ಸಾರಾಂಶ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ'''' ಗಳನ್ನು ಸಂಚಾಲಕಿ ರತ್ನಕಲಾ ಮುನ್ನೂರ್ ಘೋಷಣೆ ಮಾಡಿದ್ದು ಖ್ಯಾತ ಸಾಹಿತಿ, ದಾಸ ಸಾಹಿತ್ಯ ಚಿಂತಕರಾದ ಡಾ. ಸ್ವಾಮಿರಾವ ಕುಲಕರ್ಣಿ, ಕೃಷ್ಣ ನಾಯಕ್, ಡಾ. ಬಷೀರ್, ಸುಚಿತ್ರಾ ಸೇರಿದಂತೆ 10 ಸಾಹಿತಿಗಳ ಕೃತಿಗಳಿಗೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಸೇಡಂ ಪಂಚಲಿಂಗೇಶ್ವರ ಮಂದಿರದಲ್ಲಿ 26ರಂದು `ಅಮ್ಮ ಪ್ರಶಸ್ತಿ'' ಪ್ರದಾನಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ'''''''' ಗಳನ್ನು ಸಂಚಾಲಕಿ ರತ್ನಕಲಾ ಮುನ್ನೂರ್ ಘೋಷಣೆ ಮಾಡಿದ್ದು ಖ್ಯಾತ ಸಾಹಿತಿ, ದಾಸ ಸಾಹಿತ್ಯ ಚಿಂತಕರಾದ ಡಾ. ಸ್ವಾಮಿರಾವ ಕುಲಕರ್ಣಿ, ಕೃಷ್ಣ ನಾಯಕ್, ಡಾ. ಬಷೀರ್, ಸುಚಿತ್ರಾ ಸೇರಿದಂತೆ 10 ಸಾಹಿತಿಗಳ ಕೃತಿಗಳಿಗೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆ.ಪಿ. ಮೃತ್ಯುಂಜಯ ಅವರ `ಉಳಿದುಬಿಡು ಒಂದು ಬಿಂದುವಾಗಿ'''''''' ಮತ್ತು ಚೈತ್ರಾ ಶಿವಯೋಗಿಮಠ `ಪೆಟ್ರಿಕೋರ್'''''''' (ಕಾವ್ಯ), ದಯಾ ಗಂಗನಘಟ್ಟ `ಉಪ್ಪುಚ್ಚಿ ಮುಳ್ಳು'''''''' ಮತ್ತು ಕೃಷ್ಣನಾಯಕ `ಕಾಂತಾಮಣಿಯ ಕನಸುಗಳು'''''''' (ಕಥೆ), ಸಂತೋಷಕುಮಾರ ಮೆಹಂದಳೆ `ವೈಜಯಂತಿಪುರ'''''''' ಮತ್ತು ಡಾ.ಸಿ. ಚಂದ್ರಪ್ಪ `ಅಶೋಕ'''''''' (ಕಾದಂಬರಿ), ಡಾ.ಮಿರ್ಜಾ ಬಷೀರ್ `ಗಂಗೆ ಬಾರೆ ಗೌರಿ ಬಾರೆ'''''''' ಮತ್ತು ಸುಚಿತ್ರಾ ಹೆಗಡೆ `ಜಗವ ಸುತ್ತ'''''''' (ಸಂಕೀರ್ಣ), ನಾಗೇಶನಾಯಕ `ಕಾಡುವ ಕವಿತೆ (ವಿಮರ್ಶೆ) ಮತ್ತು ಡಾ.ಸ್ವಾಮಿರಾವ ಕುಲಕರ್ಣಿ `ದಾಸ ಸಾಹಿತ್ಯ: ದೃಷ್ಟಿ-ಸೃಷ್ಟಿ'''''''' ಕೃತಿಗಳನ್ನು 23ನೇ ವರ್ಷದ `ಅಮ್ಮ ಪ್ರಶಸ್ತಿ''''''''ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ 5000 ರು. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ಇದೇ ನ.26ರಂದು ಸಂಜೆ 5.30ಕ್ಕೆ ಸೇಡಮ್‍ನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ'''''''' ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.ಅಮ್ಮ ಪ್ರಶಸ್ತಿಗೆ 23ರ ವರ್ಷದ ಸಂಭ್ರಮ:
ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ `ಅಮ್ಮ ಪ್ರಶಸ್ತಿ''''''''ಗೆ ಈಗ 23 ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು `ಅಮ್ಮ ಪ್ರಶಸ್ತಿ''''''''ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ `ಅಮ್ಮ ಪ್ರಶಸ್ತಿ'''''''' ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.