ಸಾರಾಂಶ
ಕಲ್ಯಾಣ ಭಾಗದಲ್ಲಿ 1008 ನರ್ಸರಿ ಶಾಲೆಗಳ ಆರಂಭ ವಿರೋಧಿಸಿ ಅಂಗನವಾಡಿ ನೌಕರರು ಹೋರಾಟ ಶುರು ಮಾಡಿದ್ದಾರೆ. ಇದರಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಅಂಗನವಾಡಿಗಳಿಗೇ ಕುತ್ತು ಬರಲಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಭಾಗದಲ್ಲಿ 1008 ನರ್ಸರಿ ಶಾಲೆಗಳ ಆರಂಭ ವಿರೋಧಿಸಿ ಅಂಗನವಾಡಿ ನೌಕರರು ಹೋರಾಟ ಶುರು ಮಾಡಿದ್ದಾರೆ. ಇದರಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಅಂಗನವಾಡಿಗಳಿಗೇ ಕುತ್ತು ಬರಲಿದೆ. ಈ ಯೋಜನೆ ಕೈಬಿಡಿ ಅಥವಾ ಅಂಗನವಾಡಿಗಳಲ್ಲೇ ನರ್ಸರಿ ಸಾಲೆಗಳ ಆರಂಭಿಸಿರೆಂದು ಆಗ್ರಹಿಸಿ ಪ್ರತಿಭಟನೆ ನಿರತರಾಗಿದ್ದಾರೆ.ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆನಡೆಸಿದ ಹೋರಾಟಗಾರರು 4 ವರ್ಷದೊಳಗಿನ ಮಕ್ಕಳಿಗೆ ಆರ್.ಡಿ.ಪಿ.ಆರ್ ರೂಪಿಸುವ ಯಾವುದೇ ಕಾರ್ಯ ಕ್ರಮಗಳನ್ನು ಮತ್ತು - ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳನ್ನು ಮತ್ತೊಮ್ಮೆ ಪರಾಮರ್ಶೆ ಮಾಡಬೇಕು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವುಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು.
ಗುರುವಾರ ಇದೇ ಅಂಗನವಾಡಿ ನೌಕರರ ಸಂಘ ರಾಜ್ಯ ಸಮಿತಿಯಿಂದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆಯ ಮುಂದೆ ಧರಣಿ ನಡೆಸಲಾಗಿತ್ತು. ಶಿಕ್ಷಣ ಇಲಾಖೆ ಇದೀಗ ಆರಂಭಿಸಿರುವ ಎಲ್. ಕೆ.ಜಿ, ಯುಕೆಜಿಗೆ ದಾಖಲಾಗುವ ಮಕ್ಕಳು ಈಸಿಡಿಎಸ್ ನಲ್ಲಿ ಈಗಾಗಲೇ ದಾಖಲಾಗಿರುವುದರಿಂದ ಎರಡು ಕಡೆ ಮಕ್ಕಳು ದಾಖಲು ಆಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಹೇಳಿಕೊಡುವ ಅನೌಪಚಾರಿಕ ಶಿಕ್ಷಣವನ್ನು ಮತ್ತು ಎಬಿಸಿಡಿ ಇಂಗ್ಲಿಷ್ ವರ್ಣಮಾನೆ ಮತ್ತು ಪದಗುಂಚ ಮಾತ್ರವೇ ಬೋಧಿಸುವುದು ಇರುತ್ತದೆ.ಮಕ್ಕಳ ಅಪೌಷ್ಟಿಕತೆಯಡೆಗೆ ಅವರ ಗಮನವಿರುವುದಿಲ್ಲ ಎಂದೂ ನೌಕರರು ಮನವಿಯಲ್ಲಿ ಅಧಿಕಾರಿಗಳು, ಶಾಸಕರ ಗಮನ ಸೆಳೆದಿದ್ದಾರೆ. ತಜ್ಞರ ಸಮೀತಿ ರಚಿಸಿ ವರದಿ ಪಡೆದು ಮುಂದಡಿ ಇಡಬೇಕು ಎಂದೂ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ, ಗೊಂಬಿ, ಮಂಜುಳಾ, ನೀಲಮ್ಮ ಶರಣಸಿರಸಗಿ, ಈರಮ್ಮಾ ದೊಡ್ಡಮನಿ, ಗಂಗಮ್ಮ ಮಹಗಾಂವ, ಜಯಶ್ರೀ ಕಮಲಾಪೂರ, ಜಯಲಕ್ಷ್ಮೀ ಕಮಲಾಪೂರ, ಶರಣಮ್ಮಾ ಫರಹತಾಬಾದ, ಪ್ರಭಾವತಿ ನಂದೂರ, ನಿರ್ಮಲ ಎಸ್.ಬಿ ನಂದೂರ, ಸುನೀತಾ ಆರ್. ಧಮ್ಮ ನಾಪೂರ, ಪಾರ್ವತಿ ಆರ್. ನಂದೂರ, ಗೌರಮ್ಮ ನಂದೂರ ಸೇರಿದಂತೆ ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.