25ನೇ ವಯಸ್ಸಿಗೇ ಜಡ್ಜ್‌ ಹುದ್ದೆಗೆ ಅನಿಲ್:‌ ರಾಜ್ಯದ ಅತಿಕಿರಿಯ!

| Published : Feb 24 2024, 02:32 AM IST / Updated: Feb 24 2024, 12:13 PM IST

Anil John Sequeira
25ನೇ ವಯಸ್ಸಿಗೇ ಜಡ್ಜ್‌ ಹುದ್ದೆಗೆ ಅನಿಲ್:‌ ರಾಜ್ಯದ ಅತಿಕಿರಿಯ!
Share this Article
  • FB
  • TW
  • Linkdin
  • Email

ಸಾರಾಂಶ

ಅನಿಲ್ ಸಿಕ್ವೆರಾ ಅವರು ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಎರಡೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು ಪ್ರಿಲಿಮಿನರಿ, ಮೈನ್ಸ್ ಮತ್ತು ಸಂದರ್ಶನ ಪಾಸ್‌ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಂಟ್ವಾಳ ಮೂಲದ 25ರ ಹರೆಯದ ಯುವಕ ಅನಿಲ್‌ ಜಾನ್‌ ಸಿಕ್ವೆರಾ 2023ರ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಪಾಸ್ ಮಾಡಿದ್ದು, ಆ ಮೂಲಕ ರಾಜ್ಯದಲ್ಲಿ ಜಡ್ಜ್ ಹುದ್ದೆಗೇರಲಿರುವ ಅತಿ ಕಿರಿಯ ವ್ಯಕ್ತಿ ಎನ್ನುವ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್‌ಎಲ್ ಬಿ ಪೂರೈಸಿದ್ದ ಅನಿಲ್ ಜಾನ್‌ ಸಿಕ್ವೆರಾ ಕಾಲೇಜು ದಿನಗಳಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. 

ಬಂಟ್ವಾಳದ ಬರಿಮಾರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು.

ಕಾನೂನು ಪದವಿಯ ಬಳಿಕ ಮಂಗಳೂರಿನಲ್ಲಿ ಬಾ‌ರ್ ಅಸೋಸಿಯೇಶನ್‌ ಸದಸ್ಯರಾಗಿ ಪ್ರಾಕ್ಟಿಸ್ ಆರಂಭಿಸಿದ್ದರು. ಮಂಗಳೂರಿನ ವಕೀಲರಾದ ದೀಪಕ್ ಡಿಸೋಜಾ ಮತ್ತು ನವೀನ್ ಪಾಯಸ್ ಜೊತೆಗೆ ವೃತ್ತಿ ನಡೆಸುತ್ತಿದ್ದರು. 

ಕಾಲೇಜು ದಿನಗಳಲ್ಲಿಯೇ ನಾಯಕತ್ವ ಬೆಳೆಸಿಕೊಂಡಿದ್ದ ಅನಿಲ್ ಸಿಕ್ಕೇರಾ 2022ರಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಇಂಡಿಯನ್ ಕೆಥೋಲಿಕ್ ಯೂತ್ ಮೂಮೆಂಟ್ ಸಂಘಟನೆಯ ಅಧ್ಯಕ್ಷರಾಗಿದ್ದರು. 

ಅನಿಲ್ ಸಿಕ್ವೆರಾ ಅವರು ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಎರಡೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು ಪ್ರಿಲಿಮಿನರಿ, ಮೈನ್ಸ್ ಮತ್ತು ಸಂದರ್ಶನ ಪಾಸ್‌ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.