ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ, ಗ್ರಾಮಸ್ಥರು ಪರಸ್ಪರ ಸಹಾಯ, ಸಹಕಾರ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸಾಧ್ಯ ಎಂದು ಯುವ ಧುರೀಣ ರಾಹುಲ ಜಾರಕಿಹೊಳಿ ಹೇಳಿದರು.ಮಂಗಳವಾರ ಪಾಶ್ಚಾಪುರದಲ್ಲಿ ಪಶುವೈದ್ಯಕೀಯ ಸೇವಾ ಇಲಾಖೆಯ ಆರ್.ಐ.ಡಿ.ಎಫ್. ಯೋಜನೆಯಡಿ ಮಂಜೂರಾದ ₹38 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಪಶು ಚಿಕಿತ್ಸಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸಚಿವ ಸತೀಶ ಜಾರಕಿಹೊಳಿಯವರು ಪಾಶ್ಚಾಪುರ ಗ್ರಾಮದ ಬಗ್ಗೆ ಕಾಳಜಿ ಹೊಂದಿದ್ದು, ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಪಾಶ್ಚಾಪುರ ಭಾಗದ ಜನರ ಬಹುದನಗಳ ಬೇಡಿಕೆಯಾದ ಪಶುಚಿಕಿತ್ಸಾಲಯ ಕಟ್ಟಡ ಉದ್ಘಾಟನೆ ಆಗಿದ್ದರಿಂದ ರೈತರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಅನುಕೂಲವಾಗಲಿದೆ. ರೈತರು ಇದರ ಲಾಭ ಪಡೆದುಕೊಂಡು ಹೈನುಗಾರಿಕೆ ಉದ್ಯಮ ಬೆಳೆಸಿಕೊಳ್ಳಬೇಕೆಂದರು.
ಪಾಶ್ಚಾಪುರ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲಗನಿ ದರ್ಗಾ ಮಾತನಾಡಿ, ಪಾಶ್ಚಾಪುರ ಗ್ರಾಮ ಕೇಂದ್ರ ಬಿಂದುವಾಗಿದ್ದು, ಇಲ್ಲಿ ಪ್ರಥಮ ದರ್ಜೆ ಪದವಿ ಕಾಲೇಜು, ಪಿಯುಸಿ ಕಾಲೇಜುಗಳಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಬಸ್ ನಿಲ್ದಾಣ ಇಲ್ಲ, ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂದರು. ಡಾ.ಅಶೋಕ ಉಮನಾಬಾದಿಮಠ, ಜಿಪಂ ಮಾಜಿ ಸದಸ್ಯ ಮಂಜುನಾಥ ಪಾಟೀಲ, ಗ್ರಾಪಂ ಸದಸ್ಯ ಜಾಕೀರ್ ನದಾಫ್ ಮಾತನಾಡಿದರು.ಪಾಶ್ಚಾಪುರ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವಾ ಸುಣಕುಪ್ಪಿ ಪಶು ಚಿಕಿತ್ಸಾಲಯ ಕಟ್ಟಡವನ್ನು ಉದ್ಘಾಟಿಸಿದರು. ಪಾಶ್ಚಾಪುರ ಗ್ರಾಪಂ ಸದಸ್ಯರಾದ ಬಸೀರ್‌ಅಹ್ಮದ ಅತ್ತಾರ, ಗೀತಾ ಉಪ್ಪಾರ, ಭೀಮಶಿ ನಿಪನಾಳ ಮತ್ತು ಪಾಶ್ಚಾಪುರ ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಅಂಬಿಗೇರ, ದತ್ತಾತ್ರೇಯ ಹಜ್ಜೆ, ಎನ್.ಎಸ್. ಮೋಮಿನ್, ಸಚಿವ ಸತೀಶ ಜಾರಕಿಹೊಳಿಯವರ ಆಪ್ತ ಸಹಾಯಕ ವಿನೋಧ ಡೊಂಗ್ರೆ, ಮಾರುತಿ ಗುಟಗುದ್ದಿ, ಫಜಲ್ ಮಕಾನದಾರ, ಹಯಾತ್‌ಚಾಂದ್ ಸನದಿ, ರತ್ನವ್ವಾ ಸೊಲ್ಲಾಪುರಿ, ಬಾನು ನದಾಫ್, ವಂದನಾ ಬಸನಾಯ್ಕ, ಭೂಸೇನಾ ನಿಗಮದ ಎ.ಇ.ಇ. ಆರ್.ಪಿ. ನಾರಾಯಣಕರ, ಅಮರ ಬಿರಡೆ ಮತ್ತು ಪಶು ವೈದ್ಯಾಧಿಕಾರಿ ಶೈನಾಜ್ ಮೈಮೂದ್, ಪಿಡಿಒ ಎಸ್.ಎಸ್. ಡಂಗ, ಮತ್ತು ರೋಹಿತ ಆಡಿಮನಿ, ವಿನೋದ ಉವನಾಬಾದಿಮಠ, ಸರಪರಾಜ ಪೀರಜಾದೆ, ವಿಲಾಸ ಕೊಲೆ, ಅಡಿವೆಪ್ಪ ಕುಡಜೋಗಿ ಹಾಗೂ ಗ್ರಾಮಸ್ಥರು ಇದ್ದರು.