ಸಾರಾಂಶ
ಓಬಳಾಪುರ ದೊಡ್ಡ ತಾಂಡಾದಲ್ಲಿ ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಲಮಾಣಿ ಧರ್ಮ ಪ್ರಚಾರ ನಡೆಸಿ, ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆಂದು ಆರೋಪಿಸಿ ತಾಂಡಾ ನಿವಾಸಿಗಳು ಸಿಡಿಪಿಗೆ ನಾಗರಿಕರ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಅಂಗನವಾಡಿ ಕಾರ್ಯಕರ್ತೆ ಕ್ರೈಸ್ತಧರ್ಮ ಪ್ರಚಾರ ಮಾಡುತ್ತ ಜನರನ್ನು ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದು, ತಕ್ಷಣ ಕೆಲಸದಿಂದ ವಜಾ ಮಾಡಲು ತಾಲೂಕಿನ ಓಬಳಾಪುರ ದೊಡ್ಡ ತಾಂಡಾ ಗ್ರಾಮಸ್ಥರು ಸಿಡಿಪಿಒಗೆ ದೂರು ನೀಡಿದ್ದಾರೆ.ತಾಲೂಕಿನ ಓಬಳಾಪುರ ದೊಡ್ಡ ತಾಂಡಾದಲ್ಲಿ ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಲಮಾಣಿ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಜನನ, ಮರಣ ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ, ಗರ್ಭಿಣಿಯರಿಗೆ, ಮಕ್ಕಳಿಗೆ ಸರಿಯಾಗಿ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿಲ್ಲ. ಅಂಗನವಾಡಿಯಲ್ಲೂ ಇರಲ್ಲ ಕಾರಣ ತಕ್ಷಣದಿಂದ ಅಂಗನವಾಡಿ ಕಾರ್ಯಕರ್ತೆ ಹುದ್ದೆಯಿಂದ ವಜಾ ಮಾಡಿ ಸಮಗ್ರ ತನಿಖೆ ನಡೆಸಲು ಒತ್ತಾಯಿಸಲಾಗಿದೆ.
ತಾಂಡಾದಲ್ಲಿ ಧರ್ಮ ವಿರೋಧಿ ಕೆಸಲ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ತಾಂಡಾದ ನಾಗರಿಕರು ಯಾವುದೇ ಸಹಕಾರ ನೀಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.ಗ್ರಾಮಸ್ಥರಾದ ಶಂಕರ ಚವ್ಹಾಣ, ಚಂದು ಲಮಾಣಿ, ಪರಶುರಾಮ ರಾಠೋಡ, ಪರಶುರಾಮ ಜಾಧವ, ಸುಭಾಷ ಜಾಧವ, ಚಂದು ನಾಯ್ಕ, ಸೋಮಪ್ಪ ಜಾಧವ ಇತರರು ಸಹಿ ಮಾಡಿದ ಮನವಿ ಸಲ್ಲಿಸಿದ್ದಾರೆ.