ಭಾನುವಾರ ಬೆಳಗ್ಗೆ ೮ ಗಂಟೆಗೆ ದೇವಾಲಯದಿಂದ ಗಂಗೆ ತರುವ ಸ್ಥಳಕ್ಕೆ ತೆರಳಿ ಸುಮಂಗಲಿಯರಿಂದ ಗಂಗಾಪೂಜೆ, ಬಾಗಿನ ಅರ್ಪಣೆ ಹಾಗೂ ಮಹಾಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಳಿಕ ೧೦೮ ಅಗೋಧಕ ಕಳಶಗಳೊಂದಿಗೆ ಗ್ರಾಮ ಪ್ರದಕ್ಷಿಣೆ ನಡೆಸಿ ದೇವಾಲಯಕ್ಕೆ ತರಲಾಗುವುದು. ನಂತರ ಶ್ರೀ ಸ್ವಾಮಿಯವರಿಗೆ ಮಹಾ ರುದ್ರಾಭಿಷೇಕ, ಗಣಪತಿ ಹೋಮ, ನವಗ್ರಹ, ಮೃತ್ಯುಂಜಯ, ಶನೈಶ್ಚರ, ಪುರುಷಸೂಕ್ತ, ಸಂತಾನಗೋಪಾಲ, ಧನ್ವಂತರಿ, ಸುದರ್ಶನ, ಶ್ರೀಸೂಕ್ತ, ದುರ್ಗಾ ಹಾಗೂ ಗಾಯತ್ರಿ ಹೋಮಗಳು ನೆರವೇರಲಿವೆ ಎಂದರು. ಸಮಸ್ತ ಭಕ್ತರ ಸಮ್ಮುಖದಲ್ಲಿ ಕುಂಭಾಭಿಷೇಕ ಮಹಾಪೂರ್ಣಾಹುತಿ, ಕದಳಿ ಛೇದನ, ರಾಜೋಪಚಾರ, ರಾಷ್ಟ್ರಾಶೀರ್ವಚನ, ಮಹಾ ನೈವೇದ್ಯ, ಮಹಾಮಂಗಳಾರತಿ, ಮಂತ್ರಪುಷ್ಪ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಹಾಸನ
ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀಕ್ಷೇತ್ರ ಧರ್ಮಧ್ವಜ ಪ್ರತಿಷ್ಠಾನ ಶ್ರೀ ಉದ್ಭವ ಶನೈಶ್ಚರಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ೪೨ನೇ ವರ್ಷದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವನ್ನು ಫೆಬ್ರವರಿ ೮ರಂದು ಭಕ್ತಿಭಾವ ಮತ್ತು ವೈದಿಕ ವೈಭವದೊಂದಿಗೆ ಆಯೋಜಿಸಲಾಗಿದೆ ಎಂದು ಗ್ರಾಮದ ಅನಿಲ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಮಹಾಶಿವರಾತ್ರಿ ಜಾತ್ರಾ ಮಹೋತ್ಸವವನ್ನು ಫೆಬ್ರವರಿ ೮ರಂದು ಆಯೋಜಿಸಲಾಗಿದೆ. ಜಗದ್ಗುರು ಶ್ರೀ ಶಂಕರಾಚಾರ್ಯ ದಕ್ಷಿಣಾಮ್ನಯ ಶಾರದಾಪೀಠಾಧ್ಯಕ್ಷರಾದ ಜಗದ್ಗುರು ಭಾರತೀತೀರ್ಥ ಮಹಾಸನ್ನಿಧಾನಂಗಳವರ ಹಾಗೂ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರ ಕೃಪಾಶೀರ್ವಾದಗಳೊಂದಿಗೆ, ಶ್ರೀ ವಿದ್ಯಾನಂದ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಈ ಧಾರ್ಮಿಕ ಮಹೋತ್ಸವ ನಡೆಯಲಿದೆ.ಫೆ.೮ರ ಭಾನುವಾರ ಬೆಳಗ್ಗೆ ೮ ಗಂಟೆಗೆ ದೇವಾಲಯದಿಂದ ಗಂಗೆ ತರುವ ಸ್ಥಳಕ್ಕೆ ತೆರಳಿ ಸುಮಂಗಲಿಯರಿಂದ ಗಂಗಾಪೂಜೆ, ಬಾಗಿನ ಅರ್ಪಣೆ ಹಾಗೂ ಮಹಾಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಳಿಕ ೧೦೮ ಅಗೋಧಕ ಕಳಶಗಳೊಂದಿಗೆ ಗ್ರಾಮ ಪ್ರದಕ್ಷಿಣೆ ನಡೆಸಿ ದೇವಾಲಯಕ್ಕೆ ತರಲಾಗುವುದು. ನಂತರ ಶ್ರೀ ಸ್ವಾಮಿಯವರಿಗೆ ಮಹಾ ರುದ್ರಾಭಿಷೇಕ, ಗಣಪತಿ ಹೋಮ, ನವಗ್ರಹ, ಮೃತ್ಯುಂಜಯ, ಶನೈಶ್ಚರ, ಪುರುಷಸೂಕ್ತ, ಸಂತಾನಗೋಪಾಲ, ಧನ್ವಂತರಿ, ಸುದರ್ಶನ, ಶ್ರೀಸೂಕ್ತ, ದುರ್ಗಾ ಹಾಗೂ ಗಾಯತ್ರಿ ಹೋಮಗಳು ನೆರವೇರಲಿವೆ ಎಂದರು. ಸಮಸ್ತ ಭಕ್ತರ ಸಮ್ಮುಖದಲ್ಲಿ ಕುಂಭಾಭಿಷೇಕ ಮಹಾಪೂರ್ಣಾಹುತಿ, ಕದಳಿ ಛೇದನ, ರಾಜೋಪಚಾರ, ರಾಷ್ಟ್ರಾಶೀರ್ವಚನ, ಮಹಾ ನೈವೇದ್ಯ, ಮಹಾಮಂಗಳಾರತಿ, ಮಂತ್ರಪುಷ್ಪ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಈ ಸಂದರ್ಭದಲ್ಲಿ ಶ್ರೀ ಸ್ವಾಮಿಯವರಿಗೆ ನೂತನ ರಜತ ಕಿರೀಟ ಧಾರಣೆ ಕಾರ್ಯಕ್ರಮವೂ ನಡೆಯಲಿದೆ. ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದವೂ ಲಭ್ಯವಾಗಲಿದೆ. ಮಧ್ಯಾಹ್ನ ೧೨ ಗಂಟೆಗೆ ಧಾರ್ಮಿಕ ಸಭೆ ಹಾಗೂ ಮಧ್ಯಾಹ್ನ ೧ ಗಂಟೆಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಪ್ರತಿಷ್ಠಾಪನಾ ಆಚಾರ್ಯರಾದ ಸರ್ವಸಾಧಕಂ ಶ್ರೀ ವಿಶ್ವೇಶ್ ಶಿವಂ ಸ್ವಾಮಿಗಳು ಹಾಗೂ ತಂಡದವರು (ವೆಲ್ಲೂರು, ತಮಿಳುನಾಡು) ವೈದಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಸಕರಾದ ಶ್ರೀ ಕೆ.ಎಂ. ಶಿವಲಿಂಗೇಗೌಡ ಅವರಿಗೆ “ಬರನಾಡಿನ ಭಗೀರಥ” ಎಂಬ ನಾಮಾಂಕಿತ ಬಿರುದು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ಹಂಗರಹಳ್ಳಿ ಬಸವಣ್ಣನವರು ಹಾಗೂ ಶ್ರೀ ಶೃಂಗೇರಿ ಶಾರದಾ ಪೀಠ, ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠದ ದೇವರ ವಿಶೇಷ ಆಗಮನ ಈ ಉತ್ಸವದ ಮಹತ್ವವನ್ನು ಹೆಚ್ಚಿಸಲಿದೆ. ಎಲ್ಲಾ ಭಕ್ತಾಧಿಗಳು ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ಉದ್ಭವ ಶನೈಶ್ಚರಸ್ವಾಮಿ ಹಾಗೂ ಶ್ರೀ ಆದಿಶಕ್ತಿ ಮೆಳೆಯಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಕ್ಷೇತ್ರ ಧರ್ಮಧ್ವಜ ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಉದಯಕುಮಾರ್, ಬಸವರಾಜು, ರಾಜೇಶ್, ಪೃಥ್ವಿರಾಜು, ದೇವರಾಜು ಇತರರು ಉಪಸ್ಥಿತರಿದ್ದರು.