ಶ್ರೀಶೈಲ ಪಾದಯಾತ್ರಿಗಳಿಗೆ ಗಣಾಚಾರಿ ದಂಪತಿಯಿಂದ ಅನ್ನದಾಸೋಹ ಸೇವೆ

| Published : Mar 29 2024, 12:51 AM IST / Updated: Mar 29 2024, 12:52 AM IST

ಶ್ರೀಶೈಲ ಪಾದಯಾತ್ರಿಗಳಿಗೆ ಗಣಾಚಾರಿ ದಂಪತಿಯಿಂದ ಅನ್ನದಾಸೋಹ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರಪ್ರದೇಶದ ಶ್ರೀಶೈಲ ಮಲ್ಲಯ್ಯನ ಜಾತ್ರೆಗೆ ತೆರಳುವ ಪಾದಯಾತ್ರಿಗಳಿಗೆ ನಿವೃತ್ತ ತಹಸೀಲ್ದಾರ್‌ ಎಸ್.ಡಿ.ಗಣಾಚಾರಿ ದಂಪತಿ ಮೂರು ದಿನ ಹಗಲು ಮತ್ತು ರಾತ್ರಿ ನಿರಂತರ ಅನ್ನದಾಸೋಹ ಸೇವೆ ಕಲ್ಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಆಂಧ್ರಪ್ರದೇಶದ ಶ್ರೀಶೈಲ ಮಲ್ಲಯ್ಯನ ಜಾತ್ರೆಗೆ ತೆರಳುವ ಪಾದಯಾತ್ರಿಗಳಿಗೆ ನಿವೃತ್ತ ತಹಸೀಲ್ದಾರ್‌ ಎಸ್.ಡಿ.ಗಣಾಚಾರಿ ದಂಪತಿ ಮೂರು ದಿನ ಹಗಲು ಮತ್ತು ರಾತ್ರಿ ನಿರಂತರ ಅನ್ನದಾಸೋಹ ಸೇವೆ ಕಲ್ಪಿಸಿದ್ದಾರೆ.

ತಾಲೂಕಿನ ಕೇಸರಭಾವಿ ಕ್ರಾಸ್‌ ಹತ್ತಿರ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬೆಳಗಾವಿ, ಸಂಕೇಶ್ವರ, ರಬಕವಿ, ಬನಹಟ್ಟಿ, ಮಹಾಲಿಂಗಪುರ, ಮುಧೋಳ, ಜಮಖಂಡಿ ಊರುಗಳಿಂದ ಮಲ್ಲಯ್ಯನ ಕಂಬಿಯೊಂದಿಗೆ ಹೋಗುವ ಪಾದಯಾತ್ರಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಈ ಮಾರ್ಗವಾಗಿ 600 ಕಿಮೀ ದೂರದ ಶ್ರೀಶೈಲಕ್ಕೆ ಮರಗಾಲು ಕಟ್ಟಿಕೊಂಡು ಹೋಗುವ, ಮಲ್ಲಯ್ಯನ ಚಿಕ್ಕ ತೇರು ಎಳೆದುಕೊಂಡು ಹೊಗುವ ಮತ್ತು ಭಜನೆ ಮಾಡಿಕೊಂಡು ಪಾದಯಾತ್ರೆಯಲ್ಲಿ ಹೋಗುವ ಭಕ್ತರಿಗಾಗಿ ಕಳೆದ ೨೪ ವರ್ಷಗಳಿಂದ ಪ್ರಸಾದ ವ್ಯವಸ್ಥೆಯನ್ನು ಈ ದಂಪತಿ ಮಾಡುತ್ತಿದ್ದಾರೆ. ಪಾದಯಾತ್ರಿಗಳಿಗೆ ರೊಟ್ಟಿ, ಬದನಿಕಾಯಿ ಪಲ್ಯ, ಉದರ ಸಜ್ಜಕ, ಅನ್ನ, ಸಾರು ಮತ್ತು ಬಾಳೆಹಣ್ಣುಗಳನ್ನು ವಿತರಣೆ ಮಾಡಲಾಗುತ್ತಿದೆ. ಭಕ್ತರಿಗೆ ಸ್ನಾನಕ್ಕೆ ಬೀಸಿ ನೀರು, ಕುಡಿಯಲು ತಂಪಾದ ನೀರು, ಮಲಗಲು ಹಾಸಿಗೆ ವ್ಯವಸ್ಥೆ ಮಾಡಿದ್ದಾರೆ.