ಸಾರಾಂಶ
ಕಳಸ ಶಾಪಗ್ರಸ್ತ ತಾಲೂಕು ಎಂಬ ಹಣೆಪಟ್ಟಿಯಿಂದ ಹೊರ ತರಲು ಸರ್ಕಾರ ಕಟಿ ಬದ್ಧವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಳಸ ತಾಲೂಕಿನ ಸೃಜನಶೀಲ ಸಂಘಟನೆ ಮತ್ತು ವ್ಯಕ್ತಿಗಳು ಒಳಗೊಂಡ ಸಂಯುಕ್ತ ವೇದಿಕೆ ನಿರ್ಮಿಸಲು ಪ್ರಯತ್ನಿಸ ಲಾಗುವುದು ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್ ಅಂಗಿರಸ ಹೇಳಿದರು.
- ತಾಲೂಕು ಮಟ್ಟದ ಇಲಾಖೆ ಕಾರ್ಯಾ ನಿಷ್ಕ್ರಿಯ
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುಕಳಸ ಶಾಪಗ್ರಸ್ತ ತಾಲೂಕು ಎಂಬ ಹಣೆಪಟ್ಟಿಯಿಂದ ಹೊರ ತರಲು ಸರ್ಕಾರ ಕಟಿ ಬದ್ಧವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಳಸ ತಾಲೂಕಿನ ಸೃಜನಶೀಲ ಸಂಘಟನೆ ಮತ್ತು ವ್ಯಕ್ತಿಗಳು ಒಳಗೊಂಡ ಸಂಯುಕ್ತ ವೇದಿಕೆ ನಿರ್ಮಿಸಲು ಪ್ರಯತ್ನಿಸ ಲಾಗುವುದು ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಕಾರ್ಯಕರ್ತ ನಾಗೇಶ್ ಅಂಗಿರಸ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021ನೇ ಜೂನ್ 12ರ ಸರ್ಕಾರಿ ಅದಿಸೂಚನೆ ಪ್ರಕಾರ ಆಡಳಿತ ನಡೆಸುವ ಸರ್ಕಾರದ ಎಲ್ಲಾ ತಾಲೂಕು ಮಟ್ಟದ ಇಲಾಖೆಗಳು ಕಾರ್ಯಾರಂಭ ಮಾಡಬೇಕಿದ್ದರೂ, ಇದುವರೆಗೂ ನಿಷ್ಕ್ರಿಯ ವಾಗಿದೆ ಎಂದು ಹೇಳಿದರು.ಕಳಸ ತಾಲೂಕು ವ್ಯಾಪ್ತಿಯ 6 ಗ್ರಾಮ ಪಂಚಾಯತಿಗಳ ಪೈಕಿ 4 ಪಂಚಾಯತಿಗಳಲ್ಲಿ ಪಿಡಿಒಗಳಿಲ್ಲ, ಪಶು ವೈದ್ಯರಿಲ್ಲ, ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ದರ್ಜೆಗೆ ಏರಿಸಿಲ್ಲ ಎಂದರು.
2023ನೇ ಕೊನೆ ದಿನಗಳಲ್ಲಿ ಜನಸಂಪರ್ಕ ಸಭೆಯಲ್ಲಿ ತಾಲೂಕು ಮಟ್ಟಗಳ ವಿವಿಧ ಇಲಾಖೆಗಳು ಪ್ರಾರಂಭವಾಗುವವರೆಗೆ ಮೂಡಿಗೆರೆಯಿಂದ ವಿವಿಧ ಇಲಾಖೆ ಅಧಿಕಾರಿಗಳನ್ನು ವಾರಕ್ಕೊಮ್ಮೆಯಾದರೂ ಕಳಸದಲ್ಲಿ ಕರ್ತವ್ಯ ನಿರ್ವಹಿಸುವ ಕುರಿತು ನೀಡಿದ ವಾಗ್ದಾನ ಸುಳ್ಳಾಗಿದೆ ಎಂದರು.ಕಳಸ ತಾಲೂಕಿನ 6,777 ಎಕರೆ ವ್ಯಾಪ್ತಿಯಲ್ಲಿ 638 ಕುಟುಂಬಗಳನ್ನು ಸುಪ್ರೀಂಕೋರ್ಟಿನ ಕತ್ತಿಯ ಅಲಗಿನಿಂದ ಕಾಪಾಡುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ ಇದೆ. 2012ರ ರಾಜ್ಯ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಲ್ಲಿ ಎಲ್ಲಾ ಕುಟುಂಬಗಳು ಬೀದಿ ಪಾಲಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಇದಕ್ಕೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ರೆಸಾರ್ಟ್ ಮತ್ತು ಹೋಂ ಸ್ಟೇಗಳು ಪ್ರಾಮಾಣಿಕವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಅರಣ್ಯ ಮತ್ತು ಕಂದಾಯ ಭೂಮಿ ಒತ್ತುವರೆ ನಕಲಿ ಭೂ ದಾಖಲೆಗಳ ಸೃಷ್ಟಿ, ಬೇನಾಮಿ ಹೆಸರಿನಲ್ಲಿ ಉಳ್ಳವರೇ ಪಡೆಯು ತ್ತಿರುವ ಸಾಗುವಳಿ ಚೀಟಿಗಳು, ಆನೆ ಹೆಸರಿನಲ್ಲಿ ತಡೆಗೋಡೆ ಎಂದು ಬಿಂಬಿಸಿ ತಮ್ಮ ತೋಟಗಳಿಗೆ ಸುಸಜ್ಜಿತ ಕಾಂಕ್ರಿಟ್ ಬೇಲಿಗಳನ್ನು ಮಾಡಿಸಿಕೊಳ್ಳುತ್ತಿರುವ ಜನಪ್ರತಿನಿಧಿಗಳು, ಕಳಸ ತಾಲೂಕಿನ ಸೃಜನಶೀಲ ಬೆಳವಣಿಗೆಗೆ ಕಂಟಕ ಪ್ರಾಯ ರಾಗಿದ್ದಾರೆ ಎಂದರು.ಪೋಟೋ ಪೈಲ್ ನೇಮ್ 5 ಕೆಸಿಕೆಎಂ 1