರುವ ಸರಣಿ ವಿಚಾರ ಸಂಕಿರಣದಲ್ಲಿ ಭೌತ ಶಾಸ್ತ್ರ ವಿಭಾಗ ಆಯೋಜಿಸಿದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ ನ ಕಾರ್ಯದರ್ಶಿ ಬಿ. ಪಿ. ವರದರಾಯ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ. ವಿ.ಯ ಭೌತ ಶಾಸ್ತ್ರ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ. ಜಗನ್ನಾಥ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ, ಪ. ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಎ., ಸಹಸಂಯೋಜಕ ಪ್ರೊ. ನೀಲಕಂಠ ದಂಡೋತಿ ಅವರು ವೇದಿಕೆಯಲ್ಲಿ ಇದ್ದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿ, ಭೌತ ಶಾಸ್ತ್ರ ಮುಖ್ಯಸ್ಥೆ ಪ್ರೊ. ಶೈಲಜಾ ಎಚ್. ವಂದಿಸಿದರು. ಉಪನ್ಯಾಸಕಿ ಸೌಮ್ಯಲತಾ ಪರಿಚಯಿಸಿದರು. ಉಪನ್ಯಾಸಕಿ ಡಾ. ಅಕ್ಷತಾ ನಿರೂಪಿಸಿದರು.