ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನ ದಾಸೋಹ ಸೇವೆ

| Published : Mar 29 2024, 12:49 AM IST

ಸಾರಾಂಶ

ಕವಿತಾಳದಲ್ಲಿ ಭಕ್ತರಿಗೆ ನರಳಿನ ವ್ಯವಸ್ಥೆ, ತಂಪು ಪಾನೀಯ, ಔಷಧ, ಅಗತ್ಯ ಸೌಲಭ್ಯ ಉದಗಿಸಲಾಗಿತ್ತು. ಪ್ರಸಾದ ಜತೆಗೆ ಮೈ ಕೈ ನೋವು, ಕಾಲು ನೋವಿಗೆ ಮಾತ್ರೆಗಳು, ತಂಪು ಪಾನೀಯಗಳು, ಹಣ್ಣು, ಮತ್ತು ಚಹಾ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕವಿತಾಳ

ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ನೂರಾರು ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನ ದಾಸೋಹದ ಜತೆಗೆ ತಂಪು ಪಾನೀಯ, ಔಷಧ, ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಭಕ್ತರು ಹಗಲಿರುಳು ಪಾದಯಾತ್ರಿಗಳ ಸೇವೆ ಮಾಡುತ್ತಿದ್ದಾರೆ.

ಇಲ್ಲಿನ ಕನಕ ನಗರದ ಬಿಎಸ್‌ಎನ್ಎಲ್ ಕಚೇರಿ ಹತ್ತಿರ ಪಾದ ಯಾತ್ರಿಗಳಿಗೆ ನೆರಳಿನ ವ್ಯವಸ್ಥೆ ಕೈಗೊಳ್ಳಲಾಗಿದ್ದು, ದಿನವಿಡಿ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗ್ಗೆ ಉಪಹಾರಕ್ಕೆ ಒಗ್ಗರಣೆ, ಉಪ್ಪಿಟ್ಟು ಮತ್ತಿತರ ತಿಂಡಿ, ಮದ್ಯಾಹ್ನದ ಭೋಜನಕ್ಕೆ ಹುಗ್ಗಿ, ಖಡಕ್ ರೊಟ್ಟಿ , ಪಲ್ಯ, ಅನ್ನ, ಸಾಂಬಾರು ಮತ್ತು ಮಜ್ಜಿಗೆ, ಮೊಸರಿನ ವ್ಯವಸ್ಥೆ ಮಾಡಲಾಗಿದೆ ಸಂಜೆ ವೇಳೆಗೆ ಬರುವ ಭಕ್ತರಿಗೆ ಮಿರ್ಚಿ ಭಜ್ಜಿ ಮತ್ತಿತರ ಲಘು ತಿಂಡಿ ನೀಡಲಾಗುತ್ತಿದೆ. ಪ್ರಸಾದ ಜತೆಗೆ ಮೈ ಕೈ ನೋವು, ಕಾಲು ನೋವಿಗೆ ಮಾತ್ರೆಗಳು, ತಂಪು ಪಾನೀಯಗಳು, ಹಣ್ಣು, ಮತ್ತು ಚಹಾ ನೀಡಲಾಗುತ್ತಿದೆ.

11 ವರ್ಷಗಳಿಂದ ಶ್ರೀಶೈಲ ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದ್ದು, ಐದು ದಿನಗಳವರೆಗೆ ಊಟ, ಉಪಹಾರ, ಔಷಧ ಒದಗಿಸಲಾಗುವುದು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಸೋಲಾಪುರ, ಅಥಿಣಿ, ಕೋಲ್ಹಾರ, ರಾಯಭಾಗ, ಮುಧೋಳ, ಜಮಖಂಡಿ ಸೇರಿದಂತೆ ವಿವಿಧೆಡೆಯಿಂದ ಬರುವ ನೂರಾರು ಪಾದಯಾತ್ರಿಗಳಿಗೆ ವಿಶ್ರಾಂತಿ ಪಡೆಯಲ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ಮೂಲಕ ಆಗಮಿಸುವ ಕುರಿತು ಭಕ್ತರು ಮುಂಚಿತವಾಗಿಯೇ ಮಾಹಿತಿ ನೀಡುತ್ತಾರೆ. ಅದರಂತೆ ಸಮಯಕ್ಕೆ ಸರಿಯಾಗಿ ಅವರಿಗೆ ಬೇಕಾದ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಶಿವನಪ್ಪ ದಿನ್ನಿ, ಯಮನಪ್ಪ ದಿನ್ನಿ ಮತ್ತು ಶಿವಣ್ಣ ತಾತ ತಿಳಿಸಿದರು.

ಅಮರೇಶ ದಿನ್ನಿ, ಕರಿಯಪ್ಪ ತೋಳ, ಅಯ್ಯಪ್ಪ ತೋಳ, ಮೌನೇಶ ಪೂಜಾರಿ ದಿನ್ನಿ, ಮಾಳಪ್ಪ ಪೂಜಾರಿ, ನಾಗಪ್ಪ, ನಿಂಗಪ್ಪ ಹಿರೇಕುರಬರ, ದೊಡ್ಡ ಕರಿಯಪ್ಪ ದಿನ್ನಿ, ಕೊಟ್ರಪ್ಪ ಇಟಗಿ, ಭೀರಪ್ಪ ದಿನ್ನಿ, ಸಿದ್ದನಗೌಡ, ಶಿವಪ್ಪ ಹೀರಾ ನಿಂಗಣ್ಣ ಪೂಜಾರಿ, ದುರಗಪ್ಪ ಮಾಳಿ ಉಪಸ್ಥಿತರಿದ್ದರು.