ಜೋಳಿಗೆ ಹಣ ಅಂಜಲಿ ಕುಟುಂಬಕ್ಕೆ ನೀಡುವೆ : ಚಂದ್ರಶೇಖರ ಶಿವಾಚಾರ್ಯ ಶ್ರೀ

| Published : May 21 2024, 12:45 AM IST / Updated: May 21 2024, 02:22 PM IST

ಜೋಳಿಗೆ ಹಣ ಅಂಜಲಿ ಕುಟುಂಬಕ್ಕೆ ನೀಡುವೆ : ಚಂದ್ರಶೇಖರ ಶಿವಾಚಾರ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕೊಲೆ ಮಾಡಿದ ಪಾಪಿಗೆ ಮರಣ ದಂಡನೆ ಶಿಕ್ಷೆಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಆಗ್ರಹ

 ಬೆಳಗಾವಿ :  ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಬೆಳಗಾವಿ ಹುಕ್ಕೇರಿ ಹಿರೇಮಠದಲ್ಲಿ ನಡೆದ ಶಿವದಿಕ್ಷೆ ( ಅಯ್ಯಾಚಾರ) ಪಡೆದ ವಟುಗಳು ಜೋಳಿಗೆಯಲ್ಲಿ ಬಂದ ಹಣವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ₹50 ನೀಡಲಿದ್ದಾರೆ. 

ಹಿಂದು ಧರ್ಮದ ವೀರಶೈವ ಧರ್ಮದಲ್ಲಿ ಜಂಗಮರಿಗೆ ಲಿಂಗದಿಕ್ಷೆ ಮಹತ್ವದಾಗಿದೆ. ಇವತ್ತು ಬೆಳಗಾವಿ ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಶಿವದಿಕ್ಷಾ ಕಾರ್ಯಕ್ರಮದಲ್ಲಿ ಜಂಗಮರ ಜೋಳಿಗೆಯಲ್ಲಿ ಬಂದಂತಹ ಹಣ ₹50 ಸಾವಿರವನ್ನು ಮೃತ ಅಂಜಲಿ ಅಂಬಿಗೇರ ಕುಟುಂಬಕ್ಕೆ ನೀಡಲು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ನಿರ್ಧರಿಸಿದ್ದಾರೆ. 

ನಂತರ ಮಾತನಾಡಿದ ಶ್ರೀಗಳು ವಿರಶೈವ ಧರ್ಮದ ಮಠಗಳು ಕೇವಲ ಪೂಜೆ ಪುನಸ್ಕಾರಗಳನ್ನು ಮಾಡಲು ಸಿಮಿತವಾಗದೇ ಕಷ್ಟದಲ್ಲಿ ನೊಂದ ಕುಟುಂಬಕ್ಕೆ ನೆರವುವಾಗುವ ಕಾರ್ಯ ಮಾಡುತ್ತಿವೆ. ಇವತ್ತು ಹುಕ್ಕೇರಿ ಹಿರೇಮಠದಲ್ಲಿ ನಡೆದ ಶಿವದಿಕ್ಷೆಯಲ್ಲಿ ವಟುಗಳ ಜೋಳಿಗೆಯಲ್ಲಿ ಬಂದಂತಹ ಹಣವನ್ನು ಮೃತ ಅಂಜಲಿ ಅಂಬಿಗೇರ ಕುಟುಂಬಕ್ಕೆ ನೀಡಿದ್ದೇವೆ. ಸರ್ಕಾರ ಕೂಡಲೇ ನೇಹಾ ಹಿರೇಮಠ ಹಂತಕ ಹಾಗೂ ಅಂಜಲಿ ಅಂಬಿಗೇರ ಕೊಲೆ ಮಾಡಿದ ಪಾಪಿಗೆ ಮರಣ ದಂಡನೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.