ವಿದ್ಯಾರ್ಥಿಗಳಿಂದ ಪುರಾತನ ಕಲ್ಯಾಣಿ ಸ್ವಚ್ಛತೆ

| Published : Feb 10 2024, 01:47 AM IST

ಸಾರಾಂಶ

ನೆಲಮನೆ ಗ್ರಾಮದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಹಮ್ಮಿಕೊಂಡಿರುವ ವಿದ್ಯಾರ್ಥಿಗಳು, ಶ್ರಮದಾನದ ಅಂಗವಾಗಿ ಕಲ್ಯಾಣಿಯ ಸುತ್ತ ದಟ್ಟವಾಗಿ ಬೆಳೆದುಕೊಂಡಿದ್ದ ಗಿಡ-ಗಂಟೆಗಳನ್ನು ಕಿತ್ತು ಹಾಕಿದರು.

ಶ್ರೀರಂಗಪಟ್ಟಣ: ತಾಲೂಕಿನ ಕೂಡಲಕುಪ್ಪೆ ಗ್ರಾಮದ ಪುರಾತನ ಕಲ್ಯಾಣಿ ಕೊಳವನ್ನು ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು. ನೆಲಮನೆ ಗ್ರಾಮದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಹಮ್ಮಿಕೊಂಡಿರುವ ವಿದ್ಯಾರ್ಥಿಗಳು, ಶ್ರಮದಾನದ ಅಂಗವಾಗಿ ಕಲ್ಯಾಣಿಯ ಸುತ್ತ ದಟ್ಟವಾಗಿ ಬೆಳೆದುಕೊಂಡಿದ್ದ ಗಿಡ-ಗಂಟೆಗಳನ್ನು ಕಿತ್ತು ಹಾಕಿದರು. ಗಿಡಗಳಿಂದ ಮುಚ್ಚಿ ಹೋಗಿದ್ದ ಕಲ್ಯಾಣಿ ಕೊಳಕ್ಕೆ ವಿದ್ಯಾರ್ಥಿಗಳ ಶ್ರಮದಾನದ ಮೂಲಕ ಹೊಸ ರೂಪ ಕೊಟ್ಟಂತಾಗಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಗ್ರಾಪಂ ಸದಸ್ಯ ಆದಿಷೇಶ್, ಎನ್‌ಎಸ್‌ಎಸ್ ಅಧಿಕಾರಿ ಡಾ.ರಾಘವೇಂದ್ರ, ಕೂಡಲಕೊಪ್ಪೆ ಸೋಮಶೇಖರ್, ಕಾಲೇಜಿನ ಉಪನ್ಯಾಸಕರಾದ ಡಾ.ಲಾವಣ್ಯ, ರುದ್ರೇಶ್ ಮಾದೇಶ್, ಸಹ ಕಾರ್ಯಕ್ರಮದ ಅಧಿಕಾರಿ ಟಿ.ಎಂ.ಮುರಳಿ, ಸತ್ಯ ಸೇರಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.