ಸಾರಾಂಶ
ಕಿನ್ನಿಗೋಳಿಯ ರೋಟರಿ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ್ ಪಿ. ಶೆಟ್ಟಿಗಾರ್ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಿನ್ನಿಗೋಳಿಯ ರೋಟರಿ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ್ ಪಿ. ಶೆಟ್ಟಿಗಾರ್ ವಹಿಸಿದ್ದರು. ಧನಂಜಯ್ ಶೆಟ್ಟಿಗಾರ್ ದುಬೈ, ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ ಡಾ.ಹರಿಪ್ರಸಾದ್ ಶೆಟ್ಟಿ, ಡಾ.ನಿಹಾಲ್ ಜ್ಸೇವಿಯೆರ್ ಪಿಂಟೋ, ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಅಪರ್ಣ, ಡಾ.ಗ್ರೀಷ್ಮ ರಾವ್ ಯು.ಬಿ., ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ವಿಲಿಯಂ ಸಿಕ್ವೇರ, ಕೋಶಾಧಿಕಾರಿ ಶರತ್ ಶೆಟ್ಟಿ, ಉಪಾಧ್ಯಕ್ಷ ಶೇಷಾರಾಮ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಸದಾಶಿವ ನಾಯಕ್, ರೋಟರಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ತ್ಯಾಗರಾಜ್ ಆಚಾರ್ಯ, ಟಿ.ಎಚ್.ಮಯ್ಯದಿ, ಸ್ವರಾಜ್ ಶೆಟ್ಟಿ, ಸತೀಶಚಂದ್ರ ಹೆಗ್ಡೆ, ಶೈಲಾ ಸಿಕ್ವೆರ, ವಿಲಿಯಂ ಕಾರ್ಡೋಜಾ, ಹರೀಶ್ ಶೆಟ್ಟಿ, ಶಾಲಾ ನಾಯಕಿ ಶ್ರಾವ್ಯ ಉಪಾಧ್ಯಾಯ, ಶಾಲಾ ನಾಯಕ ನಮಿತ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಸುನಿತಾ ಗುರುರಾಜ್ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ವಿಲಿಯಮ್ ಕಾರ್ಡೋಜಾ ಸ್ವಾಗತಿಸಿದರು. ಗಂಗಾದೇವಿ ವಂದಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.