ಸಾರಾಂಶ
ಕಾನ್ವೆಂಟ್ ಬಾಣೆಯ ಮುನೀಶ್ವರ, ಚೌಡೇಶ್ವರಿ ಹಾಗೂ ನಾಗ ಸಾನ್ನಿಧ್ಯಗಳ 56ನೇ ವಾರ್ಷಿಕೋತ್ಸವ ಸಂಪನ್ನಗೊಂಡಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣಕ್ಕೆ ಸಮೀಪದ ಕಾನ್ವೆಂಟ್ ಬಾಣೆಯ ಮುನೀಶ್ವರ, ಚೌಡೇಶ್ವರಿ ಹಾಗೂ ನಾಗ ಸಾನಿಧ್ಯಗಳ 56ನೇ ವಾರ್ಷಿಕೋತ್ಸವವು ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿ ಸಂಪನ್ನಗೊಂಡಿತು. ಮಂಗಳವಾರದಂದು ಜರುಗಿದ ಚೌಡಿ ಪೂಜೆಯ ನಂತರ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.---------------------------
ಕೆ.ನಿಡುಗಣೆಯಲ್ಲಿ ಅಂಗನವಾಡಿ, ಗ್ರಂಥಾಲಯ ಉದ್ಘಾಟನೆಮಡಿಕೇರಿ: ಕರ್ಣಂಗೇರಿ ಗ್ರಾಮದ ಚಂದ್ರಗಿರಿ ನಗರದಲ್ಲಿ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವತಿಯಿಂದ ಮರು ನಿರ್ಮಿಸಲಾಗಿರುವ ಅಂಗನವಾಡಿ ಮತ್ತು ಸಾರ್ವಜನಿಕ ಗ್ರಂಥಾಲಯದ ಕಟ್ಟಡವನ್ನು ಬುಧವಾರ ಪೂಜೆಯ ಮೂಲಕ ಉದ್ಘಾಟಿಸಲಾಯಿತು.ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ, ಸಿ.ಡಿ.ಪಿ.ಒ ಸವಿತಾ, ಅಭಿವೃದ್ಧಿ ಅಧಿಕಾರಿ ಅನಿತಾ, ಬಿಲ್ ಕಲೆಕ್ಟರ್ ಪ್ರಜೀವಿತ್, ಅಂಗನವಾಡಿ ಕಾರ್ಯಕರ್ತೆ ಸುಮಿತ್ರ, ಆಶಾ ಕಾರ್ಯಕರ್ತೆ ಅನಿತಾ ರೈ, ಗುತ್ತಿಗೆದಾರ ಕವನ್, ಗ್ರಾಮಸ್ಥರು, ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.ಇದೇ ಸಂದರ್ಭ ಕರ್ಣಂಗೇರಿ ಗ್ರಾಮದಲ್ಲಿ ಅಳವಡಿಸಲಾಗಿರುವ ಹೈಮಾಸ್ಟ್ ಬೀದಿ ದೀಪವನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು.