ಸಾರಾಂಶ
ಯಲಬುರ್ಗಾ: ಮಕ್ಕಳ ಶಾಲಾ ಪೂರ್ವ ಶಿಕ್ಷಣಕ್ಕೆ ಅಂಗನವಾಡಿ ಕೇಂದ್ರಗಳು ಪೂರಕ ಎಂದು ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ ಹೇಳಿದರು.
ತಾಲೂಕಿನ ಬುಡಕುಂಟಿ ಗ್ರಾಮದ 2ನೇ ಅಂಗನವಾಡಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಕ್ಷಣಕ್ಕೆ ಮಹತ್ವ ನೀಡಬೇಕು. ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಪೌಷ್ಟಿಕತೆ, ಮಕ್ಕಳಲ್ಲಿರುವ ರಕ್ತಹೀನತೆ ಹೋಗಲಾಡಿಸಲು ಕ್ರಮ ವಹಿಸಲಾಗುತ್ತಿದೆ.ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ಕಾಪಾಡಲು ಸರ್ಕಾರ ನಾನಾ ಯೋಜನೆ ಜಾರಿಗೊಳಿಸಿದೆ. ಅವುಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ ಎಂದರು.
ತಾಲೂಕಿನಲ್ಲಿ ಅಗತ್ಯವಿರುವ ಕಡೆಗಳಲ್ಲಿ ನೂತನ ಕಟ್ಟಡ ನಿರ್ಮಿಸಿ,ಬಳಕೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ.ಇದರಿಂದ ಮಕ್ಕಳಿಗೂ ಉತ್ತಮ ವಾತಾವರಣ ನಿರ್ಮಿಸುವ ಮೂಲಕ ಪೋಷಣೆ ಮತ್ತು ಆರೈಕೆ ಮಾಡಲಾಗುತ್ತಿದೆ. ಸಕಾಲದಲ್ಲಿ ಆಹಾರ ಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತಿವೆ ಎಂದರು. ಅಂಗನವಾಡಿ ಮೇಲ್ವಿಚಾರಕಿ ಲಲಿತ ನಾಯಕ್ ಮಾತನಾಡಿದರು.ಈ ಸಂದರ್ಭದಲ್ಲಿ ಬಸಣ್ಣ ಮಂಗಳೂರು, ಶಿವಪ್ಪ ಹುನಗುಂದ, ಶರಣಪ್ಪ ಬುರಡಿ, ಬಸವರಾಜ ಮೇಟಿ, ವೆಂಕಟೇಶ ಕೊಂಡಗುರಿ, ಕಳಕಪ್ಪ ವಣಗೇರಿ, ಕಾಳಪ್ಪ ಹಾದಿಮನಿ, ಮಹೇಶ ಚುಕ್ಕಾಡಿ, ಭೀಮಪ್ಪ ತೊಂಡಿಹಾಳ, ಪ್ರಶಾಂತ ಹೊಸೂರ, ಪರಸಪ್ಪ ಹುನಗುಂದ, ಬಸವರಾಜ ಆಡಿನ, ಬಸವರಾಜ ಭೂತನವರ, ಕಳಕಪ್ಪ ಬುರಡಿ, ಸಿದ್ದಮ್ಮ ಭೂತನವರ, ಗಿರಿಜಮ್ಮ ಹಿರೇಮಠ, ಚನ್ನಬಸಮ್ಮ ಹೊಸೂರ, ನೀಲಮ್ಮ ಹೊಸೂರ, ಆಶಾ ಕಾರ್ಯಕರ್ತೆ ಸರಸ್ವತಿ ಕೋಳೂರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.