ಹಗಲುವೇಷ ಕಲೆ ಶ್ರೀಮಂತಗೊಳಿಸಿದ್ದ ಅಂಜಿನಪ್ಪ

| Published : Dec 15 2023, 01:31 AM IST

ಸಾರಾಂಶ

ಕೂಡ್ಲಿಗಿಜಾನಪದ ಕ್ಷೇತ್ರದಲ್ಲಿ ಅದ್ಭುತ ಕಲಾವಿದರಾಗಿದ್ದ ಧೂಪಂ ಅಂಜಿನಪ್ಪ ಅವರು ಆಧ್ಯಾತ್ಮಿಕತೆಯತ್ತ ಒಲವು ಹೊಂದುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು ಎಂದು ಆರೂಢ ಪರಮಾನಂದ ಆಶ್ರಮದ ಪೀಠಾಧಿಪತಿ ಪರಮಾನಂದರೂಢ ಸ್ವಾಮೀಜಿ ತಿಳಿಸಿದರು.ತಾಲೂಕಿನ ಯರ‍್ರಗುಂಡ್ಲಹಟ್ಟಿಯಲ್ಲಿ ಬುಧವಾರ ಆಯೋಜಿಸಿದ್ದ ಧೂಪಂ ಅಂಜಿನಪ್ಪ ಸ್ವಾಮೀಜಿಯವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಜಾನಪದ ಕ್ಷೇತ್ರದಲ್ಲಿ ಅದ್ಭುತ ಕಲಾವಿದರಾಗಿದ್ದ ಧೂಪಂ ಅಂಜಿನಪ್ಪ ಅವರು ಆಧ್ಯಾತ್ಮಿಕತೆಯತ್ತ ಒಲವು ಹೊಂದುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು ಎಂದು ಆರೂಢ ಪರಮಾನಂದ ಆಶ್ರಮದ ಪೀಠಾಧಿಪತಿ ಪರಮಾನಂದರೂಢ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಯರ‍್ರಗುಂಡ್ಲಹಟ್ಟಿಯಲ್ಲಿ ಬುಧವಾರ ಆಯೋಜಿಸಿದ್ದ ಧೂಪಂ ಅಂಜಿನಪ್ಪ ಸ್ವಾಮೀಜಿಯವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಲೆಮಾರಿ ಸಮುದಾಯದಲ್ಲಿ ಜನಿಸಿದ್ದ ಧೂಪಂ ಅಂಜಿನಪ್ಪ ಅವರು ಹಗಲುವೇಷ ಕಲೆಯನ್ನು ಶ್ರೀಮಂತಗೊಸಿದ್ದ ಶ್ರೇಷ್ಠ ಕಲಾವಿದ. ಅಲ್ಲದೆ, ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆಯ ಮೂಲಕ ನಾಡಿನಲ್ಲಿ ಹೆಸರು ಗಳಿಸಿದ್ದ ಅವರು ಕಳೆದ ೩೦ ವರ್ಷಗಳಿಂದ ಆಧ್ಮಾತ್ಮದತ್ತ ಒಲುವು ತೋರುವ ಮೂಲಕ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದರು. ಅಲ್ಲದೆ, ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಎಲ್ಲ ಸಮುದಾಯಗಳ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಬಸವರಾಜ, ಹಿರಿಯ ಮುಖಂಡ ಬಿ. ಚಿನ್ನಯ್ಯ, ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ನಾಮನಿರ್ದೇಶನ ಚಿತ್ರದುರ್ಗ ಜಿಲ್ಲಾ ಸದಸ್ಯ ಬಿ.ಎಸ್. ಮಂಜಣ್ಣ ಸೇರಿ ಮಹಿಳೆಯರು ಇದ್ದರು.