ಸಮರ್ಥ ಕನ್ನಡಿಗ ಸಂಸ್ಥೆಯಿಂದ 10 ಮಂದಿಗೆ ವಾರ್ಷಿಕ ಪ್ರಶಸ್ತಿ

| Published : Oct 30 2023, 12:30 AM IST

ಸಮರ್ಥ ಕನ್ನಡಿಗ ಸಂಸ್ಥೆಯಿಂದ 10 ಮಂದಿಗೆ ವಾರ್ಷಿಕ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿಯ ಓಂಕಾರ ಸದನದಲ್ಲಿ ನ.5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸಮರ್ಥ ಕನ್ನಡಿಗರು ಸಂಸ್ಥೆಯಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದಿಂದ ಈ ಬಾರಿ 10 ಮಂದಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮೀ ತಿಳಿಸಿದ್ದಾರೆ. ಮಡಿಕೇರಿಯ ಓಂಕಾರ ಸದನದಲ್ಲಿ ನ.5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸಮರ್ಥ ಕನ್ನಡಿಗರು ಸಂಸ್ಥೆಯಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 3 ಗಂಟೆಗೆ ಸಾಧಕರಿಗೆ ಸಮರ್ಥ ಕನ್ನಡಿಗರು ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಾರಿ ಸಮರ್ಥ ಕನ್ನಡಿಗರು ಸಂಸ್ಥೆಯ ಪುರಸ್ಕಾರಕ್ಕೆ ಪಾತ್ರರಾದವರು: ಡಾ.ಕೆ.ಬಿ.ಸೂರ್ಯಕುಮಾರ್ (ವೈದ್ಯಕೀಯ), ಕುಂತಿ ಬೋಪಯ್ಯ (ಶಿಕ್ಷಣ), ಎಂ.ಎನ್.ಚಂದ್ರಮೋಹನ್ (ಪರಿಸರ ), ಎಚ್.ಎಸ್.ತಿಮ್ಮಪ್ಪಯ್ಯ (ಕೃಷಿ), ಸ್ಮಿತಾ ಅಮೃತರಾಜ್ (ಸಾಹಿತ್ಯ), ಬೊಳ್ಳಜಿರ ಅಯ್ಯಪ್ಪ (ಪ್ರಕಾಶನ), ಲಕ್ಷ್ಮೀಶ್ (ಮಾಧ್ಯಮ ಛಾಯಾಗ್ರಹಣ), ಪ್ರೀತು ಕೖಷ್ಣ (ನೃತ್ಯ), ಲಕ್ಷ್ಮೀ ಬೆಂಗಳೂರು (ಸಮಾಜಸೇವೆ), ಧೃತಿ ಪೂಜಾರಿ (ಬಾಲ ಪ್ರತಿಭೆ). ಸಮರ್ಥ ಕನ್ನಡಿಗರು ಸಂಸ್ಥೆ ಆಯೋಜಿಸಿದ್ದ ಗಾನ ಹೊನಲು ಹಾಗೂ ಕುಣಿಯೋಣು ಬಾರಾ ಸ್ಪರ್ಧೆಯ ವಿಜೇತರು: ಸಮರ್ಥ ಕನ್ನಡಿಗರು ಸಂಸ್ಥೆ ನಡೆಸಿದ ಆನ್ಲೈನ್ ವೈಯಕ್ತಿಕ ಗಾಯನ ಸ್ಪರ್ಧೆಯಲ್ಲಿ ಪುಟಾಣಿಗಳ ವಿಭಾಗದಲ್ಲಿ ಭಾಗವಹಿಸಿದ ಆದ್ಯ ವಿ., ಶಾಖ್ಯ ಬಿ., ಚಿರಾಗ್ವಿ, ಮಿನುಗು, ಅಪೇಕ್ಷಾ ಭಾರದ್ವಾಜ್, ಬೌಶ್ವಿಕ್ ದರ್ಶ ಭೋಜಮ್ಮ, ಜನ್ಯ ಡಿ.ಎನ್. ಬಹುಮಾನ ವಿಜೇತರಾಗಿದ್ದಾರೆ. ಒಂದನೇ ವಿಭಾಗದಲ್ಲಿ ಸ್ಕಂದ ಮಧುಕರ್ ಪ್ರಥಮ, ಸುಮೇಧಾ ರಾವ್ ದ್ವಿತೀಯ, ಲೇಖನ ತೃತೀಯ ಸ್ಥಾನ ಪಡೆದಿದ್ದಾರೆ. ಎರಡನೇ ವಿಭಾಗದಲ್ಲಿ ಗೌರಿ ಎಸ್. ಕಾಂಚನ್ ಉಡುಪಿ ಪ್ರಥಮ, ಸಪ್ನಾ ಮಧುಕರ್ ದ್ವಿತೀಯ, ಅನೂಷ ವಿರಾಜಪೇಟೆ ಹಾಗೂ ಬಾಳೆಯಡ ಬಿಷನ್ ಬಿದ್ದಪ್ಪ ತೃತೀಯ ಸ್ಥಾನ ಪಡೆದಿದ್ದಾರೆ. ಮೂರನೇ ವಿಭಾಗದಲ್ಲಿ ವಿ.ಟಿ. ಶ್ರೀನಿವಾಸ್ ಗೋಣಿಕೊಪ್ಪ ಪ್ರಥಮ, ಅರ್ಪಿತಾ ಎಸ್. ಭಟ್ ಬೆಂಗಳೂರು ದ್ವಿತೀಯ, ವಿದ್ಯಾ ಜಗದೀಶ್ ಕಿರುಗೂರು ಮತ್ತು ತನ್ವಿತಾ ಶೆಟ್ಟಿ ಸೋಮವಾರಪೇಟೆ ತೃತೀಯ ಬಹುಮಾನ ಗಳಿಸಿದ್ದಾರೆ. ನೃತ್ಯ ಸ್ಪರ್ಧೆ: ಒಂದನೇ ವಿಭಾಗದಲ್ಲಿ ಭವಿಷ್ಯ ಎಂ.ಆರ್. ಮದೆ ಪ್ರಥಮ, ಹಂಸಿಕಾ ಎನ್.ಜೆ. ಮಡಿಕೇರಿ ದ್ವಿತೀಯ, ನಯನ ಮಡಿಕೇರಿ ತೃತೀಯ. ಎರಡನೇ ವಿಭಾಗದಲ್ಲಿ ಸುಮೇಧಾ ರಾವ್ ಪ್ರಥಮ, ನಿಹಾರಿಕ ಜ್ಞಾನ ಜ್ಯೋತಿ ದ್ವಿತೀಯ, ಕೀರ್ತನ ತೃತೀಯ ಬಹುಮಾನ ಗಳಿಸಿದ್ದಾರೆ. ಮೂರನೇ ವಿಭಾಗದಲ್ಲಿ ಅನುಕ್ತಾ ಕೆ. ಮಂಗಳೂರು ಪ್ರಥಮ, ಭೂಮಿಕಾ ಯು.ಆರ್. ಭಟ್ ದ್ವಿತೀಯ, ದುಂದುಭಿ ತೃತೀಯ ಬಹುಮಾನ ಗಳಿಸಿದ್ದಾರೆ ಎಂದು ಸಂಚಾಲಕಿ ಕೆ.ಜಯಲಕ್ಷ್ಮೀ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರ: ಮಡಿಕೇರಿಯ ಓಂಕಾರ ಸದನದಲ್ಲಿ ನ.5ರಂದು ಬೆಳಗ್ಗೆ 10 ಗಂಟೆಗೆ ಕನ್ನಡ ಹಬ್ಬ-ನಿಮ್ಮ ಪ್ರತಿಭೆ ನಮ್ಮ ವೇದಿಕೆ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಕಂಜರ್ಪಣೆ ಬಾಲಸುಬ್ರಹ್ಮಣ್ಯ ಉದ್ಘಾಟಿಸಲಿದ್ದಾರೆ. ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು, ಪ್ರಧಾನ ಸಂಚಾಲಕ ಆನಂದ ದಗ್ಗನಹಳ್ಳಿ, ಮುಂಬೈನ ಲೇಖಕಿ ಜಯಂತಿ ಸಿ. ರಾವ್, ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮೀ ಪಾಲ್ಗೊಳ್ಳಲಿದ್ದಾರೆ. ಸಂಜೆ 3 ಗಂಟೆಗೆ ನಡೆಯುವ ಸಾಧಕರಿಗೆ ಸನ್ಮಾನ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮಲ್ಲಿ ಸಾಧಕರಿಗೆ ವಾರ್ಷಿಕ ಪ್ರಶಸ್ತಿಯನ್ನು ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ, ಅಂಕಣಕಾರ ಆರ್.ಕೆ.ಬಾಲಚಂದ್ರ ನೆರವೇರಿಸಲಿದ್ದಾರೆ. ಉದ್ಯಮಿ ಕೆ.ದಾಮೋದರ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಸಮಾಜಸೇವಕಿ ಕಲ್ಮಾಡಂಡ ಶಶಿಮೊಣ್ಣಪ್ಪ, ಡಾ. ಅನುಶ್ರಿ ಅನಂತಶಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.