ಗಂಗೊಳ್ಳಿ ಅಂಬೇಡ್ಕರ್ ಯುವಕ - ಯುವತಿ ಮಂಡಲಗಳ ವಾರ್ಷಿಕೋತ್ಸವ

| Published : Apr 21 2025, 12:58 AM IST

ಗಂಗೊಳ್ಳಿ ಅಂಬೇಡ್ಕರ್ ಯುವಕ - ಯುವತಿ ಮಂಡಲಗಳ ವಾರ್ಷಿಕೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗೊಳ್ಳಿಯ ಡಾ. ಬಿ. ಆರ್. ಅಂಬೇಡ್ಕರ್ ಯುವಕ ಮಂಡಲ ಇದರ 38ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಇವುಗಳ 32ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಖಾರ್ವಿ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಬೈಂದೂರು

ಮುಖ್ಯ ಅತಿಥಿ ಕುಂದಾಪುರ ಆದರ್ಶ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾಕ್ಟರ್ ಆದರ್ಶ ಹೆಬ್ಬಾರ್ ಅವರು ಮಾತನಾಡಿ ಎಲ್ಲಾ ಅನುಕೂಲಗಳ ಜೊತೆ ಜೊತೆಗೆ ಸಾಧನೆಗೈಯುವುದಕ್ಕಿಂತ ಬಡತನವನ್ನು ಮೆಟ್ಟಿನಿಂತು ಕಷ್ಟಗಳನ್ನು ಎದುರಿಸಿ ಸಾಧಿಸಿ ತೋರಿಸುವುದೇ ನಿಜವಾದ ಗೆಲುವು ಎಂದು ಹೇಳಿ ಸಂಘದ ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು.ಉಡುಪಿ ನಗರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಜಯಕರ್ ಐರೋಡಿ ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ ವಿನಾಯಕ ಪೈ ಅವರು ಶುಭ ಹಾರೈಸಿದರು. ಯುವತಿ ಮಂಡಲದ ಅಧ್ಯಕ್ಷೆ ಸಹನಾ ಕೆ. ಮತ್ತು ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು.

ಈ ಸಂದರ್ಭ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿ ಪಿ ಶೇಷು, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ರಾಜು ಎನ್ ಮಾಸ್ತರ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರ ಹಿಮೇಶ್ ಅವರನ್ನು ಸನ್ಮಾನಿಸಲಾಯಿತು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಗದು ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು. 2024 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಒಂಬತ್ತನೇ ರಾಂಕ್ ಪಡೆದ ನೆಹ ಎಸ್ ಕೊಡೇರಿ ಅವರಿಗೆ ದಾನಿಗಳು ಕೂಡ ಮಾಡಿದ 5000 ನಗದು ಬಹುಮಾನವನ್ನು ನೀಡಲಾಯಿತು.ಯುವಕ ಮಂಡಲದ ಅಧ್ಯಕ್ಷ ನಾಗೇಶ ಸ್ವಾಗತಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್‌. ಜಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವತಿ ಮಂಡಲದ ಕಾರ್ಯದರ್ಶಿ ಸರಸ್ವತಿ ವರದಿ ವಾಚಿಸಿದರು. ರಿತೇಶ ಮತ್ತು ಸುಲೋಚನ ಬಹುಮಾನಿತರ ಪಟ್ಟಿ ಓದಿದರು. ಯುವಕ ಮಂಡಲದ ಕಾರ್ಯದರ್ಶಿ ರಂಜಿತ ವಂದಿಸಿದರು ಸಭಾ ಕಾರ್ಯಕ್ರಮದ ಬಳಿಕ ಕಲಾ ಕುಂಭ ಕುಳಾಯಿ, ಮಂಗಳೂರು ಇವರಿಂದ ಪರಮಾತ್ಮ ಪಂಜುರ್ಲಿ ನಾಟಕ ಪ್ರದರ್ಶನ ನಡೆಯಿತು.