ನ್ಯಾಯಾಧೀಶರ ಭೇಟಿ: ಸುಸ್ಥಿತಿ ಕಂಡ ಅಂಗನವಾಡಿ ಕೇಂದ್ರಗಳು

| Published : Jul 25 2024, 01:26 AM IST

ನ್ಯಾಯಾಧೀಶರ ಭೇಟಿ: ಸುಸ್ಥಿತಿ ಕಂಡ ಅಂಗನವಾಡಿ ಕೇಂದ್ರಗಳು
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ್ ಮ. ಕರೆಣ್ಣವರ ಜುಲೈ 22ರಂದು ಆಜಾದ್ ನಗರದ ವೆಂಕಾಭೋವಿ ಕಾಲನಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿನ ಸ್ಥಿತಿಗತಿ ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಈ ಹಿನ್ನೆಲೆ ಇಲಾಖೆ ಕ್ರಮ ಕೈಗೊಂಡಿದೆ.

- ವೆಂಕಾಭೋವಿ ಕಾಲನಿ ಕೇಂದ್ರ ಮಕ್ಕಳಿಗೆ ಸೊಳ್ಳೆ ಪರದೆ, ಪೌಷ್ಠಿಕ ಆಹಾರ ಸೌಲಭ್ಯ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ್ ಮ. ಕರೆಣ್ಣವರ ಜುಲೈ 22ರಂದು ಆಜಾದ್ ನಗರದ ವೆಂಕಾಭೋವಿ ಕಾಲನಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿನ ಸ್ಥಿತಿಗತಿ ಗಮನಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಈ ಹಿನ್ನೆಲೆ ಇಲಾಖೆ ಕ್ರಮ ಕೈಗೊಂಡಿದೆ.

ನ್ಯಾಯಾಧೀಶರು ಭೇಟಿ ನೀಡಿದ್ದರ ಪರಿಣಾಮ ಅಂಗನವಾಡಿಗಳಲ್ಲಿ ಸ್ವಚ್ಛತೆ ಕಂಡುಬಂದಿದೆ. ಮಕ್ಕಳನ್ನು ಸೊಳ್ಳೆಗಳಿಂದ ರಕ್ಷಿಸಿ, ಮಲಗಿಸಲು ಸೊಳ್ಳೆ ಪರದೆ, ಸರ್ಕಾರದ ಮೆನು ಪ್ರಕಾರ ಪೌಷ್ಟಿಕಾಂಶವುಳ್ಳ ಆಹಾರ ವಿತರಣೆ ಸೇರಿದಂತೆ ಸಾಕಷ್ಟು ಬದಲಾವಣೆ ತರಲಾಗಿದೆ. ಜಡ್ಜ್‌ ಸೂಚನೆ ಮೇರೆಗೆ ಇಲಾಖೆ ಮೇಲಾಧಿಕಾರಿಗಳು ಹೆಚ್ಚಿನ ಗಮನಹರಿಸಿ ಮಕ್ಕಳಿಗೆ ಅತ್ಯುತ್ತಮವಾದ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.

ಮಕ್ಕಳಿಗೆ ಆಟಿಕೆಗಳ ಉಪಯೋಗ, ಕೇಂದ್ರದ ಒಳಗೆ ಮಕ್ಕಳ ಕಲಿಕೆಗೆ ಬೇಕಾದ ಸ್ಟಿಕ್ಕರ್‌ಗಳ ಬಳಕೆ ಸೇರಿದಂತೆ ಆಹಾರ ಪದಾರ್ಥಗಳ ದಾಸ್ತಾನು ವಿವರದ ಪ್ರದರ್ಶನ, ಮೆನು ಫಲಕಗಳನ್ನೂ ಪ್ರದರ್ಶಿಸಲಾಗಿದೆ.

ಜಡ್ಜ್‌ ಪ್ರತಿಕ್ರಿಯೆ:

ಅಂಗನವಾಡಿ ಕೇಂದ್ರಗಳ ಸುಧಾರಣೆ ಹಿನ್ನೆಲೆ ನ್ಯಾಯಾಧೀಶ ಮಹಾವೀರ್ ಮ. ಕರೆಣ್ಣವರ್ ಪ್ರತಿಕ್ರಿಯಿಸಿದ್ದು, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಮಯದಲ್ಲಿದ್ದ ಸ್ಥಿತಿಗೂ, ಬಳಿಕದ ಈಗಿನ ಸ್ಥಿತಿಗೂ ಸಾಕಷ್ಟು ಸುಧಾರಣೆಯಾಗಿದೆ. ಇದೇ ರೀತಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಅಧಿಕಾರಿಗಳು ಸರ್ಕಾರದ ಮಾರ್ಗಸೂಚಿ ಅನ್ವಯ ಮಕ್ಕಳಿಗೆ ನಿರಂತರ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚು ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ.

- - - -24ಕೆಡಿವಿಜಿ36ಃ:

ದಾವಣಗೆರೆ ನಗರದ ವೆಂಕಾಭೋವಿ ಕಾಲನಿ ವಿವಿಧ ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶ ಮಹಾವೀರ್ ಮ. ಕರೆಣ್ಣವರ ಭೇಟಿ ನೀಡಿ, ವ್ಯವಸ್ಥೆ ಸುಧಾರಿಸಲು ಸೂಚನೆ ನೀಡಿದ್ದ ಮೇರೆಗೆ, ಅಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಅಧಿಕಾರಿಗಳು ಸೌಲಭ್ಯಗಳನ್ನು ಕಲ್ಪಿಸಿದರು.