ಮುಳವಾಡ ಟೋಲ್ ವಿರುದ್ಧ ಅನ್ನದಾತರ ಆಕ್ರೋಶ

| Published : Dec 07 2024, 12:30 AM IST

ಸಾರಾಂಶ

ವಿಜಯಪುರ: ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೇ ತಾಲೂಕಿನ ಮುಳವಾಡ ಬಳಿ ಟೋಲ್‌ ಪ್ಲಾಜಾವನ್ನು ಏಕಾಏಕಿ ಪ್ರಾರಂಭಿಸಿ ಟೋಲ್ ಸಂಗ್ರಹ ಮಾಡುತ್ತಿದೆ. ರೈಲ್ವೆ ಹಳಿಯ ಮೇಲೆ ನಿರ್ಮಿಸುತ್ತಿರುವ ಸೇತುವೆ ಸಂಪೂರ್ಣ ಮಾಡದೇ ಹಾಗೂ ಅಲ್ಲಿ ಮೂಲಸೌಲಭ್ಯಗಳನ್ನು ನೀಡಿದ ನಂತರವೇ ಟೊಲ್ ಸಂಗ್ರಹ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರೈಲ್ವೆ ಸೇತುವೆ ನಿರ್ಮಿಸದೇ ಟೊಲ್ ಸಂಗ್ರಹಿಸುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.

ಕೋಲಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಟೋಲ್ ಪ್ಲಾಜಾದಿಂದ ಸುತ್ತಮುತ್ತಲಿನ ಮುಳವಾಡ, ಮಲಘಾಣ, ಕಲಬುರಕಿ, ರೋಣಿಹಾಳ, ಕುಬಕಡ್ಡಿ, ದುಡ್ಯಾಳ, ಕಾರಜೋಳ, ತೋನಶ್ಯಾಳ, ಹೊನಗನಹಳ್ಳಿ, ಚಿಕ್ಕಆಸಂಗಿ, ಹಿರೇಆಸಂಗಿ, ಕೋಲ್ಹಾರ ಸೇರಿದಂತೆ ಎಲ್ಲಾ ವಾಹನ ಸವಾರರಿಗೆ ಉಚಿತವಾಗಿ ಹಾಗೂ ಶಾಶ್ವತವಾಗಿ ಪ್ರಯಾಣ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ಬಸು ನ್ಯಾಮಗೊಂಡ, ಸೋಮು ಪಟ್ಟಣಶೆಟ್ಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.