ಶೀಘ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ ಕಾಲೇಜು ಪ್ರಾರಂಭ

| Published : Feb 25 2025, 12:48 AM IST

ಶೀಘ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ ಕಾಲೇಜು ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಹೆಸರಿನಲ್ಲಿ ಸ್ವತಂತ್ರ ಪದವಿ ಪೂರ್ವ ಕಾಲೇಜು ನಿಪ್ಪಾಣಿ ನಗರದ ನಾಗನೂರಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಪ್ರಾಂಭವಾಗಲಿದೆ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕಳೆದ 35 ವರ್ಷಗಳಿಂದ ಸಹಕಾರ, ಶೈಕ್ಷಣಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಜೊಲ್ಲೆ ಗ್ರೂಪ್‌ನ ಸಂಸ್ಥಾಪಕರು ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಹೆಸರಿನಲ್ಲಿ ಸ್ವತಂತ್ರ ಪದವಿ ಪೂರ್ವ ಕಾಲೇಜು ನಿಪ್ಪಾಣಿ ನಗರದ ನಾಗನೂರಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಪ್ರಾಂಭವಾಗಲಿದೆ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.

ಯಕ್ಸಂಬಾ ಜೊಲ್ಲೆ ಸಭಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಿಪ್ಪಾಣಿ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಪ್ರಥಮ ವರ್ಷದ ದಾಖಲಾತಿಗೋಸ್ಕರ ನಡೆಸಿದ ಶಶಿಕಲಾ ಜೊಲ್ಲೆ ವಿದ್ಯಾರ್ಥಿ ವೇತನ ಪರೀಕ್ಷೆ 2025ರ ಫಲಿತಾಂಶ ಪ್ರಕಟಿಸಿ ಮಾತನಾಡಿದರು. 2025 ಜ.5ರಿಂದ ಫೆ.2ರವರೆಗೆ 4 ಹಂತಗಳಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿ, ಯಕ್ಸಂಬಾ, ಹುಕ್ಕೇರಿ, ಯಮಕನಮರಡಿ, ಕಾಗವಾಡ, ಅಥಣಿ, ರಾಯಬಾಗ ಮತ್ತು ಹಾರೂಗೇರಿ ಒಳಗೊಂಡು 8 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿವೇತನ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಈ ಪರೀಕ್ಷೆಯಲ್ಲಿ ಸುಮಾರು 3000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ತಿಳಿಸಿದರು.

ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ವೈಜ್ಞಾನಿಕ ಮತ್ತು ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸುವ ಧ್ಯೇಯದೊಂದಿಗೆ ಜೊಲ್ಲೆ ಗ್ರೂಪ್‌ನ ಸಂಸ್ಥಾಪಕರು ಹಾಗೂ ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ರವರ ಹೆಸರನ್ನೇ ಕಾಲೇಜಿಗೆ ಸೂಚಿಸುವುದರ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ಸಂಸ್ಥಾಪಕರು ಕಂಡ ಕನಸನ್ನು ನಮ್ಮ ಕಾಲೇಜು ಬರುವ ಶೈಕ್ಷಣಿಕ ವರ್ಷದಿಂದ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.

ಈ ಭಾಗದ ಪ್ರತಿಭಾವಂತ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವುದರ ಮೂಲಕ ಗುಣಾತ್ಮಕ ಶಿಕ್ಷಣ ಪ್ರೋತ್ಸಾಹಿಸುವುದಕ್ಕಾಗಿ ನಿಪ್ಪಾಣಿ ಶಾಸಕರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆಯವರು ಈ ಶಿಷ್ಯವೇತನಕ್ಕಾಗಿ ₹60 ಲಕ್ಷ ನೀಡಿದ್ದು. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಕನಸು ನನಸುಗೊಳಿಸಲು ಸಹಾಯ ಮಾಡಲಿದೆ ಎಂದರು.

ಮೌಲ್ಯಮಾಪನ ಪ್ರಕ್ರಿಯೆ ನಂತರ ಅತ್ಯುತ್ತಮ ಅಂಕ ಪಡೆದ ಅಗ್ರ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದ 20 ವಿದ್ಯಾರ್ಥಿಗಳು:

ಅಭಿನವ ಬೆನಾಡೆ ಶಿರಗುಪ್ಪಿ, ತನುಷ ವಡಗಾಂವೆ ನಿಪ್ಪಾಣಿ, ಅಮೃತ ಮುದಕಪ್ಪಗೋಳ ಬಸ್ತವಾಡ, ಪ್ರಣವಕುಮಾರ ಮಗದುಮ್ಮ ಅಕ್ಕಿವಾಟ, ಸಾಕ್ಷಿ ಇಚಲಕರಂಜಿ ಅಥಣಿ, ಪ್ರಸನ್ನ ಗುರವ ಸವದಿ, ಜೈನಾ ಚೌದರಿ ಯಮಕನಮರಡಿ, ಸಂಕೇತ ಮರಡಿ ಚಿಕಾಲಗುಡ್ಡ, ತನಿಸ್ಕಾ ಸಪಾಟೆ ನಿಪ್ಪಾಣಿ, ಸಮರ್ಥ ಯಶವಂತ ಬೋರಗಲ್ಲ, ಯಶವಂತ ನಿಕ್ಕಂ ಅಂಕಲಿ, ಆದಿತ್ಯಾ ಕರಾಡೆ ಚಿಕ್ಕೋಡಿ, ಉದಯ ಬಮ್ಮನ್ನವರ ರಾಯಬಾಗ, ಸಾಯಿ ಚವ್ಹಾಣ ನಿಪ್ಪಾಣಿ, ಚಿನ್ಮಯ ನಿಂಬಾಳ್ಕರ ಮಾಂಗನೂರ, ನಿತೇಶ ಬೆಳಸೆ, ಮೇಕಳಿ, ಕೃಷುನಾಥ ಬಾಗನೆ ಜೂಗುಳ, ಶುಭಂ ಸಾವಂತ ಮಾಂಜರಿ, ಪೂರ್ವಾ ಖೋತ ಬೆಡಕಿಹಾಳ, ನುಪುರ ಪಾಟೀಲ ಖಡಕಲಾಟ ರವರು ಆಯ್ಕೆಯಾಗಿದ್ದಾರೆ. ಶಶಿಕಲಾ ಜೊಲ್ಲೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲಿಯೇ ನೀಡಲಾಗುವುದು ಪೋಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ 9731309554ಗೆ ಕರೆ ಮಾಡಬಹುದು ಅಥವಾ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಿರಿಷ ಕೆರೂರ, ವಿಜಯ ರಾಹುತ್, ದೀಪಕ ಪಾಟೀಲ, ಎಂ.ಎ.ಪಾಟೀಲ ಇತರರಿದ್ದರು.