ಕನ್ನಡಪ್ರಭ ವಾರ್ತೆ ಮೈಸೂರುಮಕ್ಕಳ ಶಿಕ್ಷಣಕ್ಕೆ ಉತ್ತಮ ವಾತಾವರಣ ನಿರ್ಮಿಸುವ ಉದ್ದೇಶದಿಂದ ಮೈಸೂರು ಲೇಡೀಸ್ ಸರ್ಕಲ್ 141 ಹಾಗೂ ಮೈಸೂರು ರೌಂಡ್ ಟೇಬಲ್ 256 ನಿಂದ ನೂತನವಾಗಿ ನವೀಕರಿಸಲಾದ ಮಾಂಟೆಸ್ಸರಿ ಶೈಲಿಯ ತರಗತಿ ಕೊಠಡಿಯ ಉದ್ಘಾಟನಾ ಸಮಾರಂಭವು ಶನಿವಾರ ಕುವೆಂಪುನಗರದಲ್ಲಿರುವ ವಾಸವಿ ವಿದ್ಯಾನಿಕೇತನದಲ್ಲಿ ನಡೆಯಿತು.ಮೈಸೂರು ಲೇಡೀಸ್ ಸರ್ಕಲ್ 141ರ 10ನೇ ಚಾರ್ಟರ್ ವಾರ್ಷಿಕೋತ್ಸವದ ಅಂಗವಾಗಿ, 41 ಇಆರ್.ಎಸ್. ಕ್ಲಬ್ 277ರ ಸಹಯೋಗದಲ್ಲಿ ಈ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಿಕ್ಷಣ, ಸಬಲೀಕರಣ ಮತ್ತು ಪ್ರೋತ್ಸಾಹ ಎಂಬ ಧ್ಯೇಯದೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಮುಖ್ಯಅತಿಥಿಯಾಗಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಭಾಗವಹಿಸಿ ನೂತನ ತರಗತಿ ಕೊಠಡಿ ಉದ್ಘಾಟಿಸಿದರು.ಮಕ್ಕಳ ಮನೋವಿಕಾಸ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಾಂಟೆಸ್ಸರಿ ಮಾದರಿಯಲ್ಲಿ ತರಗತಿ ಕೊಠಡಿಯನ್ನು ವಿನ್ಯಾಸಗೊಳಿಸಲಾಗಿದೆ. ಮಕ್ಕಳಿಗೆ ಅನುಕೂಲಕರವಾದ ಕುರ್ಚಿ-ಮೇಜುಗಳು, ಕಲಿಕಾ ಸಾಮಗ್ರಿಗಳು, ಆಟಿಕೆಗಳು ಹಾಗೂ ಆಕರ್ಷಕ ಶೈಕ್ಷಣಿಕ ವಾತಾವರಣವನ್ನು ಅಳವಡಿಸಲಾಗಿದೆ. ಉತ್ತಮ ಕಲಿಕಾ ವಾತಾವರಣವು ಮಕ್ಕಳ ಭವಿಷ್ಯವನ್ನು ಬೆಳಗಿಸಬಲ್ಲದು ಎಂಬ ಸಂದೇಶವನ್ನು ಈ ಯೋಜನೆ ಸಾರುತ್ತದೆ.ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಸದಸ್ಯರು ಹಾಗೂ ಶಿಕ್ಷಣಾಭಿಮಾನಿಗಳು ಭಾಗವಹಿಸಿದ್ದರು.ಮೈಸೂರು ರೌಂಡ್ ಟೇಬಲ್ 256ರ ಅಧ್ಯಕ್ಷ ಶಿವ ಸ್ವರೂಪ್ ಉರ್ಸ್, ಮೈಸೂರು ಲೇಡೀಸ್ ಸರ್ಕಲ್ 141ರ ಅಧ್ಯಕ್ಷೆ ಸಿ.ಆರ್. ಪ್ರತಿಭಾ ನಾಯಕ್ ಹಾಗೂ 41 ಇಆರ್.ಎಸ್ ಕ್ಲಬ್ 277ರ ಅಧ್ಯಕ್ಷ 41 ಇಆರ್ ಹರ್ಷ ಮೇಲಂತ ಇದ್ದರು.