ವಿದ್ಯುದ್ದೀಪಗಳಿಂದ ಕಂಗೊಳಿದ ಅಂಜನಾದ್ರಿ ಬೆಟ್ಟ

| Published : Dec 23 2023, 01:46 AM IST

ಸಾರಾಂಶ

ಭಕ್ತರಿಗೆ ಉತ್ತಮ ವ್ಯವಸ್ಥೆ ಮಾಡಬೇಕು, ಉತ್ತಮ ಸಂದೇಶ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ನಳಿನ್ ಅತುಲ್ ಅಲಂಕಾರ ಸಮಿತಿಯನ್ನು ರಚಿಸಿ, ಬೆಟ್ಟದ ಅಲಂಕಾರಕ್ಕೂ ಅಷ್ಟೇ ಆದ್ಯತೆ ನೀಡಬೇಕು ಎಂದು ವಿದ್ಯುತ್ ದೀಪ ಅಳವಡಿಸಲು ಸೂಚಿಸಿದ್ದರು. ಈಗ ಅಳವಡಿಸಿದ ವಿದ್ಯುದ್ ದೀಪದ ಬೆಳಕಿನಲ್ಲಿ ಅಂಜನಾದ್ರಿ ಬೆಟ್ಟ ಕಂಗೊಳಿಸುತ್ತಿದೆ.

ಕೊಪ್ಪಳ: ಡಿ.23, 24ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಮನೆ ಮಾಡಿದ್ದು, ವಿದ್ಯುತ್‌ ದೀಪಗಳಿಂದ ಅಂಜನಾದ್ರಿ ಬೆಟ್ಟ ಕಂಗೊಳಿಸುತ್ತಿದೆ.ಭಕ್ತರಿಗೆ ಉತ್ತಮ ವ್ಯವಸ್ಥೆ ಮಾಡಬೇಕು, ಉತ್ತಮ ಸಂದೇಶ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ನಳಿನ್ ಅತುಲ್ ಅಲಂಕಾರ ಸಮಿತಿಯನ್ನು ರಚಿಸಿ, ಬೆಟ್ಟದ ಅಲಂಕಾರಕ್ಕೂ ಅಷ್ಟೇ ಆದ್ಯತೆ ನೀಡಬೇಕು ಎಂದು ವಿದ್ಯುತ್ ದೀಪ ಅಳವಡಿಸಲು ಸೂಚಿಸಿದ್ದರು. ಈಗ ಅಳವಡಿಸಿದ ವಿದ್ಯುದ್ ದೀಪದ ಬೆಳಕಿನಲ್ಲಿ ಅಂಜನಾದ್ರಿ ಬೆಟ್ಟ ಕಂಗೊಳಿಸುತ್ತಿದೆ.ಅಲಂಕಾರಕ್ಕೆ ಮೆಚ್ಚುಗೆ: ಅಂಜನಾದ್ರಿಗೆ ಭೇಟಿ ನೀಡಿದ ವೇಳೆ ಬಗೆಬಗೆಯ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಬಹುಚೆಂದವಾಗಿ ಕಂಡ ಅಂಜನಾದ್ರಿ ಬೆಟ್ಟದ ಸೊಬಗನ್ನು ಕಂಡು ಸಂಬಂಧಿಸಿದ ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.