ಸಾರಾಂಶ
ಕಲಬುರಗಿ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದವರು ಜು.29ರ ಸೋಮವಾರ ಪತ್ರಿಕಾ ದಿನ ಆಚರಿಸುತ್ತಿದ್ದಾರೆ. ಈ ಸಂರ್ಭದಲ್ಲಿ ನಗರ ಹಾಗೂ ಜಿಲ್ಲೆಯ 37 ಮಂದಿ ಪತ್ರಕರ್ತರಿಗೆ ವಿವಿಧ ವಾರ್ಷಿಕ ಪುರಸ್ಕಾರಗಳನ್ನು ಸಂಘ ಘೋಷಿಸಿದ್ದು ಸೋಮವಾರವೇ ಪುರಸ್ಕಾರಗಳ ಪ್ರದಾನವೂ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದವರು ಜು.29ರ ಸೋಮವಾರ ಪತ್ರಿಕಾ ದಿನ ಆಚರಿಸುತ್ತಿದ್ದಾರೆ. ಈ ಸಂರ್ಭದಲ್ಲಿ ನಗರ ಹಾಗೂ ಜಿಲ್ಲೆಯ 37 ಮಂದಿ ಪತ್ರಕರ್ತರಿಗೆ ವಿವಿಧ ವಾರ್ಷಿಕ ಪುರಸ್ಕಾರಗಳನ್ನು ಸಂಘ ಘೋಷಿಸಿದ್ದು ಸೋಮವಾರವೇ ಪುರಸ್ಕಾರಗಳ ಪ್ರದಾನವೂ ನಡೆಯಲಿದೆ.ಸಂಘ ಕೊಡಮಾಡುವ ದಿ. ವಿಎನ್ ಕಾಗಲ್ಕರ್ ವಾರ್ಷಿಕ ಪ್ರಶಸ್ತಿಗೆ 2024 ನೇ ಸಾಲಿಗೆ ದಾಖಲೆಯ 6 ಜನ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಗಳ ಪತ್ರಕರ್ತರಾದ ಶಾಮಕುಮಾರ್ ಸಿಂಧೆ, ಬಿ.ವ್ಹಿ. ಚಕ್ರವರ್ತಿ, ಮಲ್ಲಿಕಾರ್ಜುನ ನೈಕೋಡಿ, ಡಾ. ಶಿವರಂಜನ್ ಸತ್ಯಂಪೇಟೆ, ಹಣಮಂತರಾವ ಭೈರಾಮಡಗಿ, ದೇವಯ್ಯ ಗುತ್ತೇದಾರ್, ಇವರೆಲ್ಲರೂ ಸಂಘದ ಪ್ರತಿಷ್ಠಿತ ದಿ. ವಿಎನ್ ಕಾಗಲ್ಕರ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.ಇದೇ ಮೊದಲ ಬಾರಿಗೆ ಸಂಘದಿಂದ ದೃಶ್ಯ ಮಾಧ್ಯಮ ವಿಶೇಷ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಇದಕ್ಕಾಗಿ ವಿದ್ಯುನ್ಮಾನ ಸುದ್ದಿ ವಾಹಿನಿಯ ರಾಜಶೇಖರಯ್ಯ ಹೊಕ್ರಾಣಿಮಠ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭದ ಇಬ್ಬರು ಸುದ್ದಿಗಾರರಿಗೆ ಪುರಸ್ಕಾರ:ಕಾನಿಪಸಂ ನೀಡುವ ಉತ್ತಮ ವರದಿಗಾರ ವಾರ್ಷಿಕ ಪ್ರಶಸ್ತಿಗಳಿಗೆ ಕನ್ನಡಪ್ರಭ ಪತ್ರಿಕೆಯ ಅಫಜಲ್ಪುರ ಸುದ್ದಿಗಾರ ಬಿಂದುಮಾಧವ ಮಣ್ಣೂರ, ಚಿತ್ತಾಪುರದ ರವಿಶಂಕರ ಬುರ್ಲಿ ಸೇರಿದಂತೆ 30 ಪತ್ರಕರ್ತರು ಆಯ್ಕೆಯಾಗಿದ್ದಾರೆ.
ಪತ್ರಕರ್ತರಾದ ಶರಣಬಸಪ್ಪ ಜಿಡಗಾ, ಬಸವರಾಜ್ ಚಿನಿವಾರ್, ವಿ.ವಿ. ದೇಸಾಯಿ, ಶ್ರೀಮತಿ ನಾಗಲಾಂಬಿಕಾ ರವಿ ಹೊನ್ನಾ, ಬಿಂದು ಮಾಧವರಾವ್ ಅಫಜಲಪುರ, ಭಜರಂಗಿ ನಿಂಬರಕರ್, ಪುರುಷೋತ್ತಮ ಕುಲಕರ್ಣಿ, ಶ್ರೀಮತಿ ಸುವರ್ಣಾ ಶಿವಲಿಂಗಪ್ಪ ದೊಡ್ಡಮನಿ, ರಾಘವೇಂದ್ರ ಶರ್ಮಾ, ರಾಜು ದೇಶಮುಖ, ಶಾಂತಪ್ಪ ಕೋರೆ, ರವಿಶಂಕರ್ ಬುರ್ಲಿ, ವಿಜಯೇಂದ್ರ ಕುಲಕರ್ಣಿ, ರಾಚಪ್ಪ ಜಂಬಗಿ, ಈರಣ್ಣ ವಗ್ಗೆ, ಪ್ರಕಾಶ್ ದೊರೆ, ಸರ್ಫರಾಜ್, ವಿಶ್ವರಾಧ್ಯ ಹಂಗನಳ್ಳಿ, ಮೊಹ್ಮದ್ ಸಲಿಮುದ್ದೀನ್, ಕೃಷ್ಣ ಕುಲಕರ್ಣಿ, ಅಕ್ರಂ ಪಾಶಾ, ರವಿ ಜಾಲವಾದಿ, ಶೇಖ್ ಬಾಬಾ, ದೇವಿಂದ್ರಪ್ಪ ಜಡಿ, ಲಿಂಗರಾಜ್ ಸ್ವಾಮಿ, ಸುಧೀರ್ ಬಿರಾದಾರ್, ಮಲ್ಲಿಕಾರ್ಜುನ್ ಯಾದಗಿರಿ, ಶಾಮಸುಂದರ್ ಕುಲಕರ್ಣಿ, ಸುರೇಶ್ ಬಡಿಗೇರ್, ಶರಣಪ್ಪ ಎಳ್ಳಿ ಇವರಲ್ಲರು ಸಂಘದ ವಾರ್ಷಿಕ ಪುರಸ್ಕಾರ ಪಡೆಯಲಿದ್ದಾರೆ.