ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಬೃಹತ್ ಪ್ರತಿಭಟನಾ ಧರಣಿ ಸ್ಥಳಕ್ಕೆ ಎರಡನೇ ದಿವಸದಂದು ಎಡಿಸಿ ಕೆ.ಟಿ. ಶಾಂತಲಾ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿದ ನಂತರ ಹೋರಾಟ ಅಂತ್ಯಗೊಳಿಸಿದರು.ಇದೇ ವೇಳೆ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಬಿ.ಎಂ ಪುಷ್ಪ ಮಾತನಾಡಿ, ಅಂಗನವಾಡಿ ನೌಕರರ ಹಲವು ಬೇಡಿಕೆಗಳ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತದೆ. ಆದರೆ ಈವರೆಗೂ ಆಳುವ ಸರ್ಕಾರಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ ೫೦ ವರ್ಷಗಳು ಸಮೀಪಿಸುತ್ತದೆ. ಪಾಲನೆ ಪೋಷಣೆ ಶಿಕ್ಷಣ ಸಂವಿಧಾನಬದ್ಧ ಕರ್ತವ್ಯಗಳಿವೆ. ಮತ್ತು ೨೦೧೩ರ ಆಹಾರ ಭದ್ರತಾ ಕಾಯ್ದೆ ೨೦೦೯ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಕಾರ್ಯಕರ್ತರು ಮತ್ತು ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ಗುಜರಾತ್ ಕೋರ್ಟುಗಳು ಇವರನ್ನು ಮೂರು ಮತ್ತು ನಾಲ್ಕನೇ ಗ್ರೇಡ್ ನೌಕರರಾಗಿ ಪರಿಗಣಿಸಲು ಜಂಟಿ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕೆಂದು ತೀರ್ಪು ನೀಡಿದೆ ಮತ್ತು ಸುಪ್ರೀಂಕೋರ್ಟ್ ೧೯೭೨ರ ಗ್ರಾಚ್ಯುಟಿ ಕಾಯ್ದೆಯಡಿ ಅರ್ಹರೆಂದು ತೀರ್ಪು ನೀಡಿದೆ ಆದರೆ ಕರ್ನಾಟಕ ರಾಜ್ಯದಲ್ಲಿ ಈ ವರೆಗೂ ಇದು ಜಾರಿಯಾಗಿಲ್ಲ.
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರನ್ನು ವರ್ಗ ಮೂರು ಮತ್ತು ನಾಲ್ಕು ಎಂದು ಪರಿಗಣಿಸಿ ಕಾಯಂಗೊಳಿಸಬೇಕು, ಕೂಡಲೇ ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಿ ಎಲ್ಲರಿಗೂ ಅನ್ವಯಿಸುವಂತೆ ಕಾನೂನು ರೂಪಿಸಬೇಕು ಕೇಂದ್ರ ಸರ್ಕಾರ ನಮ್ಮ ಗೌರವಧನವನ್ನು ೨೬,೦೦೦ಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ನಿವೃತ್ತಿಯಾದವರಿಗೆ ಇಡಿ ಗಂಟು ಹಾಗೂ ೧೦,೦೦೦ ಮಾಸಿಕ ಪಿಂಚಣಿಯನ್ನು ನೀಡಬೇಕು. ಶಿಕ್ಷಣ ಇಲಾಖೆ ತ್ತು ಎಸ್ಡಿಎಂಸಿಗಳಿಂದ ಪ್ರಾರಂಭ ಮಾಡಿರುವ ಎಲ್‌ಕೆಜಿ, ಯುಕೆಜಿಯನ್ನು ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಜೊತೆಗೆ ಸಾಮೂಹಿಕ ಆರೋಗ್ಯ ವಿಮೆ ಕಲ್ಪಿಸಿ ನಮ್ಮ ಇನ್ನಿತರ ಬೇಡಿಕೆಗಳನ್ನು ಕೂಡ ಅತಿ ಶೀಘ್ರವಾಗಿ ಈಡೇರಿಸಬೇಕು ಎಂದು ಮನವರಿಕೆ ಮಾಡಿದರು.ಇದಾದ ನಂತರ ಅಪಾರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರತಿಭಟನಗಾರರನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ಎಲ್ಲಾ ಬೇಡಿಕೆಗಳ ಬಗ್ಗೆ ಆಲಿಸಿದ್ದು, ಇಲ್ಲೇ ಆಗುವ ಬೇಡಿಕೆಗಳನ್ನು ಈಡೇರಿಸಿ ಉಳಿದ ಬೇಡಿಕೆಗಳನ್ನು ರಾಜ್ಯ ಸರಕಾರಕ್ಕೆ ಪ್ರಾಮಾಣಿಕವಾಗಿ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಎರಡು ದಿನದ ಹೋರಾಟ ಕೈಬಿಟ್ಟರು.
ಇದೇ ವೇಳೆ ಸಿಐಟಿಯು ಜಿಲ್ಲಾದ್ಯಕ್ಷ ಧರ್ಮೇಶ್, ಸಂಘಟನೆ ಉಪಾಧ್ಯಕರುಗಳಾದ ಶಾರದ, ಕಾಮಾಕ್ಷಿ ರಾಜು, ಎಚ್.ಟಿ.ಮೀನಾಕ್ಷಿ ಕಾರ್ಯದರ್ಶಿಗಳಾದ ಟಿ ಎಚ್. ಜಯಂತಿ, ಕೆಪಿ.ವೀಣಾ ,ಸುಮಿತ್ರಾ, ವೀಣಾ, ಗೀತಾ, ಜರೀನಾ, ಬಿ ಕೆ ಸಂಗೀತ, ಅರವಿಂದ್ ಉಪಸ್ಥಿತರಿದ್ದರು.