ಸಾರಾಂಶ
ನಿಪ್ಪಾಣಿ ಹಾಲಸಿದ್ದನಾಥ ಕಾರ್ಖಾನೆಯ 38ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ಹಾಗೂ ಕಾರ್ಖಾನೆ ಹಿತಚಿಂತಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 62ನೇ ಜನ್ಮದಿನವನ್ನು ಅ.8ರಂದು 9 ಗಂಟೆಗೆ ಸಂಭ್ರಮದಿಂದ ಆಚರಿಸಲಾಗುವುದು ಎಂದು ನಿಪ್ಪಾಣಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರಮನ್ ಮಲಗೊಂಡಾ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ನಿಪ್ಪಾಣಿ ಹಾಲಸಿದ್ದನಾಥ ಕಾರ್ಖಾನೆಯ 38ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ಹಾಗೂ ಕಾರ್ಖಾನೆ ಹಿತಚಿಂತಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 62ನೇ ಜನ್ಮದಿನವನ್ನು ಅ.8ರಂದು 9 ಗಂಟೆಗೆ ಸಂಭ್ರಮದಿಂದ ಆಚರಿಸಲಾಗುವುದು ಎಂದು ನಿಪ್ಪಾಣಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರಮನ್ ಮಲಗೊಂಡಾ ಪಾಟೀಲ ಹೇಳಿದರು.ಕಾರ್ಖಾನೆಯ ಸಭಾಗೃದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಚಿಕ್ಕೋಡಿ ಸಂಪಾದನ ಚರಮೂರ್ತಿ ಮಠದ ಸಂಪಾದನ ಸ್ವಾಮೀಜಿ, ನಿಪ್ಪಾಣಿಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಹಂಚಿನಾಳ(ಕೆ.ಎಸ್.)ನ ಮಹೇಶಾನಂದ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಗಣ್ಯರು ಉಪಸ್ಥಿತರಿರುವರು. ಕಾರ್ಖಾನೆಯ ವತಿಯಿಂದ ಜೊಲ್ಲೆಯವರ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜನ್ಮದಿನದ ಪ್ರಯುಕ್ತ ಬೀರೇಶ್ವರ ಕೋ-ಆಪರೇಟಿವ್ ಸಂಸ್ಥೆಯ 7 ಹೊಸ ಶಾಖೆಗಳಿಗೆ ಚಾಲನೆ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ, ತುಮಕೂರು ಜಿಲ್ಲೆಯ ಸಿರಾ, ಗೋವಾ ರಾಜ್ಯದ ಉತ್ತರ ಗೋವಾ ಜಿಲ್ಲೆಯ ವಲ್‌ಪೋಯಿ(ಸತ್ತಾರಿ), ದಕ್ಷಿಣ ಗೋವಾ ಜಿಲ್ಲೆಯ ಸಾಲ್ಸಿಟ್ ಜಿಲ್ಲೆಯ ಮರ್ಗಾವೋ, ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಪಲೂಸ್ ಮತ್ತು ಸೋಲ್ಲಾಪುರ ಜಿಲ್ಲೆಯ ಸೋಲ್ಲಾಪುರ ಶಾಖೆಗಳು ಉದ್ಘಾಟನೆಗೊಳ್ಳಲಿವೆ. ಬೆಳಗಾವಿ ಜಿಲ್ಲೆಯ ತಾಲೂಕಿನ ಹುನ್ನರಗಿ, ಕೊಗನೊಳಿ, ಭೀವಶಿ, ಬೇಡಕಿಹಾಳ, ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ, ಕಾಗವಾಡ ತಾಲೂಕಿನ ಶಿರಗುಪ್ಪಿ(ಎ), ಐನಾಪುರ, ಕಾಗವಾಡ, ಧಾರವಾಡ ಜಿಲ್ಲೆಯ ಕಲಘಟಗಿ, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ನಾಂದಣಿ, ಕರವೀರಾ ತಾಲೂಕಿನ ಕನ್ಹೇರಿ ಶಾಖೆಗಳ ಕಟ್ಟಡ ನಿರ್ಮಾಣದ ಭೂಮಿಪೂಜೆ ನಡೆಯಲಿದೆ. ನಿವೃತ್ತ ಕಾರ್ಮಿಕರಿಗೆ ಪಿಂಚಣಿ ಮತ್ತು ಐದು ಕಾರ್ಮಿಕರಿಗೆ ಜೀವನ ಮಂಗಲ ಯೋಜನೆಯ ಪ್ರಮಾಣಪತ್ರಗಳ ವಿತರಣೆ ನಡೆಯಲಿದೆ ಎಂದರು.ಉಪಾಧ್ಯಕ್ಷ ಪವನಕುಮಾರ ಪಾಟೀಲ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ರಾಮಗೊಂಡಾ ಪಾಟೀಲ, ಜಯವಂತ ಭಾಟಲೆ, ರಾಜು ಗುಂದೇಶಾ, ಪ್ರಕಾಶ ಶಿಂಧೆ, ಸಮಿತ ಸಾಸನೆ, ರಮೇಶ ಪಾಟೀಲ, ಮಹಾಲಿಂಗ ಕೋಠಿವಾಲೆ, ಸುನೀಲ ಪಾಟೀಲ, ಶ್ರೀಕಾಂತ ಕಣಗಲಿ, ಮಿಥುನ ಪಾಟೀಲ ಇತರರು ಉಪಸ್ಥಿತರಿದ್ದರು.