ಸಾರಾಂಶ
ಮಡಿಕೇರಿ : ಕೊಡಗು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಒನ್ ನ ಪ್ರಧಾನ ಸಂಪಾದಕ, ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೊಡಗು ನ್ಯೂಸ್ ಸಂಪಾದಕ ಸುರೇಶ್ ಬಿಳಿಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಡಿಕೇರಿ ನಗರದ ಪತ್ರಿಕಾ ಭವನದಲ್ಲಿ ಹಾಲಿ ಅಧ್ಯಕ್ಷ ಎಸ್.ಎ. ಮುರಳೀಧರ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಹಿರಿಯ ಸಲಹೆಗಾರ ಟಿ.ಪಿ.ರಮೇಶ್ ಅವರು ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಸರ್ವ ಸದಸ್ಯರ ಒಪ್ಪಿಗೆ ಪಡೆದು ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಿದರು.ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಬಿಳಿಗೇರಿ, ಉಪಾಧ್ಯಕ್ಷರಾಗಿ ತೇಲಪಂಡ ಕವನ್ ಕಾರ್ಯಪ್ಪ, ಕೋಶಾಧಿಕಾರಿ ಟಿ.ಕೆ.ಸಂತೋಶ್, ಕ್ಷೇಮನಿಧಿ ಅಧ್ಯಕ್ಷರಾಗಿ ಜಿ.ವಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಕೂರ್ಗ್, ಸಂಘದ ಸಹ ಕಾರ್ಯದರ್ಶಿಯಾಗಿ ಪ್ರಸಾದ್ ಸಂಪಿಗೆಕಟ್ಟೆ, ಖಾಯಂ ಆಹ್ವಾನಿತರಾಗಿ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎ.ಮುರಳೀಧರ್ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿ ನಿರ್ದೇಶಕರು: ಉಜ್ವಲ್ ರಂಜಿತ್, ಟಿ. ಜಿ. ಸತೀಶ್, ಟಿ.ಜೆ. ಪ್ರವೀಣ್ ಕುಮಾರ್, ರಂಜಿತ್ ಕವಲಪಾರ, ಸಯ್ಯದ್ ಇರ್ಫಾನ್, ಎಚ್.ಎನ್.ಲಕ್ಷೀಶ್, ಗುರುದರ್ಶನ್, ಪಿ.ವಿ. ಪ್ರಭಾಕರ್, ಕುಡೆಕಲ್ ಸಂತೋಷ್, ವತ್ಸಲ, ರಾಣಿ ಅರುಣ್, ಮಹಮದ್ ಹನೀಫ್, ಎಂ.ಎನ್. ನಾಸಿರ್, ಅಶ್ವಥ್, ನಾಮನಿರ್ದೇಶಿತ ಸದಸ್ಯರಾಗಿ ಎಸ್.ಜಿ. ಉಮೇಶ್, ವಿಶ್ವಕುಮಾರ್, ಟಿ. ಸಿ. ನಾಗರಾಜ್, ಶಿವಪ್ಪ ಅವರು ಆಯ್ಕೆಯಾಗಿದ್ದಾರೆ.ಸಂಘದ ಗೌರವ ಸಲಹೆಗಾರರಾಗಿ ಟಿ.ಪಿ.ರಮೇಶ್, ಬಿ.ಜಿ.ಅನಂತಶಯನ, ಶ್ರೀಧರ್ ನೆಲ್ಲಿತ್ತಾಯ ಆಯ್ಕೆಯಾಗಿದ್ದಾರೆ.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿಘ್ನೇಶ್ ಭೂತನಕಾಡು, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ. ವಿನ್ಸೆಂಟ್, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಪಿ. ಲೋಕೇಶ್, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷರಾಗಿ ಮುದೋಷ್ ಪೂವಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಉಷಾ ಪ್ರೀತಮ್, ಪೊನ್ನಂಪೇಟೆ ತಾಲೂಕು ಸಂಘದ ಅಧ್ಯಕ್ಷರಾಗಿ ಕಿರಿಯಮಾಡ ರಾಜ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ವಿನೋದ್ ಮೂಡಗದ್ದೆ ಮುಂದುವರೆಯಲಿದ್ದಾರೆ.ಸಂಘದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ ಸಭಾಂಗಣದಲ್ಲಿ ಮಾ.22 ರಂದು ಸಂಜೆ 6ಗಂಟೆಗೆ ಆಯೋಜಿತವಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.