ಸಾರಾಂಶ
ರಬಕವಿ-ಬನಹಟ್ಟಿ: ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ₹ 3 ಸಾವಿರ ಮೌಲ್ಯದ ಬಟ್ಟೆ ಖರೀದಿಸಿದ ಗ್ರಾಹಕರಿಗೆ ಆಯೋಜಿಸಿದ್ದ ಲಕ್ಕಿ ಡ್ರಾ ವಿಜೇತರನ್ನು ಸೋಮವಾರ ನಡೆದ ಸಮಾರಂಭದಲ್ಲಿ ಚೀಟಿ ಎತ್ತುವ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.
ರಬಕವಿ-ಬನಹಟ್ಟಿ: ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ₹ 3 ಸಾವಿರ ಮೌಲ್ಯದ ಬಟ್ಟೆ ಖರೀದಿಸಿದ ಗ್ರಾಹಕರಿಗೆ ಆಯೋಜಿಸಿದ್ದ ಲಕ್ಕಿ ಡ್ರಾ ವಿಜೇತರನ್ನು ಸೋಮವಾರ ನಡೆದ ಸಮಾರಂಭದಲ್ಲಿ ಚೀಟಿ ಎತ್ತುವ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು. ಪ್ರಥಮ ಬಹುಮಾನ ಕಾರು ಗೋಕಾಕ ತಾಲೂಕಿನ ದುಂಡಮಟ್ಟಿ ಗ್ರಾಮದ ಯಲ್ಲಪ್ಪ ಹೊರಟ್ಟಿ, ದ್ವಿತೀಯ ಬಹುಮಾನ ಮೋಟಾರ್ ಬೈಕ್ ಮುಧೋಳ ತಾಲೂಕಿನ ಮಾಲಾಪುರ ಗ್ರಾಮದ ಜಗದೀಶ ಮೆಳ್ಳಿಗೇರಿ ಪಾಲಾಗಿದೆ. ಉಳಿದ 25 ವಿವಿಧ ಬಹುಮಾನಗಳನ್ನು ಪಡೆದ ಗ್ರಾಹಕರ ಹೆಸರುಗಳನ್ನು ಚೀಟಿ ಎತ್ತುವ ಮೂಲಕ ಘೋಷಿಸಲಾಯಿತು.
ಸಮಾರಂಭದಲ್ಲಿ ಎಂ.ಎಸ್.ಬದಾಮಿ, ವಜ್ರಕಾಂತ ಕಮತಗಿ, ನೀಲಕಂಠ ಮುತ್ತೂರ, ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ತೆಗ್ಗಿ, ಬಿ.ಡಿ.ನೇಮಗೌಡ, ಶಂಕರ ಮಲ್ಲಣ್ಣವರ, ಪ್ರಸನ್ನ, ಪ್ರವೀಣ, ಪ್ರದೀಪ ಹಜಾರೆ ಸೇರಿದಂತೆ ನೂರಾರು ಜನ ಗ್ರಾಹಕರು ಉಪಸ್ಥಿತರಿದ್ದರು.