ಸಾರಾಂಶ
ಭಕ್ತಿ ಪರಂಪರೆಯ ಸಾಧ್ವಿ ಹೆಳವನಕಟ್ಟೆ ಗಿರಿಯಮ್ಮ ಪುಣ್ಯತಿಥಿ ಮತ್ತು ನಾಗರ ಪಂಚಮಿ ಪ್ರಯುಕ್ತ ಮಂಗಳವಾರ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದ ಆಂಜನೇಯಸ್ವಾಮಿ ಕಾರ್ಣಿಕೋತ್ಸವ ನಡೆಯಿತು. ಶಿಖರದ ತುದಿಗೆ ಘಟಸರ್ಪ ಹಾರಿತಲೇ ಭೂಲೋಕದ ಮುತ್ತು ಗಗನಕ್ಕೇರಿತಲೇ ಎಂದು ವ್ರತನಿರತ ಗಣಮಗ ಕಬ್ಬಿಣದ ಬೃಹತ್ ಬಾಣವನ್ನೇರಿ ಕಾರ್ಣಿಕ ನುಡಿದಿದ್ದಾರೆ.
- ಶಿಖರದ ತುದಿಗೆ ಘಟಸರ್ಪ ಹಾರಿತಲೇ ಭೂಲೋಕದ ಮುತ್ತು ಗಗನಕ್ಕೇರಿತಲೇ...
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಕ್ತಿ ಪರಂಪರೆಯ ಸಾಧ್ವಿ ಹೆಳವನಕಟ್ಟೆ ಗಿರಿಯಮ್ಮ ಪುಣ್ಯತಿಥಿ ಮತ್ತು ನಾಗರ ಪಂಚಮಿ ಪ್ರಯುಕ್ತ ಮಂಗಳವಾರ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದ ಆಂಜನೇಯಸ್ವಾಮಿ ಕಾರ್ಣಿಕೋತ್ಸವ ನಡೆಯಿತು. ಶಿಖರದ ತುದಿಗೆ ಘಟಸರ್ಪ ಹಾರಿತಲೇ ಭೂಲೋಕದ ಮುತ್ತು ಗಗನಕ್ಕೇರಿತಲೇ ಎಂದು ವ್ರತನಿರತ ಗಣಮಗ ಕಬ್ಬಿಣದ ಬೃಹತ್ ಬಾಣವನ್ನೇರಿ ಕಾರ್ಣಿಕ ನುಡಿದರು.ಸಂಪ್ರದಾಯದಂತೆ ಕುಂಬಳೂರಿನ ಗಣಮಗ ಪೂಜೆಗೊಂಡ ಕಬ್ಬಿಣದ ಬಾಣದೊಂದಿಗೆ ಜಾನಪದ ಮೇಳಗಳೊಂದಿಗೆ ತುಂಗಭದ್ರ ನದಿ ತೀರದಲ್ಲಿ ಗಂಗಾಪೂಜೆ ನೆರವೇರಿಸಿದರು. ಹೆಳವನಕಟ್ಟೆ ಗಿರಿಯಮ್ಮನವರು ಐಕ್ಯವಾದ ಸ್ಥಳದಲ್ಲಿ ಗರುಡ ದರ್ಶನ ಪಡೆದ ನಂತರ ಗಣಮಗ ಕಾರ್ಣಿಕ ನುಡಿ ನುಡಿದರು.
ಬೇಡಿಕೆ ಈಡೇರಿಸುವಂತೆ ನವದಂಪತಿಗಳು ಹಾಗೂ ನಿರುದ್ಯೋಗಿಗಳು ಪ್ರಾರ್ಥಿಸಿ, ಹುಣಸೆಮರಕ್ಕೆ ಹರಕೆ ಹೊತ್ತುಕೊಂಡರು. ನೆರದಿದ್ದ ಭಕ್ತರು ಸಂಪ್ರದಾಯದಂತೆ ಮೆಣಸು, ಮಂಡಕ್ಕಿ, ಉತ್ತತ್ತಿಗಳನ್ನ ಮರದ ಸುತ್ತಲು ಪ್ರದಕ್ಷಿಣೆ ಹಾಕಿ, ಹುಣಸೇ ಮರಕ್ಕೆ ಎರಚಿದರು. ಕಾರ್ಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಮಧ್ಯ ಕರ್ನಾಟಕ ಸಹಸ್ರಾರು ಭಕ್ತರು ಆಗಮಿಸಿದ್ದರು. ಗಣಮಗ ನುಡಿಯುವ ಕಾರ್ಣಿಕ ನುಡಿ ಇಡೀ ವರ್ಷದ ಭವಿಷ್ಯ ನಿರ್ಧರಿಸುತ್ತದೆ ಎಂಬ ಗಾಢ ನಂಬಿಕೆ ಭಕ್ತರಲ್ಲಿದೆ.ಅರಕೆರೆ, ನೇರಲಗುಂಡಿ, ಕುಂಬಳೂರು, ಕುಂದೂರು, ಬೆನಕನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಂದ ಆಂಜನೇಯ ಸ್ವಾಮಿ ದೇವರುಗಳು ಕಮ್ಮಾರಗಟ್ಟೆ ಗ್ರಾಮಕ್ಕೆ ಆಗಮಿಸಿ, ಕಾರ್ಣಿಕೋತ್ಸವದಲ್ಲಿ ಪಾಲ್ಗೊಂಡಿದ್ದವು.
- - --29ಎಚ್.ಎಲ್.ಐ3: ಕಮ್ಮಾರಗಟ್ಟೆ ಕಾರ್ಣಿಕೋತ್ಸವದಲ್ಲಿ ಗಣಮಗ ಕಬ್ಬಿಣದ ಬೃಹತ್ (ಅಂಬು) ಬಾಣವನ್ನೇರಿ ಕಾರ್ಣೀಕ ನುಡಿದರು.