ಚುಂಚನಗಿರಿ ಶ್ರೀಮಠಕ್ಕೆ ಆಂಧ್ರಪ್ರದೇಶ ರಾಜ್ಯದ ಶಿಕ್ಷಣ ಸಚಿವರ ಭೇಟಿ

| Published : Sep 08 2025, 01:00 AM IST

ಸಾರಾಂಶ

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಆಂಧ್ರಪ್ರದೇಶ ಸರ್ಕಾರದ ಶಿಕ್ಷಣ ಸಚಿವ ನಾರ ಲೋಕೇಶ್ ಭೇಟಿಕೊಟ್ಟು ಕ್ಷೇತ್ರಾಧಿದೇವತೆಗಳಿಗೆ ಹಾಗೂ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮಹಾ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಆಂಧ್ರಪ್ರದೇಶ ಸರ್ಕಾರದ ಶಿಕ್ಷಣ ಸಚಿವ ನಾರ ಲೋಕೇಶ್ ಭಾನುವಾರ ಬೆಳಗ್ಗೆ ಭೇಟಿಕೊಟ್ಟು ಕ್ಷೇತ್ರಾಧಿದೇವತೆಗಳಿಗೆ ಹಾಗೂ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮಹಾ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರಸ್ವಾಮಿ ದೇಗುಲದಲ್ಲಿ ನಡೆದ ಭಾನುವಾರದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಸಚಿವರು ಕ್ಷೇತ್ರಾಧಿದೇವತೆಗಳ ದರ್ಶನಾಶೀರ್ವಾದ ಪಡೆದುಕೊಂಡ ನಂತರ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮಹಾ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಕ್ಷೇತ್ರಕ್ಕೆ ಭೇಟಿಕೊಟ್ಟ ಸಚಿವ ನಾರ ಲೋಕೇಶ್ ಅವರಿಗೆ ಶ್ರೀಮಠದ ಸಂಪ್ರದಾಯದಂತೆ ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಶ್ರೀಗಳು ಆಶೀರ್ವದಿಸಿದರು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿದಂತೆ ಹಲವರು ಇದ್ದರು.

ಕ್ಯಾತನಹಳ್ಳಿ ಗುರುಮೂರ್ತಿ ನಿವಾಸಕ್ಕೆ ಸಚಿನ್ ಚಲುವರಾಯಸ್ವಾಮಿ ಭೇಟಿ

ಪಾಂಡವಪುರ: ತಾಲೂಕಿನ ಕ್ಯಾತನಹಳ್ಳಿ ಗುರುಮೂರ್ತಿ ನಿವಾಸಕ್ಕೆ ಚಿತ್ರನಟ ಸಚಿನ್ ಚಲುವರಾಯಸ್ವಾಮಿ ಭೇಟಿ ನೀಡಿ ಗ್ರಾಮಸ್ಥರು, ಕುಟುಂಬಸ್ಥರಿಂದ ಅಭಿನಂದನೆ ಸ್ವೀಕರಿಸಿದರು.

ಗುರುಮೂರ್ತಿ ನಿವಾಸದಲ್ಲಿ ಬೆಳಗ್ಗೆ ಉಪಾಹಾರ ಸೇವನೆ ಮಾಡಿದ ಸಚಿನ್ ಚಲುವರಾಯಸ್ವಾಮಿ ಕೆಲಕಾಲ ಮಾತುಕತೆ ನಡೆಸಿ ಅಲ್ಲಿಂದ ತೆರಳಿದರು. ಈ ವೇಳೆ ಗ್ರಾಮದ ಯಜಮಾನರಾದ ಕೆ.ಟಿ.ಗೋಪಾಲಕೃಷ್ಣ, ಜಿ.ಮಂಜುನಾಥ್, ಕೆ.ಬಿ.ರವಿಕುಮಾರ್, ಈಶ್ವರ್, ಸ್ಟುಡಿಯೋ ಚಂದ್ರು, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿವೇಕ್, ಗ್ರಾಪಂ ಮಾಜಿ ಸದಸ್ಯ ವಿನಯಕುಮಾರ್, ರೈತಸಂಘದ ಯುವ ಮುಖಂಡ ಹರ್ಷಿತ್, ಚಲುವರಾಯಸ್ವಾಮಿ ಅಭಿಮಾನಿ ಹಿರೇಮರಳಿ ಪ್ತಸಾದ್, ಯುವ ಮುಖಂಡರಾದ ಅಭಿಷೇಕ್ ಗೌಡ, ಪುನೀತ್ ಇತರರಿದ್ದರು. ಇದೇ ವೇಳೆ ಕ್ಯಾತನಹಳ್ಳಿ ಗಣಪತಿ ಸಂಘದ ಯುವಕರು ಚಿತ್ರನಟ ಸಚಿನ್ ಚಲುವರಾಯಸ್ವಾಮಿ ಅವರನ್ನು ಅಭಿನಂದಿಸಿದರು.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದನೆ

ಕಿಕ್ಕೇರಿ

ಕ್ಲಬ್ ಕೇವಲ ಮನೋರಂಜನೆಗೆ ಮೀಸಲಾಗದೆ ಸಮಾಜಮುಖಿ ಕೆಲಸ ಮಾಡಲು ಸದಾ ಬದ್ಧವಿದೆ ಎಂದು ಫ್ರೆಂಡ್ಸ್‌ ರಿಕ್ರಿಯೇಷನ್‌ ಕ್ಲಬ್‌ ಅಧ್ಯಕ್ಷ ಕೋಡಿಮಾರನಹಳ್ಳಿ ಕೃಷ್ಣೇಗೌಡ ಹೇಳಿದರು.

ಪಟ್ಟಣದ ಕ್ಲಬ್ ನಲ್ಲಿ ನಡೆದ ನಡೆದ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ಕ್ಲಬ್‌ ಎಂದರೆ ಜೂಜಾಟ, ಇಸ್ಪೀಟ್ ಆಟ ಎನ್ನುವ ಮನೋಭಾವ ಬಹುತೇಕರಲ್ಲಿದೆ. ಇದನ್ನು ಹೊರತು ಪಡಿಸಿ ಸಮಾಜಮುಖಿ ಕೆಲಸ ಮಾಡಲು ಕಟಿಬದ್ಧವಿದೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳಾದ ಮಮತಾ, ಗಾನವಿ, ಅಮೃತಾ, ಕೀರ್ತನಾ, ಶ್ವೇತಾ, ಕಾವ್ಯಗೆ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಕ್ಲಬ್‌ ಉಪಾಧ್ಯಕ್ಷ ಜಯರಾಮು, ಕಾರ್ಯದರ್ಶಿ ಎಸ್. ರವಿ, ಖಜಾಂಚಿ ಕೆ.ಪಿ.ಉಮೇಶ್, ನಿರ್ದೇಶಕ ನೀಲಕಂಠಯ್ಯ, ಲಿಂಗರಾಜೇಗೌಡ, ಬಾಲಚಂದ್ರ, ಎಸ್‌ಟಿಡಿರಮೇಶ್, ರಂಗಶೆಟ್ಟಿ, ಕೆ.ಕೆ.ಚಂದ್ರಶೇಖರ್, ಸೀತಾರಾಮು, ದೇವರಾಜು, ಚಿಕ್ಕೇಗೌಡ, ಮುಕುಂದ ಇದ್ದರು.